ಎಲ್ಲರೂ ಕುತೂಹಲದಿಂದ ಕಾಯುತ್ತಿರುವ ಬಿಗ್ ಬಾಸ್ ಸೀಸನ್ 7 ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೊಸ ಪ್ರೋಮೋ ಬಿಡುಗಡೆ ಮಾಡಿರುವ ಕಲರ್ಸ್ ಕನ್ನಡ ವಾಹಿನಿ ಕಾರ್ಯಕ್ರಮದ ದಿನಾಂಕವನ್ನು ಕೂಡಾ ಪ್ರಕಟಿಸಿದೆ. ಅಕ್ಟೋಬರ್ 13 ರಿಂದ ರಾತ್ರಿ 9 ಗಂಟೆಗೆ ಕಾರ್ಯಕ್ರಮ ನಿಮ್ಮ ಮುಂದೆ ಬರಲಿದೆ.
ಬಿಗ್ಬಾಸ್ ಸೀಸನ್ 7 ಹೊಸ ಪ್ರೋಮೋ ಬಿಡುಗಡೆ... 'ಅಸಲಿ ಆಟ' ಯಾವಾಗಿಂದ ಶುರು? - ಸೆಲಬ್ರಿಟಿಗಳು
ವೀಕ್ಷಕರು ಕಾತರದಿಂದ ಕಾಯುತ್ತಿರುವ ಬಿಗ್ಬಾಸ್ ಸೀಸನ್ 7 ಅಕ್ಟೋಬರ್ 13 ರಿಂದ ಪ್ರಸಾರವಾಗುತ್ತಿದೆ. ಪ್ರತಿ ರಾತ್ರಿ 9 ಗಂಟೆಗೆ ಕಾರ್ಯಕ್ರಮ ಪ್ರಸಾರವಾಗಲಿದ್ದು ಈ ಬಾರಿ ವಿವಿಧ ಕ್ಷೇತ್ರಗಳಿಗೆ ಸೇರಿದ 15 ಸೆಲಬ್ರಿಟಿಗಳು ಕಾರ್ಯಕ್ರಮದಲ್ಲಿ ಸ್ಪರ್ಧಿಸಲಿದ್ದಾರೆ ಎಂದು ವಾಹಿನಿ ತಿಳಿಸಿದೆ.
![ಬಿಗ್ಬಾಸ್ ಸೀಸನ್ 7 ಹೊಸ ಪ್ರೋಮೋ ಬಿಡುಗಡೆ... 'ಅಸಲಿ ಆಟ' ಯಾವಾಗಿಂದ ಶುರು?](https://etvbharatimages.akamaized.net/etvbharat/prod-images/768-512-4599365-thumbnail-3x2-biggboss.jpg)
ಈ ಬಾರಿ ಸಾಮಾನ್ಯ ಸ್ಪರ್ಧಿಗಳಿಗೆ ಅವಕಾಶ ಇರದೆ ಕೇವಲ ಸೆಲಬ್ರಿಟಿಗಳು ಮಾತ್ರ ಕಾರ್ಯಕ್ರಮದಲ್ಲಿ ಸ್ಫರ್ಧಿಸುತ್ತಾರೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ. ಅದರಂತೆ ಹಲವರ ಹೆಸರು ಕೇಳಿಬಂದಿದೆ. ನಟಿಯರಾದ ಅಮೂಲ್ಯ, ಶರ್ಮಿಳಾ ಮಾಂಡ್ರೆ, ರಾಗಿಣಿ ದ್ವಿವೇದಿ, ಶ್ವೇತಾ ಪ್ರಸಾದ್, ಹಾಸ್ಯ ಕಲಾವಿದರಾದ ಕೆ.ಆರ್. ಪೇಟೆ ಶಿವರಾಜ್, ಕುರಿ ಪ್ರತಾಪ್, ಗಾಯಕ ಹನುಮಂತು, ಅಗ್ನಿ, ನೇಹಾ ಪಾಟೀಲ್ ಸೇರಿದಂತೆ ಹಲವರ ಹೆಸರು ಈ ಬಾರಿ ಕೇಳಿಬಂದಿದೆ. ಇನ್ನು ಈ ಬಾರಿ ಕಾರ್ಯಕ್ರಮ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಆದರೆ ಸಾಮಾನ್ಯರಿಗೆ ಈ ಬಾರಿ ಅವಕಾಶ ನೀಡದಿರುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ಕೂಡಾ ವ್ಯಕ್ತವಾಗಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಕಿಚ್ಚ ಸುದೀಪ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸಿನಿಮಾ, ಕಿರುತೆರೆ, ರಾಜಕೀಯ, ಕ್ರೀಡಾ ವಿಭಾಗಗಳ 15 ಮಂದಿ ಬಿಗ್ ಬಾಸ್ ಮನೆ ಪ್ರವೇಶಿಸಲಿದ್ದಾರೆ ಎನ್ನಲಾಗಿದೆ.