ಕರ್ನಾಟಕ

karnataka

ETV Bharat / sitara

ಈ ವಾರಾಂತ್ಯದಲ್ಲಿ ಆರಂಭವಾಗಲಿದೆ ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್ -2 - Comedy kiladigalu judge Jaggesh

ವೀಕ್ಷಕರು ಕಾತರಿಂದ ಕಾಯುತ್ತಿರುವ ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್​​​​​-2 ಇದೇ ವಾರಾಂತ್ಯದಲ್ಲಿ ನಿಮ್ಮನ್ನು ನಕ್ಕು ನಗಿಸಲು ಬರುತ್ತಿದೆ. ಬಹಳ ದಿನಗಳ ನಂತರ ಶೂಟಿಂಗ್ ಹಾಜರಾಗಿರುವುದಕ್ಕೆ ಜಡ್ಜ್​​ಗಳಾದ ಜಗ್ಗೇಶ್, ರಕ್ಷಿತ ಹಾಗೂ ಯೋಗರಾಜ್​ ಭಟ್ ಸಂತೋಷ ವ್ಯಕ್ತಪಡಿಸಿದ್ದಾರೆ.

Comedy Kiladigalu championship 2
ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್

By

Published : Sep 9, 2020, 2:41 PM IST

ನಿಮ್ಮನ್ನೆಲ್ಲಾ ನಕ್ಕು ನಲಿಸಲು ಕಾಮಿಡಿ ಕಿಲಾಡಿಗಳು ಮತ್ತೆ ಸಿದ್ಧವಾಗಿದೆ. ಈಗಾಗಲೇ ಜೀ ವಾಹಿನಿಯಲ್ಲಿ ಪ್ರೋಮೋ ಪ್ರಸಾರವಾಗುತ್ತಿದ್ದು ಮೆಚ್ಚಿನ ಕಾರ್ಯಕ್ರಮವನ್ನು ನೋಡಲು ವೀಕ್ಷಕರು ಕೂಡಾ ಕಾಯುತ್ತಿದ್ದಾರೆ.

ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್​​​​​-2 ಇದೇ 12 ರಿಂದ ಪ್ರತಿ ವಾರಾಂತ್ಯ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ಕಾಮಿಡಿ ಕಿಲಾಡಿಗಳು ಚಾಂಪಿಯನ್​​​​ ಶಿಪ್ ಸೀಸನ್ 2 ಶೋ ಆರಂಭವಾಗುತ್ತಿರುವುದಕ್ಕೆ ನಟ ಜಗ್ಗೇಶ್ ಕೂಡಾ ಸಂತೋಷ ವ್ಯಕ್ತಪಡಿಸಿದ್ದರು. ಜೊತೆಗೆ ರಕ್ಷಿತ ಕೂಡಾ ಪ್ರತಿಕ್ರಿಯಿಸಿ "ದೊಡ್ಡ ವಿರಾಮದ ಬಳಿಕ ಶೂಟಿಂಗ್​​​​​​​​​​​​​​​​​ನಲ್ಲಿ ಭಾಗವಹಿಸುತ್ತಿರುವುದು ಮಜಾ ಎನಿಸುತ್ತಿದೆ ಎಂದು ಹೇಳಿದ್ದರು. ಅಲ್ಲದೆ, ಸೆಟ್​​​​ನಲ್ಲಿ 100 ಕ್ಕೂ ಹೆಚ್ಚು ಮಂದಿ ಇದ್ದಾರೆ. ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ. ಕೊರೊನಾ ಬಾರದಂತೆ ಜಾಗ್ರತೆ ವಹಿಸಿದ್ದೇವೆ. ನಾವು ತೀರ್ಪುಗಾರರಾದ ಕಾರಣ ಮಾಸ್ಕ್ ಧರಿಸಿಲ್ಲ" ಎಂದಿದ್ದ.

ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್

ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್ 2 ರಲ್ಲಿ ಮೂರು ಸೀಸನ್​​​​​​​​​​​​​​​​​ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಒಟ್ಟಿನಲ್ಲಿ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ಮಹಾಪೂರ ದೊರೆಯುವುದಂತು ಗ್ಯಾರಂಟಿ.

ABOUT THE AUTHOR

...view details