ಕರ್ನಾಟಕ

karnataka

ETV Bharat / sitara

ಸಾವಿನ ಸುದ್ದಿ ಬಗ್ಗೆ ಸ್ವತಃ ನಟ ಕುರಿ ಪ್ರತಾಪ್ ಸ್ಪಷ್ಟನೆ.. ಅಷ್ಟಕ್ಕೂ ಆಗಿದ್ದು ಏನ್ ​ಗೊತ್ತಾ..? - actor kuri prathap death

ಕುರಿ ಪ್ರತಾಪ್ ಆರೋಗ್ಯ ಸ್ಥಿತಿ ಗಂಭೀರವಾಗಿ ತೀರಿಕೊಂಡಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಈ ಸುದ್ದಿಯನ್ನ ನೋಡಿರುವ ಕುರಿ ಪ್ರತಾಪ್ ಸ್ವತಃ ಶಾಕ್​ಗೆ ಒಳಗಾಗಿದ್ದಾರೆ. ಇದೊಂದು ಸುಳ್ಳು ಸುದ್ದಿ ಯಾರೂ ನಂಬಬೇಡಿ ಎಂದು ವಿಡಿಯೋ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ನಟ ಕುರಿ ಪ್ರತಾಪ್
ನಟ ಕುರಿ ಪ್ರತಾಪ್

By

Published : May 18, 2021, 10:01 PM IST

Updated : May 19, 2021, 9:42 AM IST

ಕೊರೊನಾ ಹೆಮ್ಮಾರಿಗೆ ದೇಶದ ಜನರು ತತ್ತರಿಸಿ ಹೋಗಿದ್ದಾರೆ. ಈ ಮಧ್ಯ ಸಿನಿಮಾ ತಾರೆಯರೂ ಸಹ ಕೋವಿಡ್​​ಗೆ ಬಲಿಯಾಗಿದ್ದಾರೆ. ಇಂತಹ ಸಮಯದಲ್ಲಿ ಹಾಸ್ಯ ನಟ ಕುರಿ ಪ್ರತಾಪ್​​ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಮತ್ತು ಸಾವನ್ನಪ್ಪಿದ್ದಾರೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಸಾವಿನ ಬಗ್ಗೆ ಸ್ವತಃ ನಟ ಕುರಿ ಪ್ರತಾಪ್ ಸ್ಪಷ್ಟನೆ

ಸ್ಯಾಂಡಲ್​ವುಡ್​ನ ಪ್ರಮುಖ ಹಾಸ್ಯ ನಟ ಹಾಗೂ ಸಾಕಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿರವ ಕುರಿ ಪ್ರತಾಪ್ ಆರೋಗ್ಯ ಸ್ಥಿತಿ ಗಂಭೀರವಾಗಿ ತೀರಿಕೊಂಡಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸುದ್ದಿಯನ್ನ ನೋಡಿರುವ ಕುರಿ ಪ್ರತಾಪ್ ಸ್ವತಃ ಶಾಕ್​ಗೆ ಒಳಗಾಗಿದ್ದಾರೆ. ಇದೊಂದು ಸುಳ್ಳು ಸುದ್ದಿ ಯಾರೂ ನಂಬಬೇಡಿ ಎಂದು ವಿಡಿಯೋ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದು, ವದಂತಿಗಳಿಗೆ ಕಿಡಿಗೊಡದಂತೆ ಮನವಿ ಮಾಡಿದ್ದಾರೆ.

'ಯಾರೋ ಕಿಡಿಗೇಡಿಗಳು ನಾನು ಸತ್ತು ಹೋಗಿದ್ದೀನಿ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್​​​ ಹಾಕಿದ್ದಾರೆ. ಈ ಬಗ್ಗೆ ನನಗೆ ನೂರಾರು ಫೋನ್ ಕಾಲ್​ಗಳು ಬರ್ತಾ ಇವೆ. ಇದು ಸುಳ್ಳು ಸುದ್ದಿ. ನಾನು ಮನೆಯಲ್ಲಿ ಆರಾಮಗಿ ಇದ್ದೀನಿ. ನೀವು ಕೂಡ ಮನೆಯಲ್ಲೇ ಸೇಫ್ ಆಗಿ ಇರಿ' ಎಂದು ನಟ ಪ್ರತಾಪ್ ತಮ್ಮ ಸಾವಿನ ಸುಳ್ಳು ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

Last Updated : May 19, 2021, 9:42 AM IST

ABOUT THE AUTHOR

...view details