ಚೈತ್ರಾ ವಾಸುದೇವನ್ ಈ ಮುನ್ನ ಕನ್ನಡಿಗರಿಗೆ ಅಷ್ಟಾಗಿ ಪರಿಚಯವಿಲ್ಲದಿದ್ದರೂ ಬಿಗ್ಬಾಸ್ ಮೂಲಕ ಇದೀಗ ರಾಜ್ಯದ ಜನತೆಗೆ ಪರಿಚಯವಾಗಿದ್ದಾರೆ. ಕಾಲೇಜು ದಿನಗಳಿಂದಲೇ ಸಾಂಸ್ಕೃತಿಕ ಚಟುವಟಿಕೆಗಳತ್ತ ವಿಶೇಷ ಒಲವು ಹೊಂದಿದ್ದ ಚೈತ್ರಾ ವಾಸುದೇವನ್ ನಟನಾ ರಂಗಕ್ಕೆ ಪರಿಚಿತರಾಗಿದ್ದು ನಿರೂಪಕಿಯಾಗಿ.
ವಿಜೆ ಆಗಿ ಕರಿಯರ್ ಆರಂಭಿಸಿದ ಚೈತ್ರಾ ವಾಸುದೇವನ್ ಮುದ್ದು ಮುಖದ ಚೈತ್ರಾ ಮೊದಲು ತಮ್ಮ ಕರಿಯರ್ ಆರಂಭಿಸಿದ್ದು, ಉದಯ ಟಿವಿ ಮೂಲಕ. ಇದುವರೆಗೂ ಸಾಕಷ್ಟು ಲೈವ್ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ ಚೈತ್ರಾ. ಇದರ ಜೊತೆಗೆ ಕ್ರೀಡಾ ನಿರೂಪಕಿಯಾಗಿಯೂ ಗಮನ ಸೆಳೆದಿರುವ ಈ ಬೆಡಗಿ ಕೆಪಿಎಲ್ ಹಾಗೂ ಕೆಸಿಸಿ ಕ್ರಿಕೆಟ್ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಉದಯ ವಾಹಿನಿಯಲ್ಲಿ ಚೈತ್ರಾ ನಡೆಸಿಕೊಡುತ್ತಿದ್ದ ರಿಚಾರ್ಜ್ ಕಾರ್ಯಕ್ರಮ ಅತ್ಯಂತ ಖ್ಯಾತಿ ಗಳಿಸಿತ್ತು. ತಮ್ಮ ಮುದ್ದಾದ ದನಿಯಿಂದಲೇ ವೀಕ್ಷಕರ ಮನ ಸೆಳೆದಿರುವ ಚೈತ್ರಾ ಇತರ ಖಾಸಗಿ ವಾಹಿನಿಗಳಲ್ಲೂ ನಿರೂಪಕಿಯಾಗಿ ಸೈ ಎನಿಸಿಕೊಂಡಿದ್ದಾರೆ.
ಚೈತ್ರಾ ಇದೀಗ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯೊಂದಕ್ಕೆ ಒಡತಿ ಕೇವಲ ನಿರೂಪಣೆ ಮಾತ್ರವಲ್ಲ ಹೊಸದಾಗಿ ಬೇರೆ ಏನಾದರೂ ಮಾಡಬೇಕು ಎಂದುಕೊಂಡಿದ್ದ ಚೈತ್ರಾ ಅಂದುಕೊಂಡಂತೆ ಈವೆಂಟ್ ಕಂಪನಿಯನ್ನೂ ಆರಂಭಿಸಿದರು. ತಮ್ಮ ಕಂಪನಿಗೆ 'ಈವೆಂಟ್ ಫ್ಯಾಕ್ಟರಿ' ಎಂದು ನಾಮಕರಣ ಕೂಡಾ ಮಾಡಿದರು. ಆ ಮೂಲಕ ಮದುವೆಗೆ ಬೇಕಾದ ಡೆಕೊರೇಷನ್, ಬರ್ತಡೇ ಪಾರ್ಟಿ, ಬೇಬಿ ಶವರ್ ಹಾಗೂ ಇನ್ನಿತರ ಶುಭ ಸಮಾರಂಭಗಳಿಗೆ ಅವಶ್ಯಕತೆ ಇರುವ ಐಡಿಯಾ ನೀಡಲು ಆರಂಭಿಸಿದರು. ಇದರೊಂದಿಗೆ ನಟನೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಚೈತ್ರಾ, ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾದಲ್ಲೂ ಸಣ್ಣ ಪಾತ್ರದಲ್ಲಿ ನಟಿಸಿದ್ದಾರೆ. ಇವೆಲ್ಲದರ ಜೊತೆ ಡ್ಯಾನ್ಸ್, ಟ್ರಾವೆಲ್, ಓದುವುದು ಹಾಗೂ ಅಡುಗೆ ಮಾಡುವುದೆಂದರೆ ಚೈತ್ರಾಗೆ ಬಹಳ ಇಷ್ಟವಂತೆ.
'ಪೈಲ್ವಾನ್' ಚಿತ್ರದಲ್ಲಿ ನಟಿಸಿರುವ ಬಿಗ್ ಬಾಸ್-7 ಸ್ಪರ್ಧಿ ಚೈತ್ರಾ ಓದಿದ್ದು ಇಂಜಿನಿಯರಿಂಗ್ ಆದರೂ ಚೈತ್ರಾ ಹೆಸರು ಮಾಡಿದ್ದು ನಟಿ, ನಿರೂಪಕಿಯಾಗಿ. ಇದೀಗ ಬಿಗ್ಬಾಸ್ 7 ರ ಸ್ಪರ್ಧಿಯಾಗಿ ಕೂಡಾ ಭಾಗವಹಿಸುತ್ತಿರುವ ಚೈತ್ರಾ ಅಲ್ಲೂ ಮಿಂಚಲಿದ್ದಾರಾ ಎಂಬುದನ್ನು ಕಾದು ನೋಡಬೇಕು.
ಚೈತ್ರಾ ಮುದ್ದು ಧ್ವನಿಗೆ ಸಾಕಷ್ಟು ಫ್ಯಾನ್ ಫಾಲೋವರ್ಸ್ ಇದ್ದಾರೆ