ಕರ್ನಾಟಕ

karnataka

ETV Bharat / sitara

ಬುದ್ಧಿಜೀವಿಗಳ ವಿನೂತನ ಕಾರ್ಯಕ್ರಮ 'ಚಾಯ್ ವಾಯ್ ರಂಗಮಂಚ್ 2020' - Sandalwood Directors

ಸ್ಯಾಂಡಲ್​​​ವುಡ್​ ಅನುಭವಿ ನಿರ್ದೇಶಕರು, ನಿರ್ಮಾಪಕರು, ತಾಂತ್ರಿಕ ವರ್ಗ, ರಂಗಭೂಮಿ ಕ್ಷೇತ್ರದ ಗಣ್ಯರು ಇಂದಿನಿಂದ 'ಚಾಯ್ ವಾಯ್ ರಂಗಮಂಚ್ 2020' ಎಂಬ ಫೇಸ್​ಬುಕ್​ ಲೈವ್ ಕಾರ್ಯಕ್ರಮ ನಡೆಸಲಿದ್ದು ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ.

ChaiWai Rangmanch 2020
ನಾಗಾಭರಣ

By

Published : Jul 16, 2020, 10:01 AM IST

ಕನ್ನಡ ಸಿನಿಮಾ, ಸಂಗೀತ, ತಂತ್ರಜ್ಞಾನ ಹಾಗೂ ರಂಗಭೂಮಿ ಕ್ಷೇತ್ರದ ಹಲವಾರು ವ್ಯಕ್ತಿಗಳು ಜೊತೆ ಸೇರಿ ಒಂದು ವಿನೂತನ ಓಪನ್ ಸೆಷನ್ 'ಚಾಯ್ ವಾಯ್ ರಂಗಮಂಚ್ 2020' ಕಾರ್ಯಕ್ರಮವನ್ನು ಈ ಲಾಕ್ ಡೌನ್ ಸಮಯದಲ್ಲಿ ನಡೆಸುತ್ತಿದ್ದಾರೆ.

ಎಂ.ಎನ್. ಸತ್ಯು
ಎಂ.ಡಿ. ಪಲ್ಲವಿ
ಸಿ. ಬಸವಲಿಂಗಯ್ಯ

'ಚಾಯ್ ವಾಯ್ ರಂಗಮಂಚ್ 2020' ಕಾರ್ಯಕ್ರಮದಲ್ಲಿ ಯಾರು ಬೇಕಾದರೂ ಚರ್ಚೆಯಲ್ಲಿ ಪಾಲ್ಗೊಳ್ಳಬಹುದು. ಇದಕ್ಕೆ ಯಾವುದೇ ಶುಲ್ಕ ನಿಗದಿ ಮಾಡಿಲ್ಲ. ಕ್ರಿಯಾಟಿಕ್ಸ್ ಮೀಡಿಯಾ ಹಾಗೂ ಕೋಕನಟ್ ಮೀಡಿಯಾ ತನ್ನ ಫೇಸ್​ಬುಕ್​ ಪೇಜ್​​ನಲ್ಲಿ ಈ ಬಗ್ಗೆ ಮಾಹಿತಿ ತಿಳಿಸಿದೆ. ಇಂದು ಸಂಜೆ 6 ರಿಂದ ಈ ಓಪನ್ ಸೆಷನ್ ಲಭ್ಯವಾಗಲಿದೆ.

ಕೆ.ಕೆ. ರೈನಾ
'ಚಾಯ್ ವಾಯ್ ರಂಗಮಂಚ್ 2020'
ಮಕರಂದ್ ದೇಶ್​​​ಪಾಂಡೆ

ಅನುಭವಿ ನಿರ್ದೇಶಕರು, ನಟರು, ನೃತ್ಯ ನಿರ್ದೇಶಕರು, ತಾಂತ್ರಿಕ ಪರಿಣಿತಿ ಪಡೆದವರು, ಸಂಗೀತ ನಿರ್ದೇಶಕರು, ಮೇಕಪ್ ಕಲಾವಿದರು ಇಲ್ಲಿ ಅವರ ಅಮೂಲ್ಯವಾದ ಅನುಭವಗಳನ್ನು ಬಿಚ್ಚಿಡಲಿದ್ದಾರೆ. ವಿಶ್ವ ಮಟ್ಟದ ಆಸಕ್ತರ ಗಮನ ಸೆಳೆದು ವಿಚಾರ ವಿನಿಮಯ ಮಾಡಿಕೊಳ್ಳುವ ಪ್ರಯತ್ನ ಇದು. ಕೋಕನಟ್ ಮೀಡಿಯಾ ಫೇಸ್​ಬುಕ್ ಆನ್​​ಲೈನ್​​​​​​​​​ ಪೇಜ್​​​ನಲ್ಲಿ ಆಸಕ್ತರು ಈ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು.

ರಂಗಕರ್ಮಿ ಪ್ರಸನ್ನ
ಮನೋಜ್ ಜೋಷಿ
ಪ್ರಕಾಶ್ ಬೆಳವಾಡಿ

ಜುಲೈ 16, ಅಂದರೆ ಇಂದು ಸಂಜೆ ರಂಗ ತಜ್ಞ ಸಿ. ಬಸವಲಿಂಗಯ್ಯ ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ. ಜುಲೈ 20 ಸಂಜೆ 6ಕ್ಕೆ ಗಾಯಕಿ ಎಂ.ಡಿ. ಪಲ್ಲವಿ, 22 ರಂದು ಟಿಎಸ್​​. ನಾಗಾಭರಣ, 23 ರಂದು ನಟ, ನಿರ್ದೇಶಕ ಬರಹಗಾರ ಪ್ರಕಾಶ್​​​​​​ ಬೆಳವಾಡಿ ಅಲ್ಲದೆ ಪದ್ಮಶ್ರೀ ಎಂ.ಎಸ್​​​. ಸತ್ಯು, ರಂಗ ತಜ್ಞ ಪ್ರಸನ್ನ, ಮನೋಜ್ ಜೋಷಿ, ಮಕರಂದ್ ದೇಶ್​​​​ಪಾಂಡೆ, ಕೆ.ಕೆ. ರೈನಾ ಹಾಗೂ ಇತರರು ಈ 'ಚಾಯ್ ವಾಯ್ ರಂಗಮಂಚ್ 2020' ಓಪನ್ ಸೆಷನ್​​​​​ನಲ್ಲಿ ಪಾಲ್ಗೊಳ್ಳಲಿದ್ದಾರೆ.

ABOUT THE AUTHOR

...view details