ಟೆಲಿವಿಷನ್ ಇತಿಹಾಸದಲ್ಲಿ ರಿಯಾಲಿಟಿ ಶೋ ಬಂದು ಅರ್ಧಕ್ಕೆ ನಿಂತು ಮತ್ತೆ ಪುನಾರಂಭವಾಗುತ್ತಿರುವುದು ಇದೇ ಮೊದಲು. ಬಿಗ್ಬಾಸ್ ಸೀಸನ್ 8 ಸುಮಾರು 75 ದಿನಗಳ ಕಾಲ ನಡೆದು ಮತ್ತೆ ನಾಳೆಯಿಂದ ಆರಂಭವಾಗುತ್ತಿದೆ. ಎಂದಿನಂತೆ ಸುದೀಪ್ ಬುಧವಾರ ಸಂಜೆ 6 ಗಂಟೆಗೆ ಕಾರ್ಯಕ್ರಮವನ್ನು ನಿರೂಪಿಸುವುದರ ಮೂಲಕ ಸೆಕೆಂಡ್ ಇನ್ನಿಂಗ್ಸ್ಗೆ ಚಾಲನೆ ನೀಡಲಿದ್ದಾರೆ.
ನಾಳೆಯಿಂದ ಬಿಗ್ಬಾಸ್ ಸೀಸನ್-8 ಸೆಕೆಂಡ್ ಇನ್ನಿಂಗ್ಸ್ ಆರಂಭ!! - ಬಿಗ್ಬಾಸ್ ಸೀಸನ್ 8 ಆರಂಭ
ನಾಳೆಯಿಂದ ಬಿಗ್ಬಾಸ್ ಸೀಸನ್-8 ಸೆಕೆಂಡ್ ಇನ್ನಿಂಗ್ಸ್ ಆರಂಭವಾಗಲಿದೆ. ಎಂದಿನಂತೆ ಸುದೀಪ್ ಬುಧವಾರ ಸಂಜೆ 6 ಗಂಟೆಗೆ ಕಾರ್ಯಕ್ರಮವನ್ನು ನಿರೂಪಿಸುವುದರ ಮೂಲಕ ಚಾಲನೆ ನೀಡಲಿದ್ದಾರೆ..
ಸಾಮಾನ್ಯವಾಗಿ ಬಿಗ್ಬಾಸ್ ರಿಯಾಲಿಟಿ ಶೋ 100 ದಿನಗಳ ಕಾಲ ನಡೆಯಲಿದೆ. ಆದರೆ, 75 ದಿನಕ್ಕೆ ರದ್ದಾಗಿದ್ದ ಕಾರಣ ಇನ್ನುಳಿದ 25 ದಿನಗಳ ಕಾಲದ ಶೂಟಿಂಗ್ ಬಾಕಿ ಇದೆ. ಆದರೆ, 25 ದಿನಗಳ ಕಾಲ ನಡೆಸಿದರೆ ಪ್ರೇಕ್ಷಕರಿಗೆ ಪೂರ್ಣಪ್ರಮಾಣದ ಮನರಂಜನೆ ಸಿಗುವುದಿಲ್ಲ. ಹೀಗಾಗಿ, ವಾಹಿನಿಯ ಮೂಲಗಳ ಪ್ರಕಾರ ಎರಡು ತಿಂಗಳ ಕಾಲ ಅಥವಾ 50 ದಿನಗಳು ರಿಯಾಲಿಟಿ ಶೋ ನಡೆಸಲು ವಾಹಿನಿ ಸಿದ್ಧವಾಗಿದೆ.
ಈಗಾಗಲೇ 12 ಮಂದಿ ಸ್ಪರ್ಧಿಗಳು ಕ್ವಾರಂಟೈನ್ನಲ್ಲಿದ್ದಾರೆ. ಬುಧವಾರ ಸಂಜೆ ಅಧಿಕೃತವಾಗಿ ಮನೆ ಪ್ರವೇಶಿಸಲಿದ್ದಾರೆ. ನಟ ಸುದೀಪ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದು, ನಾಳೆಯಿಂದ ಬಿಗ್ಬಾಸ್ ಸೀಸನ್ 8 ಪುನಾರಂಭವಾಗಲಿದೆ ಎಂದಿದ್ದಾರೆ.