ಬಿಗ್ ಬಾಸ್ 8ರ ಸೀಸನ್ ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಳ್ಳುತ್ತಿದ್ದು, ಕೆಲ ಅಭ್ಯರ್ಥಿಗಳು ಬಿಗ್ಬಾಸ್ ಮನೆಯಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದರೆ, ಇನ್ನೂ ಕೆಲವರು ಶಿಕ್ಷೆಗೊಳಗಾಗುತ್ತಿದ್ದಾರೆ. ಇದೀಗ ಈ ಸಲ ಕಪ್ ನಮ್ದೇ ಎಂದು ಹೇಳಿಕೆ ನೀಡಿರುವ ಮಂಜುಗೆ ಬಿಗ್ಬಾಸ್ ಶಿಕ್ಷೆ ನೀಡಿದೆ.
ಏನಿದು ಘಟನೆ: ಕಳೆದ ವಾರ ದಿವ್ಯಾ ಸುರೇಶ್ ಹಾಗೂ ಮಂಜು ಹರಟೆ ಹೊಡೆಯುತ್ತಿದ್ದಾಗ ಮಂಜು ಕಾಫಿ ಕಪ್ ಒಡೆದು ಹಾಕಿದ್ದರು. ಕಪ್ ಒಡೆದು ಹಾಕಿದ್ದಕ್ಕೆ ಸಾರಿ ಬಿಗ್ ಬಾಸ್. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಕೇಳಿಕೊಂಡಿದ್ದರು. ಯಾರಿಗೂ ಗೊತ್ತಾಗದಂತೆ ಇದನ್ನು ಬಚ್ಚಿಡುತ್ತೇನೆ. ಆಮೇಲೆ ಸ್ಪರ್ಧಿಗಳ ಬಳಿ ನನ್ನ ಕಪ್ ಎಲ್ಲಿದೆ ಎಂದು ಪ್ರಶ್ನೆ ಮಾಡುತ್ತೇನೆ ಎಂದು ಹೇಳಿದ್ದರು.