ಕರ್ನಾಟಕ

karnataka

ETV Bharat / sitara

'ಬ್ರಹ್ಮಗಂಟು' ಧಾರಾವಾಹಿಗೆ 3ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ...! - Shruti naidu production Bramhagantu serial

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಬ್ರಹ್ಮಗಂಟು' ಧಾರಾವಾಹಿಗೆ 3ನೇ ಹುಟ್ಟುಹಬ್ಬದ ಸಂಭ್ರಮ. ಧಾರಾವಾಹಿ ಪ್ರಸಾರ ಆರಂಭಿಸಿ ಇಂದಿಗೆ ಮೂರು ವರ್ಷಗಳು ತುಂಬಿವೆ.

Bramhagantu serial celebrated 3rd birthday
'ಬ್ರಹ್ಮಗಂಟು'

By

Published : May 12, 2020, 10:56 PM IST

ಶ್ರುತಿ ನಾಯ್ಡು ನಿರ್ಮಾಣದಲ್ಲಿ ರಮೇಶ್ ಇಂದಿರಾ ನಿರ್ದೇಶಿಸಿರುವ ವಿಭಿನ್ನ ಕಥಾ ಹಂದರ ಒಳಗೊಂಡ 'ಬ್ರಹ್ಮಗಂಟು' ಧಾರಾವಾಹಿ ಪ್ರಸಾರ ಆರಂಭಿಸಿ ಇಂದಿಗೆ 3 ವರ್ಷಗಳು ತುಂಬಿವೆ. ಕೆಲವೇ ದಿನಗಳಲ್ಲಿ ಧಾರಾವಾಹಿಯ ಫ್ರೆಷ್ ಎಪಿಸೋಡ್​​​​​ಗಳು ಪ್ರಸಾರವಾಗಲಿವೆ.

'ಬ್ರಹ್ಮಗಂಟು' ಧಾರಾವಾಹಿಗೆ 3ನೇ ವರ್ಷದ ಬರ್ತಡೇ

ಗುಂಡಮ್ಮ ಅಲಿಯಾಸ್ ಗೀತಾ, ಪರೋಪಕಾರದ ಮನೋಭಾವ ಹೊಂದಿರುವ ಹುಡುಗಿ, ಊರಿನ ಜನರ ಕಷ್ಟಕ್ಕೆ ಮರುಗುವ ಮುಗ್ಧ ಮನಸ್ಸಿನ ಚೆಲುವೆ. ಎಲ್ಲರಿಗೂ ಒಳಿತು ಮಾಡುವ ಗೀತಾಗೆ ಜೀವನದಲ್ಲಿ ಇದ್ದದ್ದು ಒಂದೇ ಕನಸು. ಆಕೆ ಮದುವೆ ಆಗುವ ಹುಡುಗ ಸುಂದರನಾಗಿರಬೇಕು ಎನ್ನವುದು. ಆಕೆಯ ಆಸೆ ಈಡೇರಿತು ನಿಜ, ಆದರೆ ಆತನಿಗೆ ಅವಳೆಂದರೆ ಕಿಂಚಿತ್ತೂ ಇಷ್ಟವಿರಲಿಲ್ಲ. ವಿರುದ್ಧ ದಿಕ್ಕಿನಲ್ಲಿ ಯೋಚಿಸುವ ಗಂಡು-ಹೆಣ್ಣು ಜೊತೆಯಾದಾಗ ಏನಾಗುತ್ತದೆ, ನಾಯಕ ಲಕ್ಕಿಗೆ ಗುಂಡಮ್ಮನ ಮೇಲೆ ಪ್ರೀತಿ ಮೂಡುವುದಾದರೂ ಹೇಗೆ, ರೂಪವೇ ಮುಖ್ಯ ಎಂದು ಭಾವಿಸಿರುವ ನಾಯಕ ಲಕ್ಕಿ ಗುಂಡಮ್ಮನ ಪ್ರೀತಿಗೆ ಸೋತಿದ್ದು ಹೇಗೆ ಎಂಬ ವಿಭಿನ್ನ ಕಥೆ ಹೊಂದಿದೆ ಈ ಧಾರಾವಾಹಿ.

'ಬ್ರಹ್ಮಗಂಟು' ಧಾರಾವಾಹಿಗೆ 3ನೇ ವರ್ಷದ ಬರ್ತಡೇ

ನಾಯಕ ಲಕ್ಕಿ ಅಲಿಯಾಸ್ ಲಕ್ಷ್ಮಣ್ ಆಗಿ ಕೊಡಗಿನ ಕುವರ ಭರತ್ ಬೋಪಣ್ಣ, ನಾಯಕಿ ಗುಂಡಮ್ಮ ಅಲಿಯಾಸ್ ಗೀತಾ ಆಗಿ ಗೀತಾ ಭಾರತಿ ಭಟ್ ಕಿರುತೆರೆ ಲೋಕಕ್ಕೆ ಪರಿಚಿತರಾಗಲು ಕಾರಣ ಈ 'ಬ್ರಹ್ಮಗಂಟು'. ಹಿರಿಯ ನಟ, ನಿರ್ದೇಶಕ ಟಿ.ಎಸ್​​​​​​​. ನಾಗಾಭರಣ ಅವರು ನಾಯಕನ ಅಪ್ಪನಾಗಿ ನಟಿಸುವ ಮೂಲಕ ಈ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದರು. ಇವರೊಂದಿಗೆ ವನಿತಾ ವಾಸು, ಗಾಯತ್ರಿ ಪ್ರಭಾಕರ್, ಸ್ವಾತಿ ಗುರುದತ್, ಪ್ರಥಮ ಕೂಡಾ ಅಭಿನಯಿಸಿದ್ದಾರೆ.

ABOUT THE AUTHOR

...view details