ಸಾಕಷ್ಟು ನಟಿಯರ ವಿಥ್ ಮೇಕಪ್ ಹಾಗೂ ವಿಥೌಟ್ ಮೇಕಪ್‌ಗಳು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿರುತ್ತವೆ. ಅಂತೆಯೇ ಈ ಬಾರಿ ಬಿಗ್ಬಾಸ್ ಮನೆಗೆ ಎಂಟ್ರಿಕೊಟ್ಟ ಧನುಶ್ರೀ ಕೂಡ ಟ್ರೋಲ್ ಆಗುತ್ತಿದ್ದಾರೆ.
ಹೌದು, ಧನುಶ್ರೀ ಅವರು ಬಿಗ್ ಬಾಸ್ ಮನೆಯೊಳಗೆ ಮೇಕಪ್ ವಿಚಾರವಾಗಿ ಎಲ್ಲರಿಗೂ ಶಾಕ್ ನೀಡಿದ್ದಾರೆ. ಹೇರ್‌ಸ್ಟೈಲ್ ಮಾಡಿಕೊಂಡು, ಮುಖಕ್ಕೆ ಮೇಕಪ್ ಮಾಡಿಕೊಂಡು ಸ್ನಾನಕ್ಕೆ ಹೋಗಿದ್ದಾರೆ. ಈ ವಿಚಾರ ಮಂಜು ಪಾವಗಡ ಅವರ ಗಮನಕ್ಕೆ ಬಂದಿದೆ.
ಬಿಗ್ ಬಾಸ್ ಮೂರನೇ ದಿನದಲ್ಲಿ ಬೆಳಗ್ಗೆ 8 ಗಂಟೆಗೆ ಸಾಂಗ್ ಪ್ರಸಾರವಾಗಿತ್ತು. ಈ ವೇಳೆ ಮಂಜು ಹೊರಗೆ ಹಲ್ಲು ಉಜ್ಜುತ್ತಿದ್ದರು. ಆಗ ಧನುಶ್ರೀ ಸ್ನಾನ ಮುಗಿಸಿ ಹೊರ ಬಂದಿದ್ದರು. ಧನುಶ್ರೀ ನೋಡಿದ ಮಂಜು ಅಚ್ಚರಿಯಿಂದ ಸ್ನಾನದ ಮನೆಯಿಂದ ಮೇಕಪ್ ಮಾಡಿಕೊಂಡು ಬಂದಿರೇ? ಎಂದು ಅವರನ್ನು ಮಂಜು ಪ್ರಶ್ನಿಸಿದ್ದಾರೆ. ಆಗ ಧನುಶ್ರೀ, ಇಲ್ಲ, ನಾನು ಮೇಕಪ್ ಮಾಡಿಕೊಂಡೇ ಸ್ನಾನ ಮಾಡೋಕೆ ಹೋಗಿದ್ದೆ ಎಂದಿದ್ದಾರೆ. ಇದನ್ನು ಕೇಳಿ ಮಂಜು ಶಾಕ್ ಆಗಿದ್ದರು.
ಈ ವಿಚಾರದ ಬಗ್ಗೆ ಕೆಲ ನಿಮಿಷಗಳ ಕಾಲ ಚರ್ಚೆ ನಡೆದಿದೆ. ಆಗ ಮಧ್ಯೆ ಬಂದ ಪ್ರಶಾಂತ್, ಆ ಮೇಕಪ್ ತೆಗೆಯೋಕೆ ಏನಿಲ್ಲವೆಂದರೂ ಒಂದು ವರ್ಷ ಬೇಕು ಎಂದು ನಕ್ಕರು. ಇದನ್ನು ಕೇಳಿದ ಮನೆಯವರೆಲ್ಲರೂ ನಗೆಗಡಲಲ್ಲಿ ತೇಲಿದ್ದಾರೆ.
ಬ್ರೋ ಗೌಡ ವಿರುದ್ಧ ಪ್ರಶಾಂತ್ ಕೆಂಡಾಮಂಡಲು:
ಇನ್ನು ಎಲ್ಲಾ ಸ್ಪರ್ಧಿಗಳು ಒಟ್ಟಿಗೆ ಕುಳಿತು ಕಾಲ ಕಳೆಯುತ್ತಿದ್ದ ವೇಳೆ ದಿವ್ಯಾ ಉರುಡುಗ ಜೊತೆ ಪ್ರಶಾಂತ್ ಸಂಬರಗಿ ಹೆಜ್ಜೆ ಹಾಕಿದ್ರು. ಅದಕ್ಕೂ ಮುನ್ನ ಆಯಕ್ಷನ್ ಅಂತಾ ಸ್ಪರ್ಧಿಯೊಬ್ಬರು ಹೇಳಿದ್ರು. ಅದಕ್ಕೆ ಬ್ರೋ ಗೌಡ ಓವರ್ ರಿಯಾಕ್ಷನ್ ಎಂದರು. ಇಷ್ಟು ಹೇಳಿದ್ದೇ ತಡ ಬ್ರೋ ಗೌಡ ವಿರುದ್ಧ ಪ್ರಶಾಂತ್ ಕೆಂಡಾಮಂಡಲವಾದರು.
ಬ್ರೋ ಗೌಡ ಮೇಲೆ ಕೋಪಿಸಿಕೊಂಡ ಪ್ರಶಾಂತ್ ಸಂಬರಗಿ, ಕ್ಯಾಪ್ಟನ್ ಹೇಗೆ ಇರಬೇಕು ಅಂತ ಮೊದಲೇ ಹೇಳಿದ್ದೆ, ಈಗ ಹೀಗೆ ಹೇಳುತ್ತಿದ್ದೀಯಾ ಎಂದು ಜೋರು ಧ್ವನಿಯಲ್ಲಿ ಮಾತನಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಬ್ರೋ ಗೌಡ, ನಾನು ಫನ್ಗಾಗಿ ಮಾಡಿದ್ದು. ನನಗೆ ಕ್ಯಾಪ್ಟನ್ ಅನ್ನೋ ದವಲತ್ತು ಇಲ್ಲ ಎಂದರು.