ಕರ್ನಾಟಕ

karnataka

ETV Bharat / sitara

ಸಂಗೀತ, ನಾಟ್ಯ, ನಾಟಕ ಎಲ್ಲದಕ್ಕೂ ಸೈ... ಸಕಲ ಕಲಾವಲ್ಲಭೆ ಚಂದನ ಅನಂತಕೃಷ್ಣ - ಪುಟ್ಮಲ್ಲಿ ಧಾರಾವಾಹಿ ಮೂಲಕ ನಟನೆ ಆರಂಭಿಸಿದ ಚಂದನ

ಸ್ಟಾರ್ ಸುವರ್ಣ ವಾಹಿನಿಯ ಪುಟ್ಮಲ್ಲಿ ಧಾರಾವಾಹಿಯಲ್ಲಿ ನಾಯಕನ ತಂಗಿ ಪಾತ್ರದಲ್ಲಿ ನಟಿಸುವ ಮೂಲಕ ಚಂದನ ಬಣ್ಣದ ಪಯಣ ಆರಂಭಿಸಿದರು. 15 ದಿನಗಳಿಂದ ಯಾವುದೇ ವಿವಾದ ಇಲ್ಲದೆ, ತಮಗೆ ನೀಡಿದ ಟಾಸ್ಕ್​​​ಗಳನ್ನು ಮಾಡುತ್ತಿರುವ ಇವರು ಬಿಗ್​​ಬಾಸ್​ ಮನೆಯಲ್ಲಿ ಅದೆಷ್ಟು ದಿನ ಇರಲಿದ್ದಾರೆ ಕಾದು ನೋಡಬೇಕು.

ಚಂದನ ಅನಂತಕೃಷ್ಣ

By

Published : Oct 28, 2019, 11:05 PM IST

ಬಿಗ್​ಬಾಸ್​ 7ರ ಸ್ಪರ್ಧಿ ಚಂದನ ಅನಂತಕೃಷ್ಣ ನಿಮಗೆಲ್ಲಾ ಗೊತ್ತು. ಮನೆಯಲ್ಲಿ ತಮ್ಮದೇ ಆದ ವಿಶಿಷ್ಟ ಗಾಯನದ ಮೂಲಕ ಎಲ್ಲರನ್ನೂ ರಂಜಿಸುತ್ತಿರುವ ಈ ಹುಡುಗಿ ಸಕಲ ಕಲಾವಲ್ಲಭೆ ಎಂದರೆ ತಪ್ಪಿಲ್ಲ.

ಸಕಲ ಕಲಾವಲ್ಲಭೆ ಚಂದನ ಅನಂತಕೃಷ್ಣ

ಶಾಲಾ, ಕಾಲೇಜು ದಿನಗಳಲ್ಲೇ ಚಂದನ ಶಾಸ್ತ್ರೀಯ ಸಂಗೀತ, ನೃತ್ಯ ಹಾಗೂ ವೀಣೆಯನ್ನು ಕೂಡಾ ಅಭ್ಯಾಸ ಮಾಡಿದ್ದಾರೆ. ಇದರ ಜೊತೆಗೆ ಏಕಪಾತ್ರಾಭಿನಯ, ನಾಟಕಗಳಲ್ಲೂ ಸೈ ಎನಿಸಿಕೊಂಡಿರುವ ಚಂದನ, ಏಳನೇ ತರಗತಿಯಲ್ಲಿರುವಾಗಲೇ ಮುಂಬೈನಲ್ಲಿ ಸ್ಟೇಜ್ ಶೋ ನೀಡಿದ್ದಾರೆ. ಪದವಿ ವ್ಯಾಸಂಗಕ್ಕಾಗಿ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಬಂದ ಚಂದನ, ಅಲ್ಲಿನ ರಂಗಾಧ್ಯಯನ ಕೇಂದ್ರ ಮತ್ತು ಆಳ್ವಾಸ್ ಸಾಂಸ್ಕೃತಿಕ ವೈಭವ ತಂಡಗಳಿಂದ ಆಕರ್ಷಿತರಾದರು. ಅಲ್ಲಿ ಕಥಕ್ ಹಾಗೂ ಮೋಹಿನಿ ಅಟ್ಟಂ ಕೂಡಾ ಕಲಿತರು. ನಂತರ ಧಾರಾವಾಹಿಗಳಲ್ಲೂ ಚಂದನ ನಟಿಸಲು ಆರಂಭಿಸಿದರು.

ಚಂದನ ಅನಂತಕೃಷ್ಣ

ಸ್ಟಾರ್ ಸುವರ್ಣ ವಾಹಿನಿಯ ಪುಟ್ಮಲ್ಲಿ ಧಾರಾವಾಹಿಯಲ್ಲಿ ನಾಯಕನ ತಂಗಿ ಪಾತ್ರದಲ್ಲಿ ನಟಿಸುವ ಮೂಲಕ ಚಂದನ ಬಣ್ಣದ ಪಯಣ ಆರಂಭಿಸಿದರು. ನಂತರ ಪ್ರಮುಖ ಪಾತ್ರಗಳು ಅವರನ್ನು ಅರಸುತ್ತಾ ಬಂದವು. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಜರಾಣಿ' ಧಾರಾವಾಹಿಯಲ್ಲಿ ನಾಯಕಿ ಯಡವಟ್ ರಾಣಿ ಅಲಿಯಾಸ್ ಚುಕ್ಕಿಯಾಗಿ ಕಿರುತೆರೆ ಪ್ರಿಯರ ಮನ ಸೆಳೆದಿರುವ ಚಂದನಾಗೆ ಸಿನಿಮಾದಲ್ಲಿ ಕೂಡಾ ನಟಿಸುವಂತೆ ಆಫರ್​​​​​​​​ಗಳು ಬಂದಿವೆ. ಆದರೆ ಕಿರುತೆರೆಯಲ್ಲಿ ಬ್ಯುಸಿಯಾದ ಕಾರಣ ಯಾವುದೇ ಸಿನಿಮಾಗಳನ್ನು ಅವರು ಒಪ್ಪಿಕೊಳ್ಳುತ್ತಿಲ್ಲ. ಇದೀಗ ಬಿಗ್​​ಬಾಸ್​​​ ಮನೆಯಲ್ಲಿ ಇರುವ ಅವರು 15 ದಿನಗಳಿಂದ ಯಾವುದೇ ವಿವಾದ ಇಲ್ಲದೆ, ತಮಗೆ ನೀಡಿದ ಟಾಸ್ಕ್​​​ಗಳನ್ನು ಮಾಡುತ್ತಿದ್ದಾರೆ. ಬಿಗ್​​ಬಾಸ್​ ಮನೆಯಲ್ಲಿ ಅವರು ಅದೆಷ್ಟು ದಿನ ಇರಲಿದ್ದಾರೆ ಕಾದು ನೋಡಬೇಕು.

For All Latest Updates

TAGGED:

ABOUT THE AUTHOR

...view details