ಕರ್ನಾಟಕ

karnataka

ETV Bharat / sitara

ಕನ್ನಡ ಕಿರುತೆರೆಯಲ್ಲಿ ಚಂದುಗೌಡ ಅಭಿನಯದ ತೆಲುಗು ಧಾರಾವಾಹಿ - Trinayani telecast in Kannada

ಕನ್ನಡ ಕಿರುತೆರೆ ಮೂಲಕ ಗುರುತಿಸಿಕೊಂಡಿದ್ದ ಚಂದು ಗೌಡ ನಂತರ ತೆಲುಗಿನ 'ತ್ರಿನಯನಿ' ಧಾರಾವಾಹಿ ಮೂಲಕ ಕೂಡಾ ತೆಲುಗು ಪ್ರೇಕ್ಷಕರಿಗೆ ಪರಿಚಯವಾದರು. ಇದೀಗ ಈ ಧಾರಾವಾಹಿ ಕನ್ನಡಕ್ಕೆ ಡಬ್ ಆಗಿ ಪ್ರಸಾರವಾಗಲಿದೆ.

Chandu gowda
ಚಂದು ಗೌಡ

By

Published : Mar 5, 2021, 1:58 PM IST

Updated : Mar 5, 2021, 2:13 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ನಾಯಕ ಚಂದನ್ ಆಗಿ ಅಭಿನಯಿಸಿದ್ದ ಚಂದು ಗೌಡ ಮತ್ತೆ ಕಿರುತೆರೆಯತ್ತ ಮರಳಲಿದ್ದಾರೆ. ಲಕ್ಷ್ಮಿ ಬಾರಮ್ಮ ಧಾರಾವಾಹಿಯ ನಂತರ ತೆಲುಗಿನ 'ತ್ರಿನಯಿನಿ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುವ ಅವಕಾಶ ಪಡೆದುಕೊಂಡ ಚಂದು ಗೌಡ ಮೊದಲ ಧಾರಾವಾಹಿಯಲ್ಲೇ ಪರಭಾಷೆ ಕಿರುತೆರೆಯಲ್ಲಿ ಮನೆ ಮಾತಾದರು.

ಇದನ್ನೂ ಓದಿ:ವಿಶೇಷ ಚೇತನ ಮಕ್ಕಳ ಮುಂದೆ ಬೊಂಬಾಟ್ ಡೈಲಾಗ್ ಹೊಡೆದ 'ರಾಬರ್ಟ್'...!

ಸುಮಾರು ಒಂದು ವರ್ಷದ ನಂತರ ಚಂದು ಗೌಡ ಮತ್ತೆ ಕನ್ನಡ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿದ್ದಾರೆ. 'ತ್ರಿನಯನಿ' ಧಾರಾವಾಹಿ ಮೂಲಕ ಮತ್ತೊಮ್ಮೆ ಕನ್ನಡ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತ್ರಿನಯಿನಿ ಧಾರಾವಾಹಿ ಕನ್ನಡ ಭಾಷೆಗೆ ಡಬ್ ಆಗುತ್ತಿದ್ದು ಮುಂದಿನ ಸೋಮವಾರದಿಂದ ಪ್ರತಿದಿನ‌ ಮಧ್ಯಾಹ್ನ ಪ್ರಸಾರ ಕಾಣಲಿದೆ. ಈಗಾಗಲೇ ಧಾರಾವಾಹಿ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ತಮ್ಮ ನೆಚ್ಚಿನ ನಟ ಮತ್ತೆ ಕಿರುತೆರೆಗೆ ಮರಳಿರುವುದು ವೀಕ್ಷಕರಿಗೆ ಖುಷಿ ತಂದಿದೆ. ಅಂದ ಹಾಗೇ ಕಲರ್ಸ್ ಕನ್ನಡ ವಾಹಿನಿಯ ವಾರಾಂತ್ಯದಲ್ಲಿ ಪ್ರಸಾರವಾಗುತ್ತಿರುವ ಹೊಸ ಶೋ ಚಾಟ್ ಕಾರ್ನರ್ ನಿರೂಪಣೆ ಮಾಡುವ ಮೂಲಕ ಚಂದುಗೌಡ ನಟನಿಂದ ನಿರೂಪಕನಾಗಿ ಭಡ್ತಿ ಪಡೆದಿದ್ದರು. ಇಷ್ಟು ದಿನ ವಾರಾಂತ್ಯದಲ್ಲಿ ಮನರಂಜನೆ ನೀಡುತ್ತಿದ್ದ ಚಂದು ಗೌಡ ಇದೀಗ ವಾರಪೂರ್ತಿ ರಂಜಿಸಲು ಬರುತ್ತಿದ್ದಾರೆ.

ಲಕ್ಷ್ಮಿ ಬಾರಮ್ಮ ಖ್ಯಾತಿಯ ಚಂದುಗೌಡ
ತೆಲುಗಿನ ತ್ರಿನಯನಿ ಧಾರಾವಾಹಿಯಲ್ಲಿ ನಟಿಸಿದ್ದ ಚಂದು
Last Updated : Mar 5, 2021, 2:13 PM IST

ABOUT THE AUTHOR

...view details