ಕರ್ನಾಟಕ

karnataka

ETV Bharat / sitara

ಬೆಳ್ಳಿತೆರೆಯಲ್ಲಿ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಹೊರಟ 'ಮುದ್ದುಲಕ್ಷ್ಮಿ' ಡಾಕ್ಟರ್​​​​​

ಸ್ಟಾರ್ ಸುವರ್ಣ ವಾಹಿನಿಯ 'ಮುದ್ದುಲಕ್ಷ್ಮಿ' ಧಾರಾವಾಹಿಯಲ್ಲಿ ನಾಯಕ ಡಾ. ಧೃವಂತ್ ಆಗಿ ನಟಿಸಿ ಹೆಸರಾಗಿರುವ ಚರಿತ್ ಬಾಳಪ್ಪ ಈಗ ಸಿನಿಮಾದಲ್ಲಿ ಎರಡನೇ ನಾಯಕನಾಗಿ ನಟಿಸುತ್ತಿದ್ದಾರೆ. ಶಲೀಲ್ ಕರ್ಲೂ ನಿರ್ದೇಶನದ 'ಸಲ್ಮಾನ್' ಚಿತ್ರದಲ್ಲಿ ಚರಿತ್ ನಟಿಸುತ್ತಿದ್ದಾರೆ.

Charit Balappa
ಚರಿತ್ ಬಾಳಪ್ಪ

By

Published : Jun 2, 2020, 9:32 PM IST

ಕಿರುತೆರೆ ಕಲಾವಿದರು ಬೆಳ್ಳಿತೆರೆಗೆ ಹೋಗುವುದು ಸಾಮಾನ್ಯ ಸಂಗತಿ. ಕಿರುತೆರೆ ಮೂಲಕ ತಮ್ಮ ಬಣ್ಣದ ಯಾನಕ್ಕೆ ಮುನ್ನುಡಿ ಬರೆದಿರುವ ಹಲವು ನಟ ನಟಿಯರು ಇಂದು ಬೆಳ್ಳಿತೆರೆಯಲ್ಲೂ ಅದೃಷ್ಟ ಪರೀಕ್ಷೆ ಮಾಡಿ ಸಕ್ಸಸ್ ಆಗಿದ್ದಾರೆ. ಆ ಸಾಲಿಗೆ ಹೊಸದಾಗಿ ಸೇರ್ಪಡೆ ಕಿರುತೆರೆಯ ಚಾಕೋಲೆಟ್​​ ಹೀರೋ ಚರಿತ್​.

'ಮುದ್ದುಲಕ್ಷ್ಮಿ' ಖ್ಯಾತಿಯ ಚರಿತ್ ಬಾಳಪ್ಪ

ಚರಿತ್ ಎಂದರೆ ಯಾರಿಗೂ ಸುಲಭವಾಗಿ ತಿಳಿಯುವುದಿಲ್ಲ. ಸ್ಟಾರ್ ಸುವರ್ಣ ವಾಹಿನಿಯ 'ಮುದ್ದುಲಕ್ಷ್ಮಿ' ಧಾರಾವಾಹಿಯಲ್ಲಿ ನಾಯಕ ಧೃವಂತ್ ಆಗಿ ಅಭಿನಯಿಸುತ್ತಿರುವ ಚರಿತ್ ಬಾಳಪ್ಪ ಇದೀಗ ಬೆಳ್ಳಿತೆರೆಯಲ್ಲಿ ನಾಯಕನಾಗಿ ಮಿಂಚಲಿದ್ದಾರೆ. ದಕ್ಷಿಣ ಭಾರತದಲ್ಲಿ ಪ್ರತಿಭಾನ್ವಿತ ನಿರ್ದೇಶಕ ಎಂದೇ ಹೆಸರಾಗಿರುವ ಶಲೀಲ್ ಕರ್ಲೂ ನಿರ್ದೇಶನದ 'ಸಲ್ಮಾನ್' ಎಂಬ ಸಿನಿಮಾದಲ್ಲಿ ಎರಡನೇ ನಾಯಕನಾಗಿ ಚರಿತ್ ಬಣ್ಣ ಹಚ್ಚಲಿದ್ದಾರೆ. ಆ ಮೂಲಕ ಕಿರುತೆರೆ ಜೊತೆಗೆ ಬೆಳ್ಳಿತೆರೆಯಲ್ಲೂ ಛಾಪು ಮೂಡಿಸಲು ಹೊರಟಿದ್ದಾರೆ ಚರಿತ್.

ಮಾಡೆಲಿಂಗ್​​ನಲ್ಲೂ ಮಿಂಚುತ್ತಿರುವ ಚರಿತ್

ವಿನು ಬಳಂಜ ನಿರ್ದೇಶನದ 'ಲವ್​​​ಲವಿಕೆ' ಧಾರಾವಾಹಿಯಲ್ಲಿ ನಾಯಕ ಲಕ್ಕಿ ಅಲಿಯಾಸ್ ಲಕ್ಷ್ಮಣ್ ಆಗಿ ನಟನಾ ಯಾನ ಶುರು ಮಾಡಿದ ಚರಿತ್,​​​​​ ಮೊದಲ ಧಾರಾವಾಹಿಯಲ್ಲೇ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು. ಇದೀಗ ಕಿರುತೆರೆಪ್ರಿಯರ ಪ್ರೀತಿಯ ಡಾಕ್ಟರ್ ಆಗಿರುವ ಚರಿತ್​ ಬಾಲ್ಯದಿಂದಲೂ ನಟನೆಯತ್ತ ವಿಶೇಷ ಒಲವು ಹೊಂದಿದ್ದರು. ಚರಿತ್ ಎಂಬಿಎ ಪದವೀಧರ. ಅಪ್ಪ ಅಮ್ಮನಿಗೆ ಮಗ ಇಂಜಿನಿಯರಿಂಗ್ ಕಲಿಯಬೇಕೆಂಬ ಆಸೆ ಇತ್ತು. ಆದರೆ ಎಂಬಿಎ ಕಲಿತ ಚರಿತ್ ನಂತರ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸಕ್ಕೆ ಸೇರಿದರು. ನಂತರ ವಿಮಾನದಲ್ಲಿ ಕ್ಯಾಬಿನ್ ಕ್ರ್ಯೂ ಆಗಿ ಒಂದಷ್ಟು ಸಮಯ ಕಾರ್ಯ ನಿರ್ವಹಿಸಿದರು. ರಜೆ ಇದ್ದಾಗ ಧಾರಾವಾಹಿಗಳ ಆಡಿಷನ್​ ನೀಡಿದ ಅವರು 'ಲವ್​​​ಲವಿಕೆ' ಧಾರಾವಾಹಿಯಲ್ಲಿ ನಟಿಸಲು ಆಯ್ಕೆ ಆದರು.

ಡಾ. ಧೃವಂತ್ ಪಾತ್ರಧಾರಿ ಚರಿತ್

ಮೊದಲ ಧಾರಾವಾಹಿಯಲ್ಲೇ ನಾಯಕನ ಪಾತ್ರ ಗಿಟ್ಟಿಸಿದ ಚರಿತ್​​​ ನಂತರ 'ಅಮ್ಮ' ಧಾರಾವಾಹಿಯಲ್ಲಿ ಕೂಡಾ ನಟಿಸಿದರು. ಅಲ್ಲದೆ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು. ಇದರ ನಂತರ 'ಸರ್ಪ ಸಂಬಂಧ', 'ಮುದ್ದುಲಕ್ಷ್ಮಿ' ಧಾರಾವಾಹಿಯಲ್ಲಿ ನಟಿಸಿದರು. ಈಗಾಗಲೇ ಬೆಳ್ಳಿತೆರೆಯ ಚಿಕ್ಕ ಪಾತ್ರಗಳಲ್ಲಿ ನಟಿಸಿರುವ ಚರಿತ್, ಈಗ ಎರಡನೇ ನಾಯಕನಾಗಿ ಅಭಿನಯಿಸುತ್ತಿದ್ಧಾರೆ. ಸಿನಿಪ್ರಿಯರು ಚರಿತ್ ಅವರನ್ನು ಹೇಗೆ ಸ್ವೀಕರಿಸಲಿದ್ದಾರೆ ಕಾದು ನೋಡಬೇಕು.

ABOUT THE AUTHOR

...view details