ಬಿಗ್ಬಾಸ್ ಸೀಸನ್ 8ರಲ್ಲಿ ಅತಿ ಹೆಚ್ಚು ಟಾಕ್ ಆಗುತ್ತಿರುವುದು ದಿವ್ಯಾ ಉರುಡುಗ ಬಗ್ಗೆ. ಯಾವುದೇ ವಿಚಾರದಲ್ಲಾದರೂ ಬಿಗ್ಬಾಸ್ ಮನೆಯೊಳಗೆ ಸದಾ ಸುದ್ದಿಯಲ್ಲಿರುವ ಇವರು ಈ ವಾರ ಕ್ಯಾಪ್ಟನ್ಸಿಗಾಗಿ ಸಖತ್ ಆಗಿ ಟಾಸ್ಕ್ ನಿರ್ವಹಣೆ ಮಾಡಿದ್ದಾರೆ. ಈ ಮೂಲಕ ಪ್ರಸಕ್ತ ಆವೃತ್ತಿಯ ಮೊದಲ ಮಹಿಳಾ ಕ್ಯಾಪ್ಟನ್ ಆಗಿಯೂ ಹೊರಹೊಮ್ಮಿದರು.
ಬಿಗ್ಬಾಸ್ ಎರಡನೇ ಇನ್ನಿಂಗ್ಸ್ ಎರಡನೇ ವಾರವನ್ನು ಪೂರ್ಣಗೊಳಿಸಿದ್ದು, ಮೂರನೇ ವಾರಕ್ಕೆ ಕಾಲಿಟ್ಟಿದೆ. ದಿನದಿಂದ ದಿನಕ್ಕೆ ಕಾರ್ಯಕ್ರಮ ಕುತೂಹಲ ಕೆರಳಿಸುತ್ತಾ ಸಾಗಿದೆ. ಸೂರ್ಯಸೇನೆ ಹಾಗೂ ಕ್ವಾಟ್ಲೆ ಕಿಲಾಡಿಗಳು ತಂಡಗಳು ಕ್ಯಾಪ್ಟನ್ಸಿಗಾಗಿ ಸತತ ಮೂರು ದಿನಗಳ ಕಾಲ ಟಾಸ್ಕ್‌ಗಳನ್ನು ಆಡಿದ್ದರು. ಸೂರ್ಯಸೇನೆ ತಂಡದಲ್ಲಿ ದಿವ್ಯಾ ಉರುಡುಗ ಹಾಗೂ ವೈಷ್ಣವಿ ಇದ್ದರು.
ಈ ಬಾರಿ ಕ್ಯಾಪ್ಟನ್ಸಿಗಾಗಿ ಬಿಗ್ಬಾಸ್ ನೀಡಿದ ಟಾಸ್ಕ್ ವಿಶೇಷವಾಗಿತ್ತು. ಸೂರ್ಯ ಸೇನೆ ತಂಡದ ಆರು ಮಂದಿ ಸದಸ್ಯರಿಗೆ ಸೂಚಿಸಿದ ಸಮಯದೊಳಗೆ ಅತಿ ಹೆಚ್ಚು ಬಟ್ಟೆಗಳನ್ನು ತೊಡಬೇಕಾಗಿತ್ತು. ಅದರಲ್ಲಿ 81 ಬಟ್ಟೆಗಳನ್ನು ತೊಟ್ಟುಕೊಳ್ಳುವ ಮೂಲಕ ಎಲ್ಲರಿಗಿಂತ ಹೆಚ್ಚು ಅಂಕಗಳನ್ನು ದಿವ್ಯಾ ಉರುಡುಗ ಪಡೆದರು. ಈ ಮೂಲಕ ಈ ವಾರದ ಕ್ಯಾಪ್ಟನ್ಸ್ ಆಗಿ ಅವರು ಆಯ್ಕೆಯಾದರು.