ಈ ಮಹಾಮಾರಿ ಕೊರೊನಾದಿಂದ ಒಬ್ಬೊಬ್ಬರಿಗೆ ಒಂದೊಂದು ರೀತಿಯ ನಷ್ಟವುಂಟಾಗಿದೆ. ಕೆಲವರು ಈಗಾಗಲೇ ಕೆಲಸ ಕಳೆದುಕೊಂಡಿದ್ದರೆ, ಮತ್ತೆ ಕೆಲವರು ಕೆಲಸ ಕಳೆದುಕೊಳ್ಳುವ ಭೀತಿಯಿಂದಲೇ ದಿನ ದೂಡುತ್ತಿದ್ದಾರೆ. ಇದು ಚಿತ್ರರಂಗ, ಕಿರುತೆರೆಗೂ ಅನ್ವಯಿಸುತ್ತದೆ.
ಈ ನಡುವೆ ಬಿಗ್ ಬಾಸ್ ನಂತರ 'ಹಾಡು ಕರ್ನಾಟಕ' ಕಾರ್ಯಕ್ರಮದ ಮೂಲಕ ನಿರೂಪಣಾ ರಂಗಕ್ಕೆ ಕಾಲಿಟ್ಟ ಚಂದನಾ ಅನಂತಕೃಷ್ಣ ಇದೀಗ ಹಾಡು ಕರ್ನಾಟಕವನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ. ಲಾಕ್ ಡೌನ್ ಸಡಿಲಿಕೆ ಆದ ನಂತರವೂ ಶೂಟಿಂಗ್ಗೆ ಅನುಮತಿ ದೊರೆಯದ ಕಾರಣ ಚಂದನಾ ಬಹಳ ಬೇಸರದಿಂದ ಇದ್ದಾರಂತೆ. 'ನಾನು ಹಾಡು ಕರ್ನಾಟಕ ಶೋವನ್ನು ತುಂಬಾ ಮಿಸ್ ಮಾಡಿಕೊಳ್ತಿದ್ದೇನೆ. ಕಾಸ್ಟ್ಯೂಮ್ , ಆ ಸಿದ್ಧತೆ , ಸ್ಕ್ರಿಪ್ಟ್ ಓದುವಿಕೆ, ಹಾಡು ಕರ್ನಾಟಕ ವೇದಿಕೆಯಲ್ಲಿ ಹಾಸ್ಯ, ಆತ್ಮೀಯರ ಕಾಲೆಳೆಯುವುದು ಇವೆಲ್ಲವನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ' ಎಂದು ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಚಂದನಾ ಬರೆದುಕೊಂಡಿದ್ದಾರೆ.