ಈ ಬಾರಿ 'ರಾಜಾರಾಣಿ' ರಿಯಾಲಿಟಿ ಶೋನಲ್ಲಿ ಹಾಸ್ಯನಟ ರಾಜು ತಾಳಿಕೋಟೆ ತಮ್ಮ ಇಬ್ಬರೂ ಪತ್ನಿಯರೊಂದಿಗೆ ಭಾಗವಹಿಸುತ್ತಿರುವುದು ಕುತೂಹಲ ಕೆರಳಿಸಿದೆ. ಇಬ್ಬರನ್ನು ಮದುವೆಯಾಗಿರುವುದು ನನ್ನ ಹಣೆಬರಹ ಎನ್ನುವ ಅವರು, ಇಬ್ಬರನ್ನೂ ಸಮನಾಗಿ ಕಾಣುತ್ತಿದ್ದಾರಂತೆ. ತಮ್ಮ 35 ವರ್ಷಗಳ ವೈವಾಹಿಕ ಜೀವನದ ಹೆಜ್ಜೆ ಗುರುತುಗಳನ್ನು ಅವರು ಶೋನಲ್ಲಿ ವಿವರಿಸಲಿದ್ದಾರೆ.
'ರಾಜಾ ರಾಣಿ' ಶೋದಲ್ಲಿ ಇಬ್ಬರು ಹೆಂಡಿರ ಜೊತೆ 'ಕಲಿಯುಗದ ಕುಡುಕ'ನ ಅನುಭವ - ಪ್ರೇಮಾ ಕಲ್ಲೂರು
ಇಬ್ಬರು ಹೆಂಡಿರನ್ನು ಮದುವೆಯಾಗಿರುವುದು ಹಣೆಬರಹ ಎನ್ನುವ ರಾಜು ತಾಳಿಕೋಟೆ, ಇಬ್ಬರನ್ನೂ ಒಂದೇ ಸಮನಾಗಿ ಕಾಣುತ್ತಿದ್ದಾರಂತೆ. ತಮ್ಮ 35 ವರ್ಷಗಳ ವೈವಾಹಿಕ ಜೀವನದ ಹೆಜ್ಜೆ ಗುರುತುಗಳನ್ನು ಅವರು ಕಲರ್ಸ್ ಕನ್ನಡ ವಾಹಿನಿಯ 'ರಾಜಾರಾಣಿ' ರಿಯಾಲಿಟಿ ಶೋದಲ್ಲಿ ಹೇಳಲಿದ್ದಾರೆ.
ಇವರ ಪತ್ನಿಯರ ಹೆಸರು ಪ್ರೇಮಾ ಕಲ್ಲೂರು ಹಾಗೂ ಪ್ರೇಮಾ ಸಿಂಧನೂರು ಎಂದು. ಈ ಇಬ್ಬರೊಂದಿಗಿನ ತಮ್ಮ ಜೀವನದ ಅನುಭವವನ್ನು ತಾಳಿಕೋಟೆ ಹಂಚಿಕೊಳ್ಳಲಿದ್ದಾರೆ. ಅಂದಹಾಗೆ, ಇವರು ಪತಿಗೆ ಯಾವ ತೊಂದರೆಯನ್ನೂ ಕೊಟ್ಟಿಲ್ಲವಂತೆ. ಈರ್ವರಲ್ಲಿ ಏನಾದರು ಮನಸ್ತಾಪವಾದರೆ ತಾವಿಬ್ಬರೇ ಬಗೆಹರಿಸಿಕೊಳ್ಳುತ್ತಾರೆ. ತಮ್ಮ ಸಮಸ್ಯೆಯನ್ನು ಸಂಬಂಧಿಕರ ಬಳಿ ಹೇಳಿಕೊಳ್ಳಲ್ವಂತೆ.
'ಏನೇ ತಂದರೂ ಇಬ್ಬರಿಗೂ ತಂದು ಕೊಡುತ್ತೇನೆ. ಹೀಗಾಗಿ, ಯಾವುದೇ ಸಮಸ್ಯೆಯಾಗಿಲ್ಲ' ಎನ್ನುತ್ತಾರೆ ರಾಜು ತಾಳಿಕೋಟೆ. ರಾಜಾ ರಾಣಿ ರಿಯಾಲಿಟಿ ಶೋನಲ್ಲಿ ಇಬ್ಬರು ಪತ್ನಿಯರಲ್ಲಿರುವ ನೋವು, ಮನಸ್ತಾಪ, ಅಸಹನೆಯನ್ನು ಅವರು ಹೇಗೆ ಬಗೆಹರಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.