ಮುಂಬೈ:ಬಾಲಿವುಡ್ನ ಖ್ಯಾತ ನಿರ್ದೇಶಕ, ನಿರ್ಮಾಪಕಕರಣ್ ಜೋಹರ್ ನಡೆಸಿಕೊಡುತ್ತಿದ್ದ ಬಿಗ್ ಬಾಸ್-1 ಒಟಿಟಿ(Bigg Boss OTT) ಫಿನಾಲೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. 42 ದಿನಗಳ ಕಾಲ ನಡೆದ ಈ ಶೋನಲ್ಲಿ 14 ಸ್ಪರ್ಧಿಗಳು ಭಾಗವಹಿಸಿದ್ದು, ದಿವ್ಯಾ ಅಗರ್ವಾಲ್ ಸ್ಪರ್ಧೆಯ ವಿಜೇತರಾಗಿ ಟ್ರೋಫಿ ಹಾಗೂ 25 ಲಕ್ಷ ರೂ. ಬಹುಮಾನ ಮುಡಿಗೇರಿಸಿಕೊಂಡಿದ್ದಾರೆ.
ಬಿಗ್ ಮನೆಯಲ್ಲಿ ಸದಾ ಆಕ್ಟೀವ್ ಆಗಿದ್ದ ಸ್ಪರ್ಧಿ ದಿವ್ಯಾ ಅಗರ್ವಾಲ್ ಬಿಬಿ ಒಟಿಟಿ ಸೀಸನ್ 1ರ ವಿಜೇತರಾಗಿ ಹೊರಹೊಮ್ಮಿದ್ದಾರೆ. ನಿಶಾಂತ್ ಮೊದಲ ರನ್ನರ್ ಅಪ್, ನಟಿ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಎರಡನೇ ರನ್ನರ್ ಅಪ್, ರಾಕೇಶ್ ಮೂರನೇ ರನ್ನರ್ ಅಪ್ ಮತ್ತು ಪ್ರತೀಕ್ ನಾಲ್ಕನೇ ರನ್ನರ್ ಅಪ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.