ಕಳೆದ ಒಂದು ವಾರದಿಂದ ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಚಟುವಟಿಕೆಗಳಿಗಿಂಗ ಹೆಚ್ಚಾಗಿ ಡ್ರಗ್ಸ್ ದಂಧೆ ವಿಚಾರವೇ ಹೆಚ್ಚು ಚರ್ಚೆಯಾಗುತ್ತಿದೆ. ನಿರ್ದೇಶಕ ಇಂದ್ರಜಿತ್ ಲಂಕೇಶ್ ಕೆಲವರ ಹೆಸರನ್ನು ಸಿಸಿಬಿ ಅಧಿಕಾರಿಗಳ ಮುಂದೆ ಹೇಳಿದ್ದಾರೆ. ಕಿರುತೆರೆ ನಟ ಚಂದನ್ ಕುಮಾರ್ ಕೂಡಾ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಚಿತ್ರರಂಗದಲ್ಲಿರುವ ಅವಿವೇಕಿಗಳನ್ನು ಪೊಲೀಸರು ತೊಡೆದು ಹಾಕಲಿ...ಚಂದನ್ ಕುಮಾರ್ - Drugs in Kannada film industry
ಸ್ಯಾಂಡಲ್ವುಡ್ನಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಡ್ರಗ್ಸ್ ದಂಧೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಚಂದನ್ , ನಾನು ಇಂದ್ರಜಿತ್ ಲಂಕೇಶ್ ಅವರನ್ನು ಬೆಂಬಲಿಸುತ್ತೇನೆ. ಚಿತ್ರರಂಗದಲ್ಲಿ ಡ್ರಗ್ಸ್ ಚಟ ಇರುವವರನ್ನು ಪತ್ತೆ ಹಚ್ಚಿ ಅವರನ್ನು ಬ್ಯಾನ್ ಮಾಡಿ ಎಂದು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
ಚಂದನ್ ಕುಮಾರ್
'ಯಾರೋ ಮಾಡಿದ ತಪ್ಪಿಗೆ ದಯಮಾಡಿ ಇಡೀ ಚಿತ್ರರಂಗವನ್ನೇ ದೂಷಿಸಬೇಡಿ. ಡ್ರಗ್ಸ್ ತೆಗೆದುಕೊಂಡವರನ್ನು ವಿಚಾರಿಸಿ, ಬಂಧಿಸಿ. ಅಗತ್ಯವಿದ್ದರೆ ಚಿತ್ರರಂಗದಿಂದ ಅವರನ್ನು ಬ್ಯಾನ್ ಮಾಡಿ. ಆದರೆ ಈ ಕ್ಷೇತ್ರದಲ್ಲಿ ಪರಿಶ್ರಮದಿಂದ ಕೆಲಸ ಮಾಡುತ್ತಿರುವವರನ್ನು ಬಿಟ್ಟುಬಿಡಿ ಎಂದು ಮನವಿ ಮಾಡಿದ್ದಾರೆ ಚಂದನ್. ಪೋಲಿಸರ ಈ ಕಾರ್ಯ ಮೆಚ್ಚುವಂತದ್ದು. ಚಿತ್ರರಂಗದಲ್ಲಿ ಇರುವ ಅವಿವೇಕಿಗಳನ್ನು ಪೊಲೀಸರು ಆದಷ್ಟು ಬೇಗ ತೊಡೆದು ಹಾಕಲಿ ನಾನು ಇಂದ್ರಜಿತ್ ಲಂಕೇಶ್ ಅವರನ್ನು ಬೆಂಬಲಿಸುತ್ತೇನೆ' ಎಂದು ಚಂದನ್ ಬರೆದುಕೊಂಡಿದ್ದಾರೆ.