ಕರ್ನಾಟಕ

karnataka

ETV Bharat / sitara

ಬಿಗ್​ಬಾಸ್-8​: ನಾಮಿನೇಷನ್​ ಟೆನ್ಷನ್​ ಮಧ್ಯೆ ಹೋಳಿ ಆಡಿ ಬಣ್ಣದಲ್ಲಿ ಮಿಂದೆದ್ದ ಕಂಟೆಸ್ಟೆಂಟ್​ಗಳು

ಬಿಗ್​ಬಾಸ್ ಮನೆಯಲ್ಲಿ ಮತ್ತೆ ನಾಮಿನೇಷನ್​ ಶುರುವಾಗಿದ್ದು, ಶುಭ ಪೂಂಜಾ,ನಿಧಿ ಸುಬ್ಬಯ್ಯ,ಅರವಿಂದ್ ಕೆ.ಪಿ, ಶಮಂತ್ ಈ ಬಾರಿ ನಾಮಿನೇಷನ್​ ಆಗಿದ್ದಾರೆ.

bigboss strong  contestants nomination news
ಬಣ್ಣದಲ್ಲಿ ಮಿಂದೆದ್ದ ಮನೆಯ ಸದಸ್ಯರು

By

Published : Mar 30, 2021, 12:39 PM IST

Updated : Mar 30, 2021, 2:02 PM IST

ಬಿಗ್​ಬಾಸ್ ಮನೆಯಲ್ಲಿ 5ನೇ ವಾರದ ನಾಮಿನೇಷನ್ ಪ್ರಕ್ರಿಯೆ ನಡೆದಿದ್ದು, ಶಮಂತ್, ಅರವಿಂದ್ ಕೆ.ಪಿ, ಶಂಕರ್ ಅಶ್ವತ್ಥ್, ನಿಧಿ ಸುಬ್ಬಯ್ಯ ಹಾಗೂ ಶುಭ ಪೂಂಜಾ ನಾಮಿನೇಟ್ ಆಗಿದ್ದಾರೆ.

ಸ್ಟ್ರಾಂಗ್ ಕಂಟೆಸ್ಟೆಂಟ್​ಗಳು ನಾಮಿನೇಟ್
ಬಿಗ್​ಬಾಸ್


ದಿವ್ಯ ಸುರೇಶ್ ಗೌಡ ನಾಮಿನೇಟ್ ಆಗಿದ್ದರು .ಆದರೆ ಬಿಗ್ ಬಾಸ್ ಕ್ಯಾಪ್ಟನ್ ವಿಶ್ವನಾಥ್ ಅವರಿಗೆ ವಿಶೇಷ ಅಧಿಕಾರವನ್ನು ನೀಡಿ ನಾಮಿನೇಟ್ ಆದವರಲ್ಲಿ ಒಬ್ಬರನ್ನು ಸೂಕ್ತ ಕಾರಣ ನೀಡಿ ಉಳಿಸುವಂತೆ ಸೂಚಿಸಿದ್ದರು. ಹೀಗಾಗಿ, ವಿಶ್ವನಾಥ್ ಅವರು ದಿವ್ಯ ಸುರೇಶ್ ಅವರ ಪರ್ಫಾರ್ಮೆನ್ಸ್ ಆಧಾರದಲ್ಲಿ ಅವರನ್ನು ಉಳಿಸುವುದು ಸೂಕ್ತ ಎಂದು ಕಾರಣ ನೀಡಿದರು.

ಸ್ಪರ್ಧಿಗಳಿಗೆ ನಾಮಿನೇಷನ್​ ಟೆನ್ಷನ್

ಬೇಸರ ಹೊರಹಾಕಿದ ಶಂಕರ್:

ಉತ್ತಮ ಆಟ ಎಂದು ಬಂದಾಗ ನಾವು ಪ್ರತೀ ಬಾರಿ ರಾಜೀವ್​, ಮಂಜು, ಅರವಿಂದ್​ ಅವರ ಹೆಸರನ್ನು ಆಯ್ಕೆ ಮಾಡುತ್ತೇವೆ. ಆದರೆ, ಅವರು ಒಂದು ಬಾರಿಯಾದರೂ ನಮ್ಮ ಹೆಸರನ್ನು ಎತ್ತಿಕೊಂಡರಾ? ಗಂಡುಮಕ್ಕಳು ಟಾಸ್ಕ್​ ಆಧಾರದ ಮೇಲೆ ದಿವ್ಯಾ ಉರುಡುಗ, ದಿವ್ಯಾ ಸುರೇಶ್​ ಅವರ ಹೆಸರನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ನಾವು ಬಕೆಟ್​ ಹಿಡ್ಯಲ್ಲ. ಇದ್ದಿದ್ದು ಇದ್ದಂಗೆ ಹೇಳ್ತೀವಿ ಎಂದು ಶಂಕರ್ ಅಶ್ವತ್ಥ್ ಬೇಸರ ಪಟ್ಟಿದ್ದಾರೆ. ಮನೆಯ ಹಿರಿಯ ಸ್ಪರ್ಧಿ ಶಂಕರ್​ ಅಶ್ವತ್ಥ್​ಗೆ ಅತಿ ಹೆಚ್ಚು ಮತಗಳು ಬೀಳುವ ಮೂಲಕ ಅವರು ಮೊದಲು ನಾಮಿನೇಟ್​ ಆಗಿದ್ದಾರೆ.

ಎಲಿಮಿನೇಟ್ ಆದರೂ ಹೊರ ಹೋಗಲ್ಲ:

ದಿವ್ಯ ಸುರೇಶ್ ಹಾಗೂ ಶುಭಾ ಪೂಂಜಾ ಅವರೊಂದಿಗೆ ಗಾರ್ಡನ್ ಏರಿಯಾದಲ್ಲಿ ಮಂಜು ಮಾತನಾಡುತ್ತಿದ್ದರು. ಬಿಗ್​ ಬಾಸ್ ಮನೆಯಿಂದ ಹೊರ ಹೋಗುವ ಬಾಗಿಲನ್ನು ನೋಡಿದರೇ ಭಯ ಆಗುತ್ತದೆ. ಆ ಡೋರ್​ ಓಪನ್​ ಆದರೆ ಸಾವಿನ ಕದ ತೆರೆದಂತಾಗುತ್ತದೆ. ಅಲ್ಲದೇ, ನಾನು ಎಲಿಮಿನೇಟ್​ ಆದರೂ ಮನೆಯಿಂದ ಹೊರ ಹೋಗಲ್ಲ ಎಂದು ಮಂಜು ಹೇಳಿದರು.

ಹೋಳಿ ಆಡಿದ ಮನೆಯ ಸದಸ್ಯರು
ಹೋಳಿ ಆಡಿದ ಮನೆಯ ಸದಸ್ಯರು
ಹೋಳಿ ಆಚರಿಸಿದ ಮನೆಯ ಸದಸ್ಯರು

ಬಣ್ಣದಲ್ಲಿ ಮಿಂದೆದ್ದ ಮನೆಯ ಸದಸ್ಯರು:ಕೇವಲ ಎಲಿಮಿನೇಷನ್ ನಾಮಿನೇಷನ್ ಗುಂಗಿನಲ್ಲಿದ್ದ ಮನೆಯ ಸದಸ್ಯರಿಗೆ ಬೆಳಗಾಗುತ್ತಿದ್ದಂತೆ ಹೋಳಿ ಹಬ್ಬ ಸ್ವಾಗತಿಸಿತು. ಮನೆಯ ಅಂಗಳದಲ್ಲಿ ಪರಸ್ಪರ ಹೋಳಿ ಆಡುತ್ತಾ ಬಣ್ಣ ಎರಚುತ್ತಾ ಸಂಭ್ರಮಿಸಿದರು.

ಬಿಗ್​ ಬಾಸ್​ ಮನೆಯಲ್ಲಿ ಹೋಳಿ
ಬಿಗ್​ ಬಾಸ್​ ಮನೆಯಲ್ಲಿ ಹೋಳಿ
ಬಣ್ಣದಲ್ಲಿ ಮಿಂದೆದ್ದ ಮನೆಯ ಸದಸ್ಯರು
Last Updated : Mar 30, 2021, 2:02 PM IST

ABOUT THE AUTHOR

...view details