ಕರ್ನಾಟಕ

karnataka

ETV Bharat / sitara

ಬಿಗ್​​ಬಾಸ್​​ ಸೀಸನ್​​ 7 ಪ್ರೋಮೋ ಮೇಕಿಂಗ್ ಹೀಗಿದೆ ನೋಡಿ - ಬಿಗ್​​ಬಾಸ್​​ ಸೀಸನ್​​ 7

ಕಿಚ್ಚ ಸುದೀಪ್ ಸಾರಥ್ಯದಲ್ಲಿ ಪ್ರಸಾರವಾಗುತ್ತಿರುವ ಬಿಗ್​​ಬಾಸ್​​​​ ಸೀಸನ್ 7ಕ್ಕೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಕಾರ್ಯಕ್ರಮದ ಪ್ರೋಮೋ ಶೂಟ್ ಕೂಡಾ ನಡೆದಿದ್ದು, ಶೀಘ್ರದಲ್ಲೇ ವಾಹಿನಿಯಲ್ಲಿ ಪ್ರೋಮೋ ಪ್ರಸಾರವಾಗಲಿದೆ.

ಪ್ರೋಮೋ ಮೇಕಿಂಗ್

By

Published : Sep 14, 2019, 1:05 PM IST

ಪ್ರೇಕ್ಷಕರ ಅಚ್ಚುಮೆಚ್ಚಿನ ರಿಯಾಲಿಟಿ ಶೋ ಬಿಗ್​ಬಾಸ್ ಸೀಸನ್​-7 ಮುಂದಿನ ತಿಂಗಳಿನಿಂದ ಆರಂಭವಾಗಲಿದೆ ಎಂದು ಈಗಾಗಲೇ ವಾಹಿನಿ ತಿಳಿಸಿದೆ. ಕಳೆದ 6 ವರ್ಷಗಳಿಂದ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮದ ಮುಂದಿನ ಸೀಸನ್ ಯಾವಾಗ ಆರಂಭವಾಗಲಿದೆಯೋ ಎಂದು ವೀಕ್ಷಕರು ಕಾಯುತ್ತಿದ್ದರು.

ಕಳೆದ 6 ಸೀಸನ್​​ಗಳನ್ನು ಯಶಸ್ವಿಯಾಗಿ ನಿರೂಪಿಸಿರುವ ಕಿಚ್ಚ ಸುದೀಪ್ ಇದೀಗ 7ನೇ ಸೀಸನ್​​​ಗೆ ಅಣಿಯಾಗಿದ್ದಾರೆ. ಈ ಸೀಸನ್​​ ಕೂಡಾ ವಿಭಿನ್ನವಾಗಿ ತೆರೆ ಮೇಲೆ ತರಲು ಸಕಲ ಸಿದ್ಧತೆಗಳೂ ನಡೆದಿವೆ. ಎರಡು ದಿನಗಳ ಹಿಂದಷ್ಟೇ ಪ್ರೋಮೋ ಶೂಟ್ ಕೂಡಾ ನಡೆದಿದೆ. ಈ ವಿಡಿಯೋವನ್ನು ಕಲರ್ಸ್ ಕನ್ನಡ ವಾಹಿನಿ ತನ್ನ ಫೇಸ್​​​ಬುಕ್ ಪೇಜ್​​​ನಲ್ಲಿ ಶೇರ್ ಮಾಡಿಕೊಂಡಿದೆ. ಈ ಬಾರಿ ಸಾಮಾನ್ಯ ಜನರಿಗಿಂತ ಸೆಲಬ್ರಿಟಿಗಳೇ ಹೆಚ್ಚಾಗಿ ಇರುತ್ತಾರೆ ಎಂದು ವಾಹಿನಿ ಹೇಳಿದೆ. ಇನೋವೇಟಿವ್ ಫಿಲಂ ಸಿಟಿಯಲ್ಲಿರುವ ಬಿಗ್​​​​​​​​​​​​​ಬಾಸ್ ಮನೆಯನ್ನು ನವೀಕರಣ ಮಾಡಲಾಗುತ್ತಿದೆ. ಅನುಬಂಧ ಅವಾರ್ಡ್ ಕಾರ್ಯಕ್ರಮ ಪ್ರಸಾರವಾಗುವ ವೇಳೆ ಬಿಗ್​ಬಾಸ್​​-7ರ ಪ್ರೋಮೋವನ್ನು ಕೂಡಾ ಬಿಡುಗಡೆ ಮಾಡಲಾಗುವುದು ಎಂದು ವಾಹಿನಿ ತಿಳಿಸಿದೆ.

ABOUT THE AUTHOR

...view details