ಕರ್ನಾಟಕ

karnataka

ETV Bharat / sitara

ಕೆನಡಾದಲ್ಲಿದ್ದರೂ ಭಾವಿ ಪತ್ನಿಗಾಗಿ ಸರ್ಪೈಸ್​​​​​ ನೀಡಿದ ಚಂದನ್ ಶೆಟ್ಟಿ..! - ಮಂಜುಗಡ್ಡೆಯಿಂದ ಗೊಂಬೆ ತಯಾರಿಸಿದ ಚಂದನ್ ಶೆಟ್ಟಿ

ಜೊತೆಯಾಗಿ ಹೊಸ ವರ್ಷವನ್ನು ಆಚರಿಸಲು ಆಗದಿದ್ದರೂ, ಕೆನಡಾದಿಂದಲೇ ತಮ್ಮ ಭಾವಿ ಪತ್ನಿಗೆ ಚಂದನ್​, ಸರ್ಪೈಸ್​​​​​​​​​​​​​​​​​​​​​​​​​​​​​​ ನೀಡಿದ್ದಾರೆ. ಕೆನಡಾದಲ್ಲಿ ಮಂಜುಗಡ್ಡೆಯಿಂದ ಸೊಗಸಾದ ಏಂಜಲ್ ತಯಾರಿಸಿರುವ ಚಂದನ್ ಅದನ್ನು ವಿಡಿಯೋ ಮಾಡಿ ತಮ್ಮ ಮನದನ್ನೆಗೆ ಕಳಿಸಿಕೊಟ್ಟಿದ್ದಾರೆ.

Chandan shetty, nivedita gowda
ಚಂದನ್ ಶೆಟ್ಟಿ, ನಿವೇದಿತಾ

By

Published : Jan 3, 2020, 7:51 PM IST

ಇತ್ತೀಚೆಗಷ್ಟೇ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಹೊಸ ವರ್ಷವನ್ನು ಜೊತೆಯಾಗಿ ಆಚರಿಸಿಲ್ಲ. ನಿವೇದಿತಾ ಮೈಸೂರಿನಲ್ಲಿ ಇದ್ದರೆ, ಚಂದನ್ ಶೆಟ್ಟಿ ದೂರದ ಕೆನಡಾದಲ್ಲಿ ಇರುವುದೇ ಇದಕ್ಕೆ ಕಾರಣ.

ಅಷ್ಟು ದೂರ ಇದ್ದರೂ, ಜೊತೆಯಾಗಿ ಹೊಸ ವರ್ಷವನ್ನು ಆಚರಿಸಲು ಆಗದಿದ್ದರೂ, ಕೆನಡಾದಿಂದಲೇ ತಮ್ಮ ಭಾವಿ ಪತ್ನಿಗೆ ಚಂದನ್​, ಸರ್ಪೈಸ್​​​​​​​​​​​​​​​​​​​​​​​ ನೀಡಿದ್ದಾರೆ. ಕೆನಡಾದಲ್ಲಿ ಮಂಜುಗಡ್ಡೆಯಿಂದ ಸೊಗಸಾದ ಏಂಜಲ್ ತಯಾರಿಸಿರುವ ಚಂದನ್ ಅದನ್ನು ವಿಡಿಯೋ ಮಾಡಿ ತಮ್ಮ ಮನದನ್ನೆಗೆ ಕಳಿಸಿಕೊಟ್ಟಿದ್ದಾರೆ. ಭಾವಿ ಪತಿ ಮಾಡಿರುವ ಏಂಜಲ್​​​ಗೆ ಫಿದಾ ಆಗಿರುವ ನಿವೇದಿತಾ, ಅದನ್ನು ತಮ್ಮ ಇನ್ಸ್​​​ಟಾಗ್ರಾಮ್​​​​​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. 'ಇದು ತುಂಬಾ ಕ್ಯೂಟ್ ಆಗಿದೆ. ಐ ಲವ್ ಯು ಸೋ ಮಚ್. ಹೊಸ ವರ್ಷದಂದು ನಿನ್ನನ್ನ ತುಂಬಾ ಮಿಸ್ ಮಾಡಿಕೊಂಡೆ. ಹ್ಯಾಪಿ ನ್ಯೂ ಇಯರ್ ಕುಕಿ'' ಎಂದು ಬರೆದುಕೊಂಡಿದ್ದಾರೆ ನಿವೇದಿತಾ. ಖ್ಯಾತ ರಿಯಾಲಿಟಿ ಶೋ ಬಿಗ್​​​​​​ಬಾಸ್​​​​​ ಮೂಲಕ ಒಬ್ಬರಿಗೊಬ್ಬರು ಪರಿಚಿತರಾದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಮೊದಲಿಗೆ ಸ್ನೇಹಿತರಾಗಿದ್ದರು. ನಂತರ ಈ ಸ್ನೇಹ ಪ್ರೇಮಕ್ಕೆ ತಿರುಗಿ ಹಿರಿಯರ ಸಮ್ಮುಖದಲ್ಲಿ ಅಕ್ಟೋಬರ್​​​​​ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಈ ವರ್ಷ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಆದರೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.

For All Latest Updates

TAGGED:

ABOUT THE AUTHOR

...view details