ಕಿರುತೆರೆ, ಬೆಳ್ಳಿತೆರೆಯಲ್ಲಿ ಕೂಡಾ ಹೆಸರು ಮಾಡಿರುವ ಚಂದನ್ ಕುಮಾರ್ ಆ್ಯಕ್ಟಿಂಗ್ ಮಾತ್ರವಲ್ಲ ಕ್ರೀಡೆಯಲ್ಲಿ ಕೂಡಾ ಎತ್ತಿದ ಕೈ. ಶೂಟಿಂಗ್ ಇಲ್ಲದೆ ಮನೆಯಲ್ಲಿ ಕಾಲ ಕಳೆಯುತ್ತಿರುವ ಚಂದನ್, ಕ್ರಿಕೆಟ್ ಕೋಚ್ ಆಗಿ ಕೂಡಾ ಕೆಲಸ ಮಾಡುತ್ತಿದ್ದಾರೆ.
ಅಂದ ಹಾಗೆ ಚಂದನ್ ಕುಮಾರ್ ಕ್ರಿಕೆಟ್ ಹೇಳಿಕೊಡುತ್ತಿರುವುದು ಫೀಲ್ಡ್ನಲ್ಲಿ ಅಲ್ಲ, ಅಕ್ಕನ ಮಗನಿಗೆ ಚಂದನ್ ಕ್ರಿಕೆಟ್ ಆಡುವುದು ಹೇಗೆ ಎಂಬುದನ್ನು ಹೇಳಿಕೊಡುತ್ತಿದ್ಧಾರೆ. ತಮ್ಮ ಅಳಿಯನಿಗೆ ಕ್ರಿಕೆಟ್ ಪಾಠ ಮಾಡುತ್ತಿರುವ ವಿಡಿಯೋವನ್ನು ಚಂದನ್ ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಹಂಚಿಕೊಂಡಿದ್ದಾರೆ.
ಯಾವ ರೀತಿ ಬ್ಯಾಟ್ ಹಿಡಿಯಬೇಕು, ಯಾವ ರೀತಿ ಬಾಲ್ ಹೊಡೆಯಬೇಕು, ಸ್ಟಂಪ್ ಆಗದಂತೆ ಚೆಂಡನ್ನು ಹೇಗೆ ಬ್ಯಾಟಿನಿಂದ ತಡೆಯಬೇಕು ಎಂಬ ಪಾಠವನ್ನು ಚಂದನ್ ತಮ್ಮ ಅಳಿಯನಿಗೆ ಹೇಳಿಕೊಡುತ್ತಿದ್ಧಾರೆ. ಹೊರಗೆ ಕೊರೊನಾ ಭೀತಿ ಇರುವುದರಿಂದ ಇವೆಲ್ಲಾ ಪಾಠ ಚಂದನ್ ಮನೆ ಒಳಗೇ ನಡೆಯುತ್ತಿದೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸರ್ವಮಂಗಳ ಮಾಂಗಲ್ಯೇ' ಧಾರಾವಾಹಿಯಲ್ಲಿ ಚಂದನ್ ಮಹಾಶಂಕರನಾಗಿ ನಟಿಸುತ್ತಿದ್ದಾರೆ. ಇದರ ಜೊತೆಗೆ ತೆಲುಗಿನ 'ಸಾವಿತ್ರಮ್ಮಗಾರಿ ಅಬ್ಬಾಯಿ' ಧಾರಾವಾಹಿಯಲ್ಲಿ ಕೂಡಾ ಚಂದನ್ ಬ್ಯುಸಿ ಇದ್ದು ಶೂಟಿಂಗ್ಗೆ ಬುಲಾವ್ ಬಂದ ಕೂಡಲೇ ಹೈದರಾಬಾದ್ ವಿಮಾನ ಹತ್ತಲಿದ್ಧಾರೆ.