ಕರ್ನಾಟಕ

karnataka

ETV Bharat / sitara

'ಸಾವಿತ್ರಮ್ಮಗಾರಿಕಿ ಅಬ್ಬಾಯಿ' ಧಾರಾವಾಹಿಯಿಂದ ಹೊರ ಬಂದ ಚಂದನ್.. ಅದಕ್ಕೇನ್‌ ಕಾರಣ ಅವರೇ ಹೇಳಿದರು.. - Abbhai serial for Telugu

ಮದುವೆ ಆಗಬೇಕು ಎಂದು ಈಗಾಗಲೇ ನಿರ್ಧಾರ ಮಾಡಿಯಾಗಿದೆ. ಸ್ವಲ್ಪ ದಿನ ಆರಾಮಾಗಿ ಕಾಲ ಕಳೆಯೋಣ ಎಂದು ಅಂದುಕೊಂಡಿದ್ದೇನೆ. ಧಾರಾವಾಹಿಯಲ್ಲಿ ನಟಿಸುವಾಗ ಆ ಪಾತ್ರದಲ್ಲಿ ನಮ್ಮನ್ನು ನಾವು ಸಂಪೂರ್ಣ ತೊಡಗಿಸಿಕೊಳ್ಳಬೇಕಾಗುತ್ತದೆ. ಇಷ್ಟು ದಿನ ಧಾರಾವಾಹಿಗಳಲ್ಲಿ ಬ್ಯುಸಿಯಾಗಿದ್ದೆ..

Chandan Kumar
ಧಾರಾವಾಹಿಯಿಂದ ಹೊರಬಂದ ಚಂದನ್ ಕುಮಾರ್

By

Published : Mar 17, 2021, 7:41 PM IST

ಬೆಂಗಳೂರು :ಮನೋಜ್ಞ ನಟನೆಯ ಮೂಲಕ ಕಿರುತೆರೆ ಲೋಕದಲ್ಲಿ ಹೊಸ ಹವಾ ಸೃಷ್ಟಿಸಿದ್ದ ಚಂದನ್ ಕುಮಾರ್, ಕೇವಲ ಕನ್ನಡ ಕಿರುತೆರೆ ಮಾತ್ರವಲ್ಲದೇ ಪರಭಾಷೆಯಲ್ಲಿಯೂ ನಟನಾ ಛಾಪು ಪಸರಿಸಿದ್ದಾರೆ.

ತೆಲುಗಿನ ಸಾವಿತ್ರಮ್ಮಗಾರಿಕಿ ಅಬ್ಬಾಯಿ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುವ ಮೂಲಕ ಪರಭಾಷೆಗೆ ಕಾಲಿಟ್ಟಿರುವ ಚಂದನ್ ಇದೀಗ ಧಾರಾವಾಹಿಯಿಂದ ಹೊರ ಬಂದಿದ್ದಾರೆ.

ಧಾರಾವಾಹಿಯಿಂದ ಹೊರಬಂದ ಚಂದನ್ ಕುಮಾರ್

ಓದಿ: ಬೆಳಗಾವಿ ಲೋಕಸಭೆ ಉಪ ಕದನ: ಕೈ-ಕಮಲದ ಅಭ್ಯರ್ಥಿಗಳಾರು?

ಮದುವೆ ಮತ್ತು ವೈಯಕ್ತಿಕ ಜೀವನದ ಸಲುವಾಗಿ ತೆಲುಗಿನ 'ಸಾವಿತ್ರಮ್ಮಗಾರಿಕಿ ಅಬ್ಬಾಯಿ' ಧಾರಾವಾಹಿಯಿಂದ ಇದೀಗ ಹೊರ ಬಂದಿದ್ದಾರೆ. ಅಂದ ಹಾಗೇ ಈ ಧಾರಾವಾಹಿಯಲ್ಲಿ
500ಕ್ಕೂ ಹೆಚ್ಚು ಸಂಚಿಕೆಗಳಲ್ಲಿ ಚಂದನ್​ ಕುಮಾರ್ ಅಭಿನಯಿಸಿದ್ದಾರೆ.

ಧಾರಾವಾಹಿಯಿಂದ ಹೊರಬಂದ ಚಂದನ್ ಕುಮಾರ್

ಧಾರಾವಾಹಿಯಿಂದ ಚಂದನ್ ಕುಮಾರ್ ಹೊರಬಂದಿದ್ದು, ಬಣ್ಣದ ಲೋಕದಲ್ಲಿ ಬ್ಯುಸಿಯಾಗಿದ್ದ ನನಗೆ ಕೊಂಚ ಬಿಡುವು ಬೇಕಿತ್ತು. ಇದರ ಜೊತೆಗೆ ಮದುವೆಯ ಬಗ್ಗೆ ಪ್ಲಾನ್ ಕೂಡ ನಡೆಯುತ್ತಿದೆ. ವೃತ್ತಿ ಜೀವನದ ಜೊತೆಗೆ ಪರ್ಸನಲ್​ ಜೀವನದ ಕಡೆಗೆ ಗಮನ ಹರಿಸುವ ನಿರ್ಧಾರ ಮಾಡಿದ್ದೇನೆ.

ಧಾರಾವಾಹಿಯಿಂದ ಹೊರ ಬರುವ ವಿಚಾರವನ್ನು ನಾನು ಈಗಾಗಲೇ ಧಾರಾವಾಹಿ ತಂಡದವರಿಗೆ ಮೊದಲೇ ತಿಳಿಸಿದ್ದೆ. ಇದೀಗ ಅದಕ್ಕೆ ತಕ್ಕಂತೆ ಕಥೆಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಧಾರಾವಾಹಿಯಿಂದ ಹೊರ ಬಂದ ಚಂದನ್‌ಕುಮಾರ್

ಮದುವೆ ಆಗಬೇಕು ಎಂದು ಈಗಾಗಲೇ ನಿರ್ಧಾರ ಮಾಡಿಯಾಗಿದೆ. ಸ್ವಲ್ಪ ದಿನ ಆರಾಮಾಗಿ ಕಾಲ ಕಳೆಯೋಣ ಎಂದು ಅಂದುಕೊಂಡಿದ್ದೇನೆ. ಧಾರಾವಾಹಿಯಲ್ಲಿ ನಟಿಸುವಾಗ ಆ ಪಾತ್ರದಲ್ಲಿ ನಮ್ಮನ್ನು ನಾವು ಸಂಪೂರ್ಣ ತೊಡಗಿಸಿಕೊಳ್ಳಬೇಕಾಗುತ್ತದೆ. ಇಷ್ಟು ದಿನ ಧಾರಾವಾಹಿಗಳಲ್ಲಿ ಬ್ಯುಸಿಯಾಗಿದ್ದೆ.

ಇದೀಗ ಅದರಿಂದ ಹೊರಬಂದ ಕಾರಣ ಮೂರು-ನಾಲ್ಕು ತಿಂಗಳು ಆರಾಮಾಗಿರಬೇಕು ಎಂದುಕೊಂಡಿದ್ದೇನೆ. ಇದರ ಜೊತೆಗೆ ಹೋಟೆಲ್​ ಬ್ಯುಸಿನೆಸ್​ ಇನ್ನಷ್ಟು ವಿಸ್ತರಿಸಬೇಕಾಗಿದೆ. ತದ ನಂತರ ಸಿನಿಮಾ ಕಡೆಗೆ ಗಮನ ಹರಿಸುತ್ತೇನೆ ಎಂದು ಹೇಳಿದ್ದಾರೆ ಚಂದನ್.

ABOUT THE AUTHOR

...view details