ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ನಾಯಕ ಚಂದು ಆಗಿ ನಟಿಸುತ್ತಿದ್ದ ಚಂದುಗೌಡ ಲಾಕ್ಡೌನ್ ಬಳಿಕ ಮತ್ತೆ ಶೂಟಿಂಗ್ನಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ. ತೆಲುಗಿನ 'ತ್ರಿನಯಿನಿ' ಧಾರಾವಾಹಿಯಲ್ಲಿ ಚಂದುಗೌಡ ನಟಿಸುತ್ತಿದ್ದು ಸದ್ಯ ಅವರು ಹೈದರಾಬಾದ್ನಲ್ಲಿ ನೆಲೆಸಿದ್ದಾರೆ.
ತೆಲುಗು ಧಾರಾವಾಹಿಯಲ್ಲಿ ಚಂದು ಫುಲ್ ಬ್ಯುಸಿ...ಟೈಮ್ ಸಿಗ್ತಾನೇಯಿಲ್ಲ ಎಂದ ನಟ - Trinayani telugu serial
ತೆಲುಗು ಕಿರುತೆರೆಯಲ್ಲಿ ಬ್ಯುಸಿ ಇರುವ ಚಂದುಗೌಡ 'ಗೃಹ ಲಕ್ಷ್ಮಿ' ಧಾರಾವಾಹಿ ಮೂಲಕ ಕಿರುತೆರೆಗೆ ಬಂದವರು. ಸಿನಿಮಾಗಳಲ್ಲಿ ಕೂಡಾ ನಟಿಸಿರುವ ಚಂದು ಈಗ ತೆಲುಗಿನ 'ತ್ರಿನಯಿನಿ' ಧಾರಾವಾಹಿಯಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ.
"ಲಾಕ್ಡೌನ್ ನಂತರ ಶೂಟಿಂಗ್ ಆರಂಭವಾಗಿದ್ದು ಹತ್ತು ದಿನಗಳ ದೀರ್ಘ ಕಾಲ ಶೂಟಿಂಗ್ ನಡೆಯುವುದರಿಂದ ಸಮಯ ಸಿಗುತ್ತಿಲ್ಲ. ಒಂದು ವೇಳೆ ಬ್ರೇಕ್ ದೊರೆತರೆ ನಾನು ನಿಜಕ್ಕೂ ಅದೃಷ್ಟವಂತ" ಎನ್ನುತ್ತಾರೆ ಚಂದು ಗೌಡ. ಜೀ ಕನ್ನಡ ವಾಹಿನಿಯ 'ಗೃಹ ಲಕ್ಷ್ಮಿ' ಧಾರಾವಾಹಿಯಲ್ಲಿ ನಾಯಕ ರಾಘವ್ ಆಗಿ ನಟಿಸುವ ಮೂಲಕ ಕಿರುತೆರೆಗೆ ಬಂದ ಚಂದುಗೆ ಬಾಲ್ಯದಿಂದಲೂ ಆ್ಯಕ್ಟಿಂಗ್ನಲ್ಲಿ ಆಸಕ್ತಿ. ಉತ್ತಮ ಅವಕಾಶಕ್ಕಾಗಿ ಕಾಯುತ್ತಿದ್ದಾಗ ಮುಂಗಾರುಮಳೆ ಕೃಷ್ಣ ತಮ್ಮ ಧಾರಾವಾಹಿಯಲ್ಲಿ ಆಫರ್ ನೀಡಿದರು.
'ಗೃಹಲಕ್ಷ್ಮಿ' ಧಾರಾವಾಹಿ ನಂತರ 'ಲಕ್ಷ್ಮಿಬಾರಮ್ಮ' ಧಾರಾವಾಹಿಯ ಚಂದು ಆಗಿ ನಟಿಸಿದ್ದ ಇವರು ಈಗಾಗಲೇ ಸಿನಿಮಾಗಳಲ್ಲೂ ನಟಿಸಿದ್ದಾರೆ. 'ಅಟೆಂಪ್ಟ್ ಟು ಮರ್ಡರ್' ಹಾಗೂ 'ಪ್ಲಾಟ್ ನಂ 9' ಸಿನಿಮಾಗಳಲ್ಲಿ ನಟಿಸಿರುವ ಚಂದುಗೌಡ, ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದಲ್ಲೂ ಅಭಿನಯಿಸಿದ್ದಾರೆ. ಈಗ ಟಾಲಿವುಡ್ ಕಿರುತೆರೆಯಲ್ಲಿ ಬ್ಯುಸಿ ಇರುವ ಚಂದುಗೌಡ ತೆಲುಗಿನ 'ತ್ರಿನಯಿನಿ' ಧಾರಾವಾಹಿಯಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ.