ಕರ್ನಾಟಕ

karnataka

ಬಿಗ್ ಬಾಸ್ ಸೀಸನ್-8 ಗ್ರ್ಯಾಂಡ್​ ಓಪನಿಂಗ್: ಮೊದಲ 11 ಸ್ಪರ್ಧಿಗಳ್ಯಾರು ಗೊತ್ತೆ ?

By

Published : Feb 28, 2021, 8:41 PM IST

Updated : Feb 28, 2021, 10:05 PM IST

ಬಿಗ್ ಬಾಸ್ ಸೀಸನ್-8ರ ಆರಂಭವೂ ಗ್ರ್ಯಾಂಡ್ ಆಗಿ ಆಗಿದ್ದು, ಸುದೀಪ್ ಕಾರ್ಯಕ್ರಮದ ನಿರೂಪಣೆಯನ್ನು ಆರಂಭಿಸಿದ್ದಾರೆ.

ಬಿಗ್ ಬಾಸ್ ಸೀಸನ್-8
ಬಿಗ್ ಬಾಸ್ ಸೀಸನ್-8

ಮೊದಲ ಬಾರಿಗೆ ವೇದಿಕೆ ಮೇಲೆ ನಟ ಸುದೀಪ್​​ಗೆ ಟ್ವಿಸ್ಟ್ ನೀಡುವ ಮೂಲಕ ಬಿಗ್​ಬಾಸ್​ ಕಾರ್ಯಕ್ರಮ ಪ್ರಾರಂಭವಾಯಿತು. ನಂತರ ಸುದೀಪ್‌ ಬಿಗ್ ಬಾಸ್ ಮನೆ ಪ್ರವೇಶಿಸಿ ಮನೆಯನ್ನು ತೋರಿಸಿದರು. ಟಿಕ್ ಟಾಕ್ ಸ್ಟಾರ್ ಧನುಶ್ರೀ ಸೀಸನ್ 8ರ ಮೊದಲ ಸ್ಪರ್ಧಿಯಾಗಿ‌ ಪ್ರವೇಶಿಸಿದರು. ಇವರ ಜೊತೆ ಅವರ ಅಮ್ಮ, ಅಪ್ಪ, ಅಣ್ಣ ಆಗಮಿಸಿದ್ದರು.

ಟಾಕ್ ಸ್ಟಾರ್ ಧನುಶ್ರೀ

ಎರಡನೇ ಸ್ಪರ್ಧಿಯಾಗಿ ಶುಭಾ ಪೂಂಜಾ ಆಗಮಿಸಿದ್ದು, ಅವರಿಗೆ ಉಪ್ಪಿನಕಾಯಿ ಇಷ್ಟ ಅಂತೆ. ಅವರ ಜೊತೆ ತಾಯಿ, ನಿಶ್ಚಿತಾರ್ಥವಾದ ಹುಡುಗ ಹಾಗೂ ನಿರ್ದೇಶಕಿ ಸುಮನಾ ಕಿತ್ತೂರು ಆಗಮಿಸಿದ್ದರು.

ಎರಡನೇ ಸ್ಪರ್ಧಿ ಶುಭಾ ಪೂಂಜಾ

ಮೂರನೇ ಸ್ಪರ್ಧಿಯಾಗಿ ಶಂಕರ್ ಅಶ್ವಥ್ ಎಂಟ್ರಿ ನೀಡಿದ್ದಾರೆ. ಹಿರಿಯ ನಟ ಅಶ್ವಥ್ ಅವರ ಮಗ ಇವರು. ಇವರೊಂದಿಗೆ 90 ವರ್ಷ ದಾಟಿದ ತಾಯಿ, ಪತ್ನಿ ಹಾಗೂ ಪುತ್ರ ಬಂದಿದ್ದರು. ಪ್ರಸ್ತುತ ಮೈಸೂರಿನಲ್ಲಿ ಟ್ಯಾಕ್ಸಿ ಡ್ರೈವರ್​ ಆಗಿ ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಮೂರನೇ ಸ್ಪರ್ಧಿ ಶಂಕರ್ ಅಶ್ವತ್

ಈ ಶೋನಲ್ಲಿ 19 ವರ್ಷದ ಸಿಂಗರ್ ವಿಶ್ವನಾಥ್ ನಾಲ್ಕನೇ ಸ್ಪರ್ಧಿಯಾಗಿದ್ದಾರೆ. ಮನೆಯಲ್ಲಿ ಅತ್ಯಂತ ಕಿರಿಯ ಸ್ಪರ್ಧಿಯಾಗಿ ಮನೆ ಪ್ರವೇಶಿಸಿದ್ದಾರೆ. ಧಾರವಾಡದ ಗಾಯಕ ಕನ್ನಡ ಕೋಗಿಲೆಯಲ್ಲಿ ಸ್ಪರ್ಧಿಸಿದ್ದರು. ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿ ಪಾತ್ರಧಾರಿ ವೈಷ್ಣವಿ ಗೌಡ ಐದನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ಅವರ ತಂದೆ, ತಾಯಿ ಬಂದಿದ್ದರು.

ವೈಷ್ಣವಿ ಗೌಡ ಐದನೇ ಸ್ಪರ್ಧಿ

ಓದಿ: ಬಿಗ್​ಬಾಸ್​ ಶೋಗೆ ಕಿಚ್ಚ ಸುದೀಪ್ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

ಬಿಗ್ ಬಾಸ್ ಕನ್ನಡ 8ನೇ ಆವೃತ್ತಿಯಲ್ಲಿ 6ನೇ ಸ್ಪರ್ಧಿಯಾಗಿ ರೇಸರ್ ಅರವಿಂದ್ ಎಂಟ್ರಿ ಕೊಟ್ಟಿದ್ದಾರೆ. ಅರವಿಂದ್ ಬೈಕ್ ರೇಸರ್, ಸಾಹಸ ಕಲಾವಿದ. ಹಲವು ಸಿನಿಮಾಗಳಲ್ಲಿ, ಜಾಹೀರಾತುಗಳಲ್ಲಿ ಸಾಹಸ ಕಲಾವಿದನಾಗಿ ಕಾಣಿಸಿಕೊಂಡಿದ್ದಾರೆ. ಸ್ಟಾರ್ ಕ್ರಿಕೆಟಿಗರಿಗೆ, ಸ್ಟಾರ್ ಹೀರೋಗಳಿಗೆ ಡೂಪ್ ಕಲಾವಿದನಾಗಿ ಕೆಲಸ ಮಾಡಿದ್ದಾರೆ.

ಏಳನೇ ಸ್ಪರ್ಧಿಯಾಗಿ ನಟಿ ನಿಧಿ ಸುಬ್ಬಯ್ಯ ಆಗಮಿಸಿದ್ದು, ನಟಿ ನಿಶ್ಚಿಕಾ ನಾಯ್ಡು ಡಾನ್ಸ್​ ಪ್ರದರ್ಶನದ ಮೂಲಕ ನಿಧಿ ಅವರನ್ನು ವೇದಿಕೆ ಮೇಲೆ ಬರಮಾಡಿಕೊಂಡರು.

ಏಂಟನೇ ಸ್ಪರ್ಧಿಯಾಗಿ ಮನೆ ಪ್ರವೇಶ ಮಾಡಿದ್ದು ಬ್ರೋ ಗೌಡ. ಮೂಲ ಹೆಸರು ಶಮಂತಾ. ಆದರೆ, ಬ್ರೋ ಗೌಡ ಎಂದೇ ಖ್ಯಾತಿ ಗಳಿಸಿಕೊಂಡಿದ್ದಾರೆ, ವೆಬ್‌ ಸಿರೀಸ್‌ವೊಂದರಲ್ಲಿ ನಟಿಸಿದ್ದರಂತೆ. ಅಲ್ಲಿ ಬ್ರೋ ಗೌಡ ಎಂಬ ಪಾತ್ರ ನಿರ್ವಹಿಸಿದ್ದರು.

9ನೇ ಸ್ಪರ್ಧಿಯಾಗಿ ಗೀತಾ ಭಟ್ ಎಂಟ್ರಿ ಕೊಟ್ಟಿದ್ದು, ಹಾಡುಗಾರ್ತಿ ಕೂಡ ಆಗಿರುವ ಗೀತಾ ಭಟ್, ಬ್ರಹ್ಮಗಂಟು ಧಾರಾವಾಹಿ ಮೂಲಕ ಮನೆ ಮಾತಾಗಿದ್ದಾರೆ.

10ನೇ ಸ್ಪರ್ಧಿಯಾಗಿ ಮಜಾ ಭಾರತ ಖ್ಯಾತಿಯ ಕಾಮಿಡಿ ಸ್ಟಾರ್ ಮಂಜು ಪಾವಗಡ ಎಂಟ್ರಿ ಕೊಟ್ಟಿದ್ದಾರೆ. ತುಂಬಾ ಕಷ್ಟಪಟ್ಟು ನಟನ ವೃತ್ತಿಗೆ ಕಾಲಿಟ್ಟಿರುವ ಮಂಜು ಬಿಗ್ ಬಾಸ್ ಮನೆಯಲ್ಲಿ ಎಲ್ಲರನ್ನೂ ರಂಜಿಸಲಿದ್ದಾರೆಯೇ ಎಂಬುದನ್ನು ಕಾದುನೋಡಬೇಕಿದೆ.

11ನೇ ಸ್ಪರ್ಧಿಯಾಗಿ ಕಿರುತೆರೆ ನಟಿ ಮತ್ತು ಮಾಡೆಲ್ ದಿವ್ಯಾ ರಾವ್ ಮನೆ ಪ್ರವೇಶಿಸಿದ್ದು, ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ನಟಿಸಿರುವ ದಿವ್ಯಾ, ತೆಲುಗು ಸಿನಿಮಾರಂಗದಲ್ಲೂ ಮಿಂಚಿದ್ದಾರೆ.

Last Updated : Feb 28, 2021, 10:05 PM IST

ABOUT THE AUTHOR

...view details