ಕರ್ನಾಟಕ

karnataka

ETV Bharat / sitara

ಚಂದನ್ ಶೆಟ್ಟಿ ಹೆಚ್ಚು ರೋಮ್ಯಾಂಟಿಕ್: ನಿವೇದಿತಾ ಗೌಡ - ನಿವೇದಿತಾ ಗೌಡ

ನಾನು ಮತ್ತು ನಿವೇದಿತಾ ದಾಂಪತ್ಯ ಜೀವನದಿಂದ ಸಾಕಷ್ಟು ಕಲಿತಿದ್ದೇವೆ. ಇಷ್ಟ-ಕಷ್ಟಗಳನ್ನು ಅರಿತುಕೊಂಡಿದ್ದೇವೆ. ಈ ರಿಯಾಲಿಟಿ ಶೋ ನಮ್ಮ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ. ಇದೇ ವೇಳೆ ಚಂದನ್​ ಹೆಚ್ಚು ರೋಮ್ಯಾಂಟಿಕ್ ಅಂತಾ ಪತ್ನಿ ನಿವೇದಿತಾ ಗೌಡ ಹೇಳಿದ್ದಾರೆ.

Chandan Shetty and  Nivedita Gowda
ನಿವೇದಿತಾ ಗೌಡ ಹಾಗು ಚಂದನ್ ಶೆ

By

Published : Jul 15, 2021, 5:56 PM IST

'ರಾಜ ರಾಣಿ' ರಿಯಾಲಿಟಿ ಶೋನ ಪ್ರಮುಖ ಆಕರ್ಷಣೆ ಅಂದ್ರೆ ರಿಯಾಲಿಟಿ ಶೋ ಮೂಲಕ ರಿಯಲ್ ಲೈಫ್​​ಗೆ ಎಂಟ್ರಿಕೊಟ್ಟ ನಿವೇದಿತಾ ಗೌಡ ಹಾಗು ಚಂದನ್ ಶೆಟ್ಟಿ. ಹೌದು..ರಿಯಾಲಿಟಿ ಶೋನಲ್ಲಿ ಎಲ್ಲರ ಮನ ಗೆದ್ದು ನಂತರ ಮದುವೆಯಾದ ಮುದ್ದಾದ ಜೋಡಿ ಇವರು. ಇದೀಗ ಮತ್ತೆ ಈ ರಿಯಾಲಿಟಿ ಶೋ ಮೂಲಕ ತಮ್ಮ ವೈವಾಹಿಕ ಜೀವನದ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಲಿದ್ದಾರೆ.

ನಿವೇದಿತಾ ಗೌಡ ಹಾಗು ಚಂದನ್ ಶೆಟ್ಟಿ

ನಾನು ಮತ್ತು ನಿವೇದಿತಾ ದಾಂಪತ್ಯ ಜೀವನದಿಂದ ಸಾಕಷ್ಟು ಕಲಿತಿದ್ದೇವೆ. ಇಷ್ಟ-ಕಷ್ಟಗಳನ್ನು ಅರಿತುಕೊಂಡಿದ್ದೇವೆ. ಈ ರಿಯಾಲಿಟಿ ಶೋ ನಮ್ಮ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಮದುವೆಯಾಗಿದ್ದರೂ ಯಾವುದೇ ಗೊಂದಲವಿಲ್ಲದೆ ಜೀವನ ಸಾಗುತ್ತಿದೆ. ನಮ್ಮಿಬ್ಬರಲ್ಲೂ ಪ್ರತಿಯೊಂದರಲ್ಲೂ ಹೊಂದಾಣಿಕೆ ಇದೆ. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕೆಲಸವನ್ನು ಬಿಟ್ಟಿದ್ದೇನೆ. ಈ ರಿಯಾಲಿಟಿ ಶೋ ಮೂಲಕ ಮತ್ತೆ ಒಂದಾಗಿದ್ದು, ಖುಷಿಯಾಗುತ್ತಿದೆ ಎನ್ನುತ್ತಾರೆ ನಿವೇದಿತಾ ಗೌಡ.

ಚಂದನ್ ಹೆಚ್ಚು ರೋಮ್ಯಾಂಟಿಕ್:

ಮದುವೆಯಾದ ಕೆಲ ದಿನಗಳ ನಂತರ ಲಾಕ್​ಡೌನ್ ಆಯ್ತು. ಮತ್ತೆ ಎಲ್ಲಾ ಸರಿ ಹೋಗುವ ಹೊತ್ತಿಗೆ ಮತ್ತೆ ಲಾಕ್ ಡೌನ್. ಇದೀಗ ಚಂದನ್ ಅವರ ಊರು ಸಕಲೇಶಪುರಕ್ಕೆ ಹೋಗುವ ಆಸೆ ಇದೆ. ಆದರೆ ಶೂಟಿಂಗ್ ಇದೆ. ನಮ್ಮಿಬ್ಬರಲ್ಲಿ ಹೆಚ್ಚು ರೋಮ್ಯಾಂಟಿಕ್ ಅಂದರೆ ಚಂದನ್. ನಾನು ನಾಚಿಕೆ ಪಟ್ಟುಕೊಳ್ಳುತ್ತೇನೆ. ಹೆಚ್ಚು ಕೇರ್​​ ತೆಗೆದುಕೊಳ್ಳುವುದು ನಾನು. ಲವ್ ಮಾಡೋದು ಇಬ್ಬರಲ್ಲಿ ನಾನು ಹೆಚ್ಚು ಎಕ್ಸ್‌ಪ್ರೆಸ್ ಮಾಡುತ್ತೇನೆ ಎನ್ನುತ್ತಾರೆ ನಿವೇದಿತಾ ಗೌಡ.

ಇದನ್ನೂ ಓದಿ:ಈ ಬಾರಿಯ ಬಿಗ್​​ಬಾಸ್​​ನಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾಗೆ ಯಾರು ಇಷ್ಟ ಗೊತ್ತಾ?

ABOUT THE AUTHOR

...view details