ಕರ್ನಾಟಕ

karnataka

ETV Bharat / sitara

ಒಲವಿನ ಉಡುಗೊರೆ ಮರೆಯೊಲ್ಲ... ಅರವಿಂದ್ ಅಂದ್ರೆ ನನಗಿಷ್ಟ ಎಂದ ದಿವ್ಯಾ - ಬಿಗ್​ಬಾಸ್ ಸೀಸನ್ 8

ಅರವಿಂದ್​ ಜೊತೆಗಿನ ಪ್ರತಿಕ್ಷಣಗಳು ನನಗೆ ಸ್ಪೆಷಲ್. ನನಗೆ ನೋವಾದಾಗ ಅವರು ನೋವುಪಟ್ಟಿದ್ದಾರೆ. ಅವರ ಜೊತೆ ಇದ್ದು ಆಡಿದಾಗ ನಾನು ಸೋತಿಲ್ಲ ಎಂದಿದ್ದಾರೆ ದಿವ್ಯಾ ಉರುಡುಗ.

bigg-boss-8-divya-uruduga-talking-about-aravind
ಅರವಿಂದ್ ಅಂದ್ರೆ ನನಗಿಷ್ಟ ಎಂದ ದಿವ್ಯಾ

By

Published : Aug 3, 2021, 2:47 AM IST

ಬಿಗ್​ಬಾಸ್​ ಮನೆಯ ಸದಸ್ಯರು ಅರವಿಂದ್ ಬಗ್ಗೆ ಮನದಾಳದ ಮಾತುಗಳನ್ನು ಹಂಚಿಕೊಂಡರು. ಆಗ ಅರವಿಂದ್ ‌ಎಂದರೆ ನನಗೆ ನನಗೆ ಇಷ್ಟ, ಅವರೊಂದಿಗೆ ಕಳೆದ ಕ್ಷಣಗಳೆಲ್ಲವೂ ಸ್ಪೆಷಲ್. ಅವರನ್ನು ನಾನು ತುಂಬಾ ಗೌರವಿಸುತ್ತೇನೆ ಎಂದು ಬಿಗ್​ಬಾಸ್​-8 ಸ್ಪರ್ಧಿ ದಿವ್ಯಾ ಉರುಡುಗ ಹೇಳಿದ್ದಾರೆ.

ಬಿಗ್​ಬಾಸ್ ಸೀಸನ್ 8 ರ ಕೊನೆಯ ವಾರ ಕುತೂಹಲ ಮೂಡಿಸಿದ್ದು, ಬಿಗ್​ ಮನೆಯಲ್ಲಿ ಈಡೇರದ ಬಯಕೆಯನ್ನು ಕೇಳಿಕೊಳ್ಳುವಂತೆ ಹೇಳಿದ್ದ ಬಿಗ್​ಬಾಸ್, ಅದರಂತೆ ಬೈಕ್ ರೇಸರ್ ಅರವಿಂದ್ ಅವರ ಆಸೆಯನ್ನು ಮೊದಲ ದಿನವೇ ಈಡೇರಿಸಿದ್ರು. ಅರವಿಂದ್ ಅವರ ಬೈಕ್ ಹಾಗೂ ಫೋಟೋ ಫ್ರೇಮ್ ಗಾರ್ಡನ್ ಏರಿಯಾಗೆ ಬಂದಿತ್ತು.

ಅರವಿಂದ್, ದಿವ್ಯಾ ಉರುಡುಗ

ಇದೇ ವೇಳೆ ಮನೆಯ ಸದಸ್ಯರು ಅರವಿಂದ್ ಬಗ್ಗೆ ಮನದಾಳದ ಮಾತುಗಳನ್ನು ಹಂಚಿಕೊಂಡರು. ಆಗ ದಿವ್ಯಾ ಉರುಡುಗ, ಅರವಿಂದ್ ಜೊತೆ ಕಳೆದ ಕ್ಷಣಗಳೆಲ್ಲ ನನಗೆ ಸ್ಪೆಷಲ್, ಅವರಂದ್ರೆ ನನಗೆ ಇಷ್ಟ. ಅವರು ಬೊಕ್ಕೆ ಹಿಡಿದುಕೊಂಡು ಮನೆಯೊಳಗೆ ಮೊದಲ ಬಾರಿ ಬಂದಾಗ, ಅವರೊಂದಿಗೆ ನಾನು ಇಷ್ಟೊಂದು ಹತ್ತಿರ ಆಗ್ತೀನಿ ಅಂತ ಅಂದುಕೊಂಡಿರಲಿಲ್ಲ. ನನಗೆ ಸಣ್ಣ ಗಾಯವಾದರೂ ಹೇಳ್ತೇನೆ. ಇಷ್ಟೊಂದು ಅನ್ಯೋನ್ಯವಾಗಿ ಇರ್ತೇನೆ ಅಂತ ಅಂದುಕೊಂಡಿರಲಿಲ್ಲ. ನಾನು ಈ ಶೋಗೆ ಬಂದಿದ್ದಕ್ಕೆ ತುಂಬಾ ಅದೃಷ್ಟವಂತೆ ಅನಿಸುತ್ತದೆ ಎಂದರು.

ಅಷ್ಟೇ ಅಲ್ಲ, ಒಲವಿನ ಉಡುಗೊರೆ ಅಂತೂ ನಾನು ಮರೆಯುವುದಿಲ್ಲ. ಅವರೊಂದಿಗಿನ ಪ್ರತಿಕ್ಷಣಗಳು ನನಗೆ ಸ್ಪೆಷಲ್. ನನಗೆ ನೋವಾದಾಗ ಅವರು ನೋವುಪಟ್ಟಿದ್ದಾರೆ. ಅವರ ಜೊತೆ ಇದ್ದು ಆಡಿದಾಗ ನಾನು ಸೋತಿಲ್ಲ. ಅವರೊಂದಿಗೆ ಟೈಮ್ ಕಳೆಯುವುದಕ್ಕೆ ನನಗೆ ಇಷ್ಟ, ಅವರೊಂದಿಗೆ ಇರುವುದಕ್ಕೆ ಖುಷಿ ಎಂದಿದ್ದಾರೆ.

ABOUT THE AUTHOR

...view details