ಡಬ್ಬಿಂಗ್ ವಿರೋಧದ ನಡುವೆಯೂ ಕಿರುತೆರೆ ವೀಕ್ಷಕರು ಅನೇಕ ಡಬ್ಬಿಂಗ್ ಧಾರಾವಾಹಿಗಳನ್ನು ಇಷ್ಟ ಪಟ್ಟು ನೋಡುತ್ತಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಾಧಾಕೃಷ್ಣ' ಬಹುತೇಕ ಕಿರುತೆರೆಪ್ರಿಯರ ಅಚ್ಚುಮೆಚ್ಚಿನ ಧಾರಾವಾಹಿಯಾಗಿದೆ.
' ರಾಧಾಕೃಷ್ಣ' ಧಾರಾವಾಹಿಯಲ್ಲಿ ಮಹತ್ವದ ತಿರುವು...ಇಬ್ಬರೂ ಏಕೆ ದೂರಾಗ್ತಾರೆ...? - Star Suvarna channel serial
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಾಧಾಕೃಷ್ಣ' ಧಾರಾವಾಹಿ ಮುಂದಿನ ಎಪಿಸೋಡ್ಗಳನ್ನು ನೋಡಲು ವೀಕ್ಷಕರು ಕಾತರಿಂದ ಕಾಯುತ್ತಿದ್ದಾರೆ. ಈ ವಾರ ಧಾರಾವಾಹಿ ಕಥೆಯಲ್ಲಿ ಮಹತ್ವದ ತಿರುವು ಇರಲಿದೆ.
ಜಗತ್ತಿನ ಮೊದಲ ಮಧುರ ಪ್ರೇಮ ಕಥೆಯಾಗಿರುವ 'ರಾಧಾಕೃಷ್ಣ' ಇತ್ತೀಚೆಗಷ್ಟೇ ಯಶಸ್ವಿ ನೂರು ಸಂಚಿಕೆಯನ್ನು ಪೂರೈಸಿತ್ತು. ಈ ಸಂತಸದ ಬೆನ್ನಲ್ಲೇ 'ರಾಧಾಕೃಷ್ಣ' ಧಾರಾವಾಹಿ ಇದೀಗ ಮಹಾ ತಿರುವು ಪಡೆಯಲಿದೆ. ಇದುವರೆಗೆ ರಾಧಾಕೃಷ್ಣರ ಹುಟ್ಟು ಬಾಲ್ಯ ,ಪ್ರೀತಿ ,ಕಂಸನ ದುಷ್ಟತನ ,ಕೃಷ್ಣನ ಹಲವು ಅವತಾರಗಳು ಪ್ರಸಾರವಾಗಿದ್ದವು. ಈ ಎಪಿಸೋಡ್ಗಳು ಜನರಿಗೆ ಬಹಳ ಇಷ್ಟವಾಗಿದ್ದವು. ಈ ವಾರ ಧಾರಾವಾಹಿಗೆ ರೋಚಕ ತಿರುವು ದೊರೆಯಲಿದೆ.
ರಾಧಾಕೃಷ್ಣರ ಪ್ರೀತಿ ಮದುವೆಯ ಹಂತಕ್ಕೆ ಬಂದು, ಮದುವೆ ನಡೆಯದೆ ನಿಂತು ಹೋಗುತ್ತದೆ. ಇವರಿಬ್ಬರೂ ದೂರಾಗುವುದು ಏಕೆ...?ನಂತರ ಇಬ್ಬರ ಬದುಕಿನಲ್ಲಿ ಏನಾಗಲಿದೆ..? ಎಂಬ ಕೌತುಕಕ್ಕೆ ಈ ವಾರ ತೆರೆ ಬೀಳಲಿದೆ. ಮುಂದಿನ ಎಪಿಸೋಡ್ಗಳನ್ನು ನೋಡಲು ವೀಕ್ಷಕರಂತೂ ಕಾತರದಿಂದ ಕಾಯುತ್ತಿದ್ದಾರೆ.