ಕರ್ನಾಟಕ

karnataka

By

Published : Oct 12, 2019, 6:24 PM IST

ETV Bharat / sitara

ಈ ಬಾರಿ ಬಿಗ್‌ಬಾಸ್ ಮನೆಗೆ ಹೋಗೋರು ಯಾರು? ಇಲ್ಲೊಂದು ಲಿಸ್ಟ್ ಇದೆ ನೋಡಿ

ನಾಳೆಯಿಂದ ಬಿಗ್​​​​​​ಬಾಸ್ 7ನೇ ಆವೃತ್ತಿ ಆರಂಭವಾಗಲಿದ್ದು ಈ ಬಾರಿ 17 ಸೆಲೆಬ್ರಿಟಿಗಳು ಬಿಗ್​ಬಾಸ್ ಮನೆಗೆ ಹೋಗಲಿದ್ದಾರೆ. ವಾಹಿನಿಯು ಸ್ಪರ್ಧಿಗಳ ವಿಚಾರದಲ್ಲಿ ಸೀಕ್ರೆಟ್ ಬಿಟ್ಟುಕೊಡದೆ ಕೊನೆಯಲ್ಲಿ ಸರ್​​ಪ್ರೈಸ್ ನೀಡಲು ನಿರ್ಧರಿಸಿದೆ.

ಬಿಗ್​​​​​​​​ಬಾಸ್

ಬಿಗ್​​​​​​ಬಾಸ್ ಸೀಸನ್​​​​​ 7 ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ‌ ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಮೂರು ಪ್ರೋಮೋಗಳು ಪ್ರೇಕ್ಷಕರ ನಿದ್ದೆಗೆಡಿಸಿದೆ. ಈ ಬಾರಿ 17 ಮಂದಿ ಬಿಗ್​​​​​​ಬಾಸ್ ಮನೆ ಪ್ರವೇಶಿಸಲಿದ್ದಾರೆ. ಕಿಚ್ಚ ಸುದೀಪ್ ನಿರೂಪಣೆಯನ್ನು ಮತ್ತೊಮ್ಮೆ ನೋಡಲು ವೀಕ್ಷಕರು ಕಾದು ಕುಳಿತಿದ್ದಾರೆ.

ಜೈ ಜಗದೀಶ್
ಸುಜಾತ
ಭೂಮಿ ಶೆಟ್ಟಿ

ಕುರಿ ಪ್ರತಾಪ್, ಜೈ ಜಗದೀಶ್, ರಾಜಾ-ರಾಣಿ ಧಾರಾವಾಹಿಯ ಚುಕ್ಕಿ ಪಾತ್ರಧಾರಿ ಚಂದನ ಅನಂತಕೃಷ್ಣ, ಹಾಸ್ಯನಟ ರಾಜು ತಾಳಿಕೋಟೆ, ಕಿನ್ನರಿ ಧಾರಾವಾಹಿಯ ಭೂಮಿ ಶೆಟ್ಟಿ ಹಾಗೂ ಕಿರಣ್ ರಾಜ್, ನಾಗಿಣಿ ಧಾರಾವಾಹಿ ಖ್ಯಾತಿಯ ದೀಪಿಕಾ ದಾಸ್, ಗಾಯಕ-ನಟ ವಾಸುಕಿ ವೈಭವ್​​​​​, ದುನಿಯಾ ರಶ್ಮಿ, ಪಂಕಜ್ ಎಸ್​​. ನಾರಾಯಣ್, ನಿರೂಪಕಿ ಚೈತ್ರಾ ವಾಸುದೇವನ್, ರಾಧಾ ರಮಣ ವಿಲನ್ ಸುಜಾತ, ರವಿ ಬೆಳಗೆರೆ ಹೆಸರು ದಟ್ಟವಾಗಿ ಕೇಳಿ ಬರುತ್ತಿದೆ. ಬಿಗ್​ಬಾಸ್​​​​​ ಕಂಟೆಸ್ಟಂಟ್​​​​​​ಗಳ ಬಗ್ಗೆ ವಾಹಿನಿ ಸೀಕ್ರೆಟ್ ಬಿಟ್ಟುಕೊಟ್ಟಿಲ್ಲ. ಕೊನೆ ಕ್ಷಣದವರೆಗೂ ಗೌಪ್ಯತೆ ಕಾಪಾಡಿಕೊಂಡು ಸರ್​​​​​ಪ್ರೈಸ್ ನೀಡಲು ನಿರ್ಧರಿಸಿದೆ. ಈ ಸಲ ಒಟ್ಟು 17 ಸ್ಪರ್ಧಿಗಳು ಇರಲಿದ್ದಾರೆ ಎಂಬುದು ಮಾತ್ರ ಖಚಿತ. ಅಕ್ಟೋಬರ್ 13 ರಿಂದ ಅಂದರೆ ನಾಳೆಯಿಂದ ಕಲರ್ಸ್ ಕನ್ನಡದಲ್ಲಿ ಸಂಜೆ 6 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿವೆ. ಮುಂದಿನ ನೂರು ದಿನಗಳ ಕಾಲ ಪ್ರತಿದಿನ ರಾತ್ರಿ 8.30-9.30 ವರೆಗೆ ಬಿಗ್​​​​​ಬಾಸ್ ಪ್ರಸಾರವಾಗಲಿದೆ.

ಕಿರಣ್ ರಾಜ್
ದುನಿಯಾ ರಶ್ಮಿ
ರವಿ ಬೆಳಗೆರೆ

ABOUT THE AUTHOR

...view details