ಕರ್ನಾಟಕ

karnataka

ETV Bharat / sitara

ಬಿಗ್ ಬಾಸ್​ ಮನೆಯಿಂದ ಹೊರ ಹೋಗ್ತಾರಾ ಧನುಶ್ರೀ? ಮುಂದಿನ ಸಂಚಿಕೆಯಲ್ಲಿ ಗೊತ್ತಾಗುತ್ತೆ... - big boss house

ನಾಮಿನೇಷನ್​ನಲ್ಲಿ ಶುಭಾ ಪೂಂಜಾ ಸೇಫ್ ಆಗಿದ್ದು, ನಿರ್ಮಲಾ, ರಘುಗೌಡ, ಧನುಶ್ರೀ ಅವರ ಬಿಗ್ ಬಾಸ್ ಮನೆಯ ಭವಿಷ್ಯ ಏನು ಎಂಬುದು ಮುಂದಿನ ಸಂಚಿಕೆಯಲ್ಲಿ ತೀರ್ಮಾನವಾಗಲಿದೆ.

dhanushree
ಧನುಶ್ರೀ?

By

Published : Mar 7, 2021, 12:19 AM IST

ವಾರದ ಕತೆ ಕಿಚ್ಚ ಜೊತೆ ವಿಶೇಷ ಮೊದಲ ಸಂಚಿಕೆಯಲ್ಲಿ ನಟಿ ಶುಭಾ ಪೂಂಜಾ ಹಾಗೂ ಗಾಯಕ ವಿಶ್ವನಾಥ್ ಸೇಫ್ ಆಗಿದ್ದಾರೆ. ಉಳಿದಂತೆ ನಿರ್ಮಲಾ, ಧನುಶ್ರೀ ಹಾಗೂ ರಘುಗೌಡ ಅವರ ಮೇಲೆ ತೂಗುಗತ್ತಿ‌ ನೇತಾಡುತ್ತಿದೆ.

ಹೌದು, ಮೊದಲ ವಾರ ನಾಮಿನೇಷನ್ ಪ್ರಕ್ರಿಯೆ ಹಲವು ಟ್ವಿಸ್ಟ್ ಹಾಗೂ ಟೆಸ್ಟ್ ಗಳನ್ನು ಹೊಂದಿತ್ತು. ಅಂತಿಮವಾಗಿ ಐವರಿದ್ದರು. ಸುದೀಪ್ ಮಾತನಾಡಿ, ಶುಭಾ ‌ಪೂಂಜಾ ಇಡೀ ವಾರ ನಗುತ್ತಾ ಇದ್ದಿರಿ. ಸೀರಿಯಸ್ ಆಗಿ ಇದ್ದಿದ್ದು ಯಾವಾಗ ಅಂತಾರೆ. ಅದಕ್ಕೆ ಶುಭಾ ಪ್ರತಿಕ್ರಿಯಿಸಿ ಎಷ್ಟೇ ನೋವಿದ್ದರೂ ನಗುತ್ತಲೇ ಇರಬೇಕು, ನಗುತ್ತಲೆ ಸ್ವೀಕರಿಸಬೇಕು ಎಂದು ನಿರ್ಧರಿಸಿದ್ದೇನೆ ಎಂದರು. ನಂತರ ಈ ವಾರ ಸೇಫ್ ಆದ ಮೊದಲ ಸ್ಪರ್ಧಿ ಶುಭಾ ಪೂಂಜಾ ಎಂದು ಸುದೀಪ್ ಘೋಷಿಸಿದರು.

ಇದನ್ನೂ ಓದಿ:ಕ್ಯಾಪ್ಟನ್​ಗೆ ಬಿಗ್ ಬಾಸ್ ನಿಯಮದ ಬಗ್ಗೆ ಸ್ಪಷ್ಟತೆ ಇರಲಿ‌ ಎಂದು‌ ಸುದೀಪ್ ಹೇಳಿದ್ದೇಕೆ ಗೊತ್ತಾ?

ಎಲ್ಲರೊಂದಿಗೆ ಒಂದಾಗ್ತೀನಿ. ಮುಂದೆಯೂ ಹೀಗೆ ಇರ್ತಿನಿ. ಎಲ್ಲರನ್ನೂ ಮನರಂಜಿಸುತ್ತಾ ಇದ್ದೀನಿ. ಹೀಗಾಗಿ ನಾನೇ ಸೇಫ್ ಆಗ್ತೀನಿ ಎಂದು ವಿಶ್ವಾಸದಿಂದ ವಿಶ್ವನಾಥ್ ಹೇಳಿಕೊಂಡರು. ಹಾಗೆಯೇ, ಈ ಸಂಚಿಕೆಯ ಕೊನೆಯ ಸೇಫ್ ‌ಸ್ಪರ್ಧಿಯಾದರು.‌

ಇದೀಗ ನಿರ್ಮಲಾ, ರಘುಗೌಡ ‌‌ಹಾಗೂ ಧನುಶ್ರೀ ಅವರು ಉಳಿದುಕೊಂಡಿದ್ದಾರೆ. ಮುಂದಿನ ಸಂಚಿಕೆಯಲ್ಲಿ ಮೂವರ ಬಿಗ್ ಬಾಸ್ ಮನೆಯ ಭವಿಷ್ಯ ತೀರ್ಮಾನವಾಗಲಿದೆ.

ABOUT THE AUTHOR

...view details