ಬಿಗ್ಬಾಸ್ ಸೀಸನ್-8 ರಿಯಾಲಿಟಿ ಶೋ ಫಿನಾಲೆ ವಾರ ತಲುಪಿದೆ. ಇದೀಗ ಮನೆಯಲ್ಲಿ ವೈಯಕ್ತಿಕ ಟಾಸ್ಕ್ ನೀಡಲಾಗುತ್ತಿದೆ. ಈ ವಾರ ಮನೆಯ ಓರ್ವ ಸದಸ್ಯ ಎರಡು ಲಕ್ಷ ರೂಪಾಯಿ ಗೆಲ್ಲುವ ಅವಕಾಶವಿದೆ. ಇದಕ್ಕಾಗಿ ವಾರ ಪೂರ್ತಿ ಟಾಸ್ಕ್ಗಳನ್ನು ನೀಡುತ್ತಿದ್ದು, ವಾರದ ಕೊನೆಯಲ್ಲಿ ಹೆಚ್ಚು ಅಂಕಗಳಿಸಿದ ಸ್ಪರ್ಧಿ ಎರಡು ಲಕ್ಷ ಬಹುಮಾನ ಗೆಲ್ಲಬಹುದಾಗಿದೆ.
ಸೋಮವಾರ ಬಿಗ್ಬಾಸ್ ಎರಡು ಟಾಸ್ಕ್ ನೀಡಿದ್ದರು. ಮರಗಾಲನ್ನು ಕಟ್ಟಿಕೊಂಡು ನಡೆಯುವ ಟಾಸ್ಕ್ನಲ್ಲಿ ಅರವಿಂದ್ ಹೆಚ್ಚು ಅಂಕ ಗಳಿಸಿದರೆ, ಚಿಕ್ಕ ವಯಸ್ಸಿನ ಫೋಟೊ ನೋಡಿ ಯಾರು ಈ ಸ್ಪರ್ಧಿ ಎಂದು ಗುರುತಿಸುವ ಟಾಸ್ಕ್ನಲ್ಲಿ ಪ್ರಶಾಂತ್ ಹಾಗೂ ದಿವ್ಯ ಸುರೇಶ್ ಹೆಚ್ಚು ಅಂಕ ಗಳಿಸಿದ್ದಾರೆ.