ಕರ್ನಾಟಕ

karnataka

ETV Bharat / sitara

Bigg Boss 15 : ನೋವನ್ನು ಗೇಲಿ ಮಾಡಿದ ರಾಖಿ.. ಶಮಿತಾ ಕಣ್ಣೀರು - ಶಮಿತಾ ಶೆಟ್ಟಿ ಮತ್ತು ರಾಖಿ ಸಾವಂತ್

ನಟಿ ಹಾಗೂ ಸಹ ಸ್ಪರ್ಧಿಯಾದ ರಾಖಿ ಸಾವಂತ್ ಹಾವಭಾವಗಳ ಮೂಲಕ ವ್ಯಂಗ್ಯ ಮಾಡಿ, ಶಮಿತಾ ಶೆಟ್ಟಿಯವರ ನೋವನ್ನು ಹೀಯಾಳಿಸಿದ್ದಾರೆ. ಇದೇ ವೇಳೆ ನನಗೆ ಕೈ ನೋವಿದ್ದು, ತಲೆ ಒಣಗಿಸಿಕೊಳ್ಳುವಾಗ ಕೈಯನ್ನು ನೇರವಾಗಿ ಮೇಲಕ್ಕೆ ಎತ್ತಬಹುದು. ಪಕ್ಕದಿಂದ ಮೇಲಕ್ಕೆ ಎತ್ತಲು ಸಾಧ್ಯವಿಲ್ಲ ಎಂದು ಶಮಿತಾ ನೋವನ್ನು ಹೊರ ಹಾಕಿದ್ದಾರೆ..

Bigg Boss 15: Shamita Shetty tears up as Rakhi Sawant makes fun of her 'pain
Bigg Boss 15: ನೋವನ್ನು ಗೇಲಿ ಮಾಡಿದ ರಾಖಿ: ಶಮಿತಾ ಕಣ್ಣೀರು

By

Published : Dec 26, 2021, 4:01 PM IST

ಹೈದರಾಬಾದ್, ತೆಲಂಗಾಣ : ಬಿಗ್​ ಬಾಸ್ ಸೀಸನ್ 15ರ ವೀಕೆಂಡ್ ವಾರ್​​ನಲ್ಲಿ ಶಮಿತಾ ಶೆಟ್ಟಿ ಭಾವುಕರಾಗಿದ್ದಾರೆ. ಬಾಲಿವುಡ್ ನಟಿ ಹಾಗೂ ಸಹ ಸ್ಪರ್ಧಿಯಾದ ರಾಖಿ ಸಾವಂತ್ ಗೇಲಿ ಮಾಡಿದ ಕಾರಣಕ್ಕೆ ಶಮಿತಾ ಕಣ್ಣೀರು ಹಾಕಿದ್ದು, ಇದ್ದ ಜಾಗದಿಂದ ಬೇರೆಡೆ ತೆರಳಿದ್ದಾರೆ.

ಬಿಗ್​ಬಾಸ್​ ಮನೆಯಲ್ಲಿ ಶಮಿತಾ ಶೆಟ್ಟಿ ತನ್ನ ತಲೆಗೂದಲನ್ನು ಒಣಗಿಸುವಾಗ ಹಾಗೂ ಪಾತ್ರೆಗಳನ್ನು ತೊಳೆಯುವಾಗ ಕೈ ನೋವು ಅನುಭವಿಸುತ್ತಿರುವ ಬಗ್ಗೆ ಕೆಲವು ವೀಕ್ಷಕರಲ್ಲಿ ಕುತೂಹಲ ಮೂಡಿತ್ತು. ಈ ಬಗ್ಗೆ ನಟ ಸಲ್ಮಾನ್ ಖಾನ್ ವೀಕೆಂಡ್ ವಾರ್​ನಲ್ಲಿ ಶಮಿತಾ ಅವರನ್ನು ಪ್ರಶ್ನೆ ಮಾಡಿದ್ದರು.

ಈ ವೇಳೆ ಪ್ರತಿಕ್ರಿಯೆ ನೀಡಿದ ನಟಿ ಹಾಗೂ ಸಹ ಸ್ಪರ್ಧಿಯಾದ ರಾಖಿ ಸಾವಂತ್ ಹಾವಭಾವಗಳ ಮೂಲಕ ವ್ಯಂಗ್ಯ ಮಾಡಿ, ಶಮಿತಾ ಶೆಟ್ಟಿಯವರ ನೋವನ್ನು ಹೀಯಾಳಿಸಿದ್ದಾರೆ. ಇದೇ ವೇಳೆ ನನಗೆ ಕೈ ನೋವಿದ್ದು, ತಲೆ ಒಣಗಿಸಿಕೊಳ್ಳುವಾಗ ಕೈಯನ್ನು ನೇರವಾಗಿ ಮೇಲಕ್ಕೆ ಎತ್ತಬಹುದು.

ಪಕ್ಕದಿಂದ ಮೇಲಕ್ಕೆ ಎತ್ತಲು ಸಾಧ್ಯವಿಲ್ಲ ಎಂದು ಶಮಿತಾ ನೋವನ್ನು ಹೊರ ಹಾಕಿದ್ದಾರೆ. ಅಷ್ಟೇ ಅಲ್ಲ, ಶಮಿತಾ ಸ್ಥಳದಿಂದ ಅಳುತ್ತಲೇ ತೆರಳಿದ್ದಾರೆ. ಮುಂದಿನ ಎಪಿಸೋಡ್​ನಲ್ಲಿ ಮತ್ತಷ್ಟು ಕುತೂಹಲಕಾರಿ ಅಂಶಗಳು ಹೊರ ಬೀಳಲಿವೆ ಎಂದು ಪ್ರೋಮೋದಲ್ಲಿ ತೋರಿಸಲಾಗಿದೆ.

ಇದನ್ನೂ ಓದಿ:ಬಾಲಿವುಡ್​ ನಟ ಸಲ್ಮಾನ್ ಖಾನ್‌ಗೆ ಕಚ್ಚಿದ ಹಾವು: ಹೇಗಿದೆ ಆರೋಗ್ಯ ಸ್ಥಿತಿ?

ABOUT THE AUTHOR

...view details