ತುಮಕೂರು:ಕೊರೊನಾ ಬಿಕ್ಕಟ್ಟಿನ ನಡುವೆ ಬಿಗ್ಬಾಸ್ ಸೀಸನ್ 5ರಲ್ಲಿ ರನ್ನರ್ - ಅಪ್ ಆಗಿದ್ದ ದಿವಾಕರ್ ತಮ್ಮ ಮೂಲ ವೃತ್ತಿಯಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದಾರೆ.
ಮೂಲವೃತ್ತಿಗೆ ಮರಳಿದ ಬಿಗ್ಬಾಸ್ ಸೀಸನ್ 5ರ ರನ್ನರ್ ಅಪ್: ಸೇಲ್ಸ್ಮ್ಯಾನ್ ಆಗಿ ಕೆಲಸ - Bigg Boss season runner up became salesman
ಚಲನಚಿತ್ರರಂಗವನ್ನೇ ನಂಬಿದ್ದ ಅನೇಕ ಕಾರ್ಮಿಕರು ಇಂದು ಕೈಗೆ ಕೆಲಸವಿಲ್ಲದೇ ಇಕ್ಕಟ್ಟಿಗೆ ಸಿಲುಕಿದ್ದಾರೆ. ಹೀಗಾಗಿ ಬದುಕಲು ಬೇರೆ ವೃತ್ತಿಯನ್ನು ಅವಲಂಬಿಸಬೇಕಿದೆ.
![ಮೂಲವೃತ್ತಿಗೆ ಮರಳಿದ ಬಿಗ್ಬಾಸ್ ಸೀಸನ್ 5ರ ರನ್ನರ್ ಅಪ್: ಸೇಲ್ಸ್ಮ್ಯಾನ್ ಆಗಿ ಕೆಲಸ Bigg Boss season runner up](https://etvbharatimages.akamaized.net/etvbharat/prod-images/768-512-8070722-thumbnail-3x2-tmk.jpg)
ದಿವಾಕರ್
ಸೇಲ್ಸ್ಮ್ಯಾನ್ ಆದ ಬಿಗ್ಬಾಸ್ ರನ್ನರ್-ಅಪ್
ತುಮಕೂರಿನ ಜಿಲ್ಲಾಧಿಕಾರಿ ಕಚೇರಿ ಜಿಲ್ಲಾ ಪಂಚಾಯಿತಿ ಕಚೇರಿ ಸೇರಿದಂತೆ ಅನೇಕ ಸರ್ಕಾರಿ ಕಚೇರಿಗಳು ಹಾಗೂ ಸಾರ್ವಜನಿಕರ ಬಳಿ ತೆರಳಿ ಮಾಸ್ಕ್ ಮಾರಾಟ ಮಾಡ್ತಿದ್ದಾರೆ. ಅಷ್ಟೇ ಅಲ್ಲ ಮಂಡಿ ನೋವಿನ ಔಷಧವನ್ನೂ ಮಾರಾಟ ಮಾಡುತ್ತಿದ್ದಾರೆ.
ಚಲನಚಿತ್ರರಂಗವನ್ನೇ ನಂಬಿದ್ದ ಅನೇಕ ಕಾರ್ಮಿಕರು ಇಂದು ಕೈಗೆ ಕೆಲಸವಿಲ್ಲದೇ ಇಕ್ಕಟ್ಟಿಗೆ ಸಿಲುಕಿದ್ದಾರೆ. ಹೀಗಾಗಿ ಬದುಕಲು ಬೇರೆ ವೃತ್ತಿಯನ್ನು ಅವಲಂಬಿಸಬೇಕಿದೆ. ಯಾವುದೇ ವ್ಯವಹಾರ ಆದರೂ ಮಾಡಿ ಬದುಕು ನಡೆಸಿ ಎಂದು ಚಿತ್ರರಂಗದ ಸ್ನೇಹಿತರಿಗೆ ಸಂದೇಶ ನೀಡಿದ್ದಾರೆ. ನಾನು ಕೂಡ ನನ್ನ ಮೂಲವೃತ್ತಿಯಾದ ಸೇಲ್ಸ್ ಮ್ಯಾನ್ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದೇನೆ ಎಂದಿದ್ದಾರೆ.