ಈ ವಾರ ಬಿಗ್ಬಾಸ್ ಮನೆಯ 8 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ ಶಮಂತ್ ಅವರಿಂದ ಶುಭಾ ಪೂಂಜಾ ನೇರವಾಗಿ ನಾಮಿನೇಟ್ ಆಗಿದ್ದಾರೆ. ಈ ವಾರ ಸಿಕ್ರೇಟ್ ನಾಮಿನೇಷನ್ಗೆ ಬಿಗ್ ಬಾಸ್ ಆದೇಶಿಸಿತ್ತು. ಅದರಂತೆ ಮನೆಯ ಸದಸ್ಯರು ಈ ಬಾರಿಯೂ ನಿರ್ಮಲಾ ಅವರನ್ನೇ ಹೆಚ್ಚು ಮಂದಿ ಟಾರ್ಗೆಟ್ ಮಾಡಿದ್ದರು.
ನಿರ್ಮಲಾ, ಪ್ರಶಾಂತ್ ಸಂಬರಗಿ, ದಿವ್ಯಾ ಸುರೇಶ್, ಗೀತಾ, ವಿಶ್ವನಾಥ್ ನಿಧಿ ಹಾಗೂ ಚಂದ್ರಕಲಾ ನಾಮಿನೇಟ್ ಆದವರು.
ಯಾವ ಪ್ರಾಣಿ ಯಾರಿಗೆ?
ಪ್ರಾಣಿ ಗುಣದ ಚಟುವಟಿಕೆಯನ್ನು ಬಿಗ್ ಬಾಸ್ ಮನೆಯ ಸದಸ್ಯರಿಗೆ ನೀಡಿದ್ದರು. ಅದರಂತೆ ಯಾವ ಸ್ಪರ್ಧಿಗೆ ಯಾವ ಪ್ರಾಣಿಯ ಚಿಹ್ನೆ ಹೋಲಿಕೆಯಾಗಲಿದೆ ಎಂಬುದನ್ನು ಮತ್ತೊಬ್ಬ ತಿಳಿಸಬೇಕು. 'ಇರಲಾರದೇ ಇರುವೆ ಬಿಟ್ಕೊಂಡ್ರು' ಈ ಗಾದೆಗೆ ತಕ್ಕಂತೆ ದಿವ್ಯಾ ಸುರೇಶ್ ಅವರಿಗೆ ಇರುವೆ ಗುರುತನ್ನು ಶಮಂತ್ ತೊಡಿಸಿದರು. 'ಆಡು ಮುಟ್ಟದ ಸೊಪ್ಪಿಲ್ಲ' ಇದನ್ನು ನಿರ್ಮಲಾ ಅವರು ರಾಜೀವ್ ಅವರಿಗೆ ತೊಡಿಸಿದರು. 'ಯಾರೇ ಕೂಗಾಡಲಿ ಎಮ್ಮೆ ನಿನಗೆ ಸಾಟಿ ಇಲ್ಲ' ಇದನ್ನು ಅರವಿಂದ್ ಅವರು ಪ್ರಶಾಂತ್ ಅವರಿಗೆ ಹಾಕಿದರು. 'ಕೋತಿ ತಾನು ಕೆಡೋದಲ್ಲದೇ ಎಲ್ಲರನ್ನೂ ಕೆಡಿಸುತ್ತೆ' ರಘುಗೌಡ ನಿಧಿಗೆ ಬ್ಯಾಂಡ್ ಹಾಕಿದರು. 'ಗುಬ್ಬಿ ಮೇಲೆ ಬ್ರ್ಮಹ್ಮಾಸ್ತ್ರ ಬ್ಯಾಂಡ್' ಅನ್ನು ಚಂದ್ರಕಲಾ ಅವರಿಂದ ನಿರ್ಮಲಾಗೆ ಹಾಕಿದರು. 'ಮನೆಲಿ ಇಲಿ ಬೀದಿಲಿ ಹುಲಿ' ಗಾದೆಯನ್ನು ವಿಶ್ವನಾಥ್ ಅವರು ಅರವಿಂದ್ ಸೂಕ್ತ ಎಂದು ನೀಡಿದರು. 'ಆನೆ ನಡೆದಿದ್ದೆ ದಾರಿ' ಇದನ್ನು ದಿವ್ಯಾ ಉರುಡುಗಯಿಂದ ಶಂಕರ್ ಅವರಿಗೆ ನೀಡಿದರು. 'ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಗೊತ್ತಾಗಲ್ಲ' ಗಾದೆಗೆ ಸೂಕ್ತ ವ್ಯಕ್ತಿ ಎಂದು ಶುಭಾ ಪೂಂಜಾ ಅವರು ಶಮಂತ್ಗೆ ಹೇಳಿದರು.
'ಬೊಗಳೊ ನಾಯಿ ಕಚ್ಚಲ್ಲ' ಮಂಜು ಈ ಬಗ್ಗೆ ದಿವ್ಯ ಉರುಡುಗ ಅವರಿಗೆ ಹೇಳಿದರು. 'ಕೋಣನ ಮುಂದೆ ಕಿಂದರಿ ಬಾರಿಸಿದ ಹಾಗೆ' ಇದನ್ನು ಗೀತಾ ಶುಭಾ ಪೂಂಜಾಗೆ ನೀಡಿದರು. 'ಮೊಸಳೆ ಕಣ್ಣೀರು' ಈ ಗಾದೆಗೆ ಸೂಕ್ತರು ಎಂದು ಪ್ರಶಾಂತ್ ಗೀತಾಗೆ ಬ್ಯಾಂಡ್ ಧರಿಸಿದರು. 'ಕಾರ್ಯವಾಸಿ ಕತ್ತೆ ಕಾಲು ಹಿಡಿ' ಬ್ಯಾಂಡ್ ರಾಜೀವ್ ಅವರು ಚಂದ್ರಕಲಾ ಅವರಿಗೆ ಹಾಕಿದರು.