ಕರ್ನಾಟಕ

karnataka

ETV Bharat / sitara

ಕ್ಯಾಪ್ಟನ್​ಗೆ ಬಿಗ್ ಬಾಸ್ ನಿಯಮದ ಬಗ್ಗೆ ಸ್ಪಷ್ಟತೆ ಇರಲಿ‌ ಎಂದು‌ ಸುದೀಪ್ ಹೇಳಿದ್ದೇಕೆ ಗೊತ್ತಾ? - big boss house

ಮನೆ ವಿಷಯದಲ್ಲಿ ನಡೆದ ವಾಗ್ವಾದಕ್ಕೆ ಕಿಚ್ಚ ಸುದೀಪ್ ಸ್ಪರ್ಧಿಗಳಾದ ಚಂದ್ರಕಲಾ, ನಿರ್ಮಲಾ‌ ಹಾಗೂ ಕ್ಯಾಪ್ಟನ್ ಬ್ರೋ‌ಗೌಡ ಅವರಿಗೆ ಮೊದಲ ವಾರವೇ ಕಿಚ್ಚ ಸುದೀಪ್ ಸಲಹೆ ನೀಡಿದರು.

big boss
ಬಿಗ್ ಬಾಸ್​

By

Published : Mar 7, 2021, 12:09 AM IST

ಅಡುಗೆ ಮನೆ ವಿಷಯದಲ್ಲಿ ನಡೆದ ವಾಗ್ವಾದಕ್ಕೆ ಕಿಚ್ಚ ಸುದೀಪ್ ಸ್ಪರ್ಧಿಗಳಾದ ಚಂದ್ರಕಲಾ, ನಿರ್ಮಲಾ‌ ಹಾಗೂ ಕ್ಯಾಪ್ಟನ್ ಬ್ರೋ‌ಗೌಡ ಅವರಿಗೆ ಮೊದಲ ವಾರವೇ ಕಿಚ್ಚ ಸುದೀಪ್ ಸಲಹೆ ನೀಡಿದರು.

ವಾರದ ಕತೆ ಕಿಚ್ಚನ ಜೊತೆಯಲ್ಲಿ ಸಂಚಿಕೆಯಲ್ಲಿ ಸುದೀಪ್ ಮೂವರ ಅನಿಸಿಕೆಗಳನ್ನು ಆಲಿಸಿ ಇನ್ಮುಂದೆ ಮಾತಿನಲ್ಲಿ‌ ಮೂವರಲ್ಲೂ ಸ್ಪಷ್ಟತೆ ಇರಲಿ‌ ಎಂದು ಸಲಹೆ‌ ನೀಡಿದರು. ಕಳಪೆ ಪ್ರದರ್ಶನ ನೀಡಿದ್ದ ಧನುಶ್ರೀ ಜೈಲು ಪಾಲಾಗಿದ್ದರು. ಇದಕ್ಕೆ ಶಿಕ್ಷೆಯಾಗಿ ಅಡುಗೆ ಮನೆಯ ತರಕಾರಿಗಳನ್ನು ಧನುಶ್ರಿಯೆ ಕತ್ತರಿಸುವಂತೆ ಬಿಗ್ ಬಾಸ್ ಆದೇಶಿಸಿದ್ದರು. ಆದರೆ, ಚಂದ್ರಕಲಾ ಅವರೇ ಕತ್ತರಿಸಿದ್ದರಿಂದ ಬಿಗ್ ಬಾಸ್ ಮನೆಯಲ್ಲಿದ್ದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿಯನ್ನು ಸ್ಟೋರ್ ರೂಂಗೆ ತಂದಿಡುವಂತೆ ಕ್ಯಾಪ್ಟನ್​ಗೆ ಆದೇಶಿಸುತ್ತಾರೆ.

ಬಿಗ್ ಬಾಸ್​

ಇದಕ್ಕೆ ಪ್ರತಿಕ್ರಿಯಿಸಿದ ಚಂದ್ರಕಲಾ ತಿಂಡಿ ಬೇಗ ಆಗಲಿದೆ ಎಂಬ ಕಾರಣದಿಂದ ಈ ರೀತಿ ಮಾಡಿದ್ದಾಗಿ ತಿಳಿಸುತ್ತಾರೆ. ಇದಕ್ಕೆ ಬೇಸರ ವ್ಯಕ್ತಪಡಿಸಿದ್ದ ಚಂದ್ರಕಲಾ ಅವರನ್ನು ನಿರ್ಮಲಾ ಹಾಗೂ ಶುಭಾ ಪೂಂಜಾ ಸಮಾಧಾನ ಪಡಿಸುತ್ತಾರೆ.

ನಡೆದಿದ್ದೇನು..?

ಈ ಸಂದರ್ಭದಲ್ಲಿ ನಿರ್ಮಲಾ ಒಂದು ಸಲಹೆ ನೀಡುತ್ತಾರೆ. ಇದಕ್ಕೆ ಚಂದ್ರಕಲಾ ತಕರಾರು ಎತ್ತುತ್ತಾರೆ. ನೀನು ಅಡುಗೆ ಮನೆಯಲ್ಲಿ ಇರುವುದಿಲ್ಲ. ಓಡಾಡುತ್ತೀಯಾ, ಮಾತಾಡ್ತೀಯಾ, ಡ್ರೆಸ್ ಮಾಡಿಕೊಂಡು ಬರ್ತಿಯಾ ಇದೇ ಆಗ್ತಿದೆ. ಎಲ್ಲಾ ಆದ ಮೇಲೆ ಬಂದು ಕೇಳ್ತೀಯಾ. ಇನ್ಮೇಲಿಂದ ಮಾಡ್ತೀನಿ. ಕ್ಷಮಿಸಿ‌ ಎಂದು ಕೇಳ್ತಾರೆ. ನಾನು ಅಡುಗೆ ಮನೆಯಲ್ಲಿಲ್ಲದಿದ್ದರೂ ಬೇರೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದೆ ಎನ್ನುವಾಗ ಮತ್ತೆ ಚಂದ್ರಕಲಾ ನಿನಗೂ ಈ‌ ಮನೆಗೂ ಸಂಬಂಧ ಇಲ್ಲದಂತೆ ಇರ್ತೀಯಾ. ನಾನು 40 ಸೀರೆಗಳನ್ನ ತಂದಿದ್ದೇನೆ. ನಾನು ರೆಡಿ ಆಗಬಹುದು ಅಂದಾಗ, ನಿರ್ಮಲಾ‌ ಇನ್ನೊಂದೆಡೆ ಅಡುಗೆ ಮನೆಯಲ್ಲಿ ನಾನೇ ಮಾಡ್ತೀನಿ ಎಂದಾಗ ಚಂದ್ರಕಲಾ‌ ಸುಮ್ಮನಾದರು.‌

ನಿಧಿ ಸುಬ್ಬಯ್ಯ ನಿರ್ಮಲಾ ಬಳಿಗೆ ಬಂದು ಅವರ ಮೇಲೆ ಆಗಿರುವ ತಪ್ಪನ್ನು ಇನ್ನೊಬ್ಬರ ಮೇಲೆ‌ ತೋರಿಸಿದ್ದಾರೆ ಎನ್ನುತ್ತಾರೆ. ಶುಭಾ ಕೂಡ ಮಧ್ಯೆದಲ್ಲಿ ಬಂದು ನೀವು ಸಾರಿ ಕೇಳಿದ್ರು ಮತ್ತೆ ವಾದ ಮಾಡಿದ್ದು ಸರಿಯಲ್ಲ ಅಂತಾರೆ.

ಇದನ್ನೂ ಓದಿ:'ನನ್ನನ್ನು ಕ್ಷಮಿಸಿ ಅಮ್ಮಾ': ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಮಹಿಳಾ ಅಧಿಕಾರಿ!

ಸುದೀಪ್ ಅವರು ಅಡುಗೆ ಮನೆಯಲ್ಲಿ ನಡೆದ ಘಟನೆ ಕುರಿತು ಮೂವರಿಂದಲೂ ಮಾಹಿತಿ ಪಡೆದುಕೊಂಡರು. ನಂತರ ಕಿಚ್ಚ ಸುದೀಪ್ ಮಾತನಾಡಿ, ಬ್ರೊ ಅವರಿಗೆ ನಿಮ್ಮ‌ ಮಾತಿನಲ್ಲಿ ಸ್ಪಷ್ಟತೆ ಇರಬೇಕು. ಕ್ಯಾಪ್ಟನ್ ನಾಳೆ ಯಾರೇ ಆದರೂ ಅವರಿಗೆ ಈ ಸ್ಪಷ್ಟತೆ ಇರಬೇಕು. ಚಂದ್ರಕಲಾ‌ ಅವರು ತಮ್ಮಿಂದ ಆದ ತಪ್ಪಿನ ಸಂದರ್ಭದಲ್ಲಿ ಆಡಿದ ಮಾತಿಗೂ ನಡೆದುಕೊಂಡಿದ್ದಕ್ಕೂ ಸಂಬಂಧ ಇಲ್ಲ.‌ ಮೂವರಲ್ಲೂ ಸ್ಪಷ್ಟತೆ ಇರಬೇಕು ಎಂದು ಸಲಹೆ ನೀಡಿದರು.

ನಿರ್ಮಲಾ ಅವರು ಸೀರೆ‌ ಉಟ್ಟಿದ್ದಕ್ಕೆ ಪ್ರಶಾಂತ್ ಹಾಗೂ ರಘು ಗೌಡ ಅವರಿಂದ ವ್ಯಕ್ತವಾದ ಅಭಿಪ್ರಾಯದ ಬಗ್ಗೆ‌ ಸುದೀಪ್, ಇದು ಅವರವರ ವೈಯಕ್ತಿಕ ಎಂದರು. 10 ಗಂಟೆಗೆ ಸೀರೆ ಉಡಬೇಡಿ, ಇನ್ಮೇಲೆ 12 ಗಂಟೆಗೆ ಓಡಾಡಿ. ಒಂದು ಸೀರೆ ಈ ರೇಂಜ್​ಗೆ ಇರತ್ತೆ ಅಂತ ನಿರ್ಮಲಾ ಅವರಿಂದ ಗೊತ್ತಾಯ್ತು ಎಂದು ಎಲ್ಲರನ್ನೂ ನಗೆಗಡಲಲ್ಲಿ ತೇಲಿಸ್ತಾರೆ.

ಮನೆ ವಿಷಯದಲ್ಲಿ ನಡೆದ ವಾಗ್ವಾದಕ್ಕೆ ಕಿಚ್ಚ ಸುದೀಪ್ ಸ್ಪರ್ಧಿಗಳಾದ ಚಂದ್ರಕಲಾ, ನಿರ್ಮಲಾ‌ ಹಾಗೂ ಕ್ಯಾಪ್ಟನ್ ಬ್ರೋ‌ಗೌಡ ಅವರಿಗೆ ಮೊದಲ ವಾರವೇ ಕಿಚ್ಚ ಸುದೀಪ್ ಸಲಹೆ ನೀಡಿದರು. ವಾರದ ಕತೆ ಕಿಚ್ಚನ ಜೊತೆಯಲ್ಲಿ ಸಂಚಿಕೆಯಲ್ಲಿ ಸುದೀಪ್ ಮೂವರ ಅನಿಸಿಕೆಗಳನ್ನು ಆಲಿಸಿ ಇನ್ಮುಂದೆ ಮಾತಿನಲ್ಲಿ‌ ಮೂವರಲ್ಲೂ ಸ್ಪಷ್ಟತೆ ಇರಲಿ‌ ಎಂದು ಸಲಹೆ‌ ನೀಡಿದರು.

ABOUT THE AUTHOR

...view details