ಕರ್ನಾಟಕ

karnataka

ETV Bharat / sitara

ನಾಮಿನೇಷನ್ ಪ್ರಕ್ರಿಯೆಗೆ ಬಿಗ್ ಟ್ವಿಸ್ಟ್ ನೀಡಿದ ಬಿಗ್ ಬಾಸ್.. - big boss season8

ಬಿಗ್ ಬಾಸ್​ನಲ್ಲಿ ಸ್ಪರ್ಧಿಗಳಿಗೆ ಚಾಲೆಂಜಿಂಗ್ ಸ್ಪರ್ಧೆಯನ್ನು ನೀಡಲಾಗಿದ್ದು, ಪ್ರಶಾಂತ್ ಸಂಬರಗಿ ಮತ್ತು ಮಂಜುನಾಥ್ ಪಾವಗಡ ನಾಮಿನೇಟ್ ಪ್ರಕ್ರಿಯೆಯಿಂದ ಸೇಫಾಗಿದ್ದಾರೆ.

big-boss-kannada-update
ನಾಮಿನೇಷನ್ ಪ್ರಕ್ರಿಯೆಗೆ ಬಿಗ್ ಟ್ವಿಸ್ಟ್ ನೀಡಿದ ಬಿಗ್ ಬಾಸ್..

By

Published : Mar 3, 2021, 12:33 AM IST

ಬೆಂಗಳೂರು: ನಾಮಿನೇಷನ್ ಪ್ರಕ್ರಿಯೆ ನಡೆದ ಮರುದಿನ ಬಿಗ್ ಬಾಸ್ ಮತ್ತೊಂದು ಟ್ವಿಸ್ಟ್ ನೀಡಿದ್ದಾರೆ. ಗಾಯಕ ವಿಶ್ವನಾಥ್ ಹಾಗೂ ಯುಟ್ಯೂಬರ್ ರಘು ಗೌಡ ನಾಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ನಾಮಿನೇಟ್ ಆಗಿದ್ದ ಸ್ಪರ್ಧಿಗಳಿಗೆ ಚಾಲೆಂಜಿಂಗ್ ಸ್ಪರ್ಧೆಯೊಂದನ್ನು ನೀಡುವಂತೆ ಆದೇಶಿಸಿತ್ತು. ಅದರ ಪ್ರಕಾರ ಪ್ರಶಾಂತ್ ಸಂಬರಗಿ ಹಾಗೂ ಮಂಜುನಾಥ್ ಪಾವಗಡ ನಾಮಿನೇಟ್ ಪ್ರಕ್ರಿಯೆಯಿಂದ ಸೇಫ್ ಆಗಿದ್ದಾರೆ.

ಬಲೂನ್ ಓದಿ ಒಡೆಯುವ ಸ್ಪರ್ಧೆಯಲ್ಲಿ ಪ್ರಶಾಂತ್ ಸಂಬರಗಿ ವಿಶ್ವನಾಥ್ ಅವರನ್ನು ಫಿಸಿಕಲಿ ವೀಕ್ ಕ್ಯಾಂಡಿಡೇಟ್ ಎಂದು ಆರಿಸಿದ್ದರು. ಹಾಗೆಯೇ, ವಿಶ್ವ ಆ ಚಾಲೆಂಜ್ ಅಲ್ಲಿ ಸೋತು ನಾಮಿನೇಟ್ ಆದರು.

ಇನ್ನೊಂದೆಡೆ, ಐಸ್ ಕ್ರೀಮ್ ಸ್ಕೂಪ್​ಗಳನ್ನು ಸರಿಯಾಗಿ ಜೋಡಿಸುವ ಚಾಲೆಂಜ್​​ನಲ್ಲಿ ಮಂಜು ತಮಗೆ ಕಾಂಪಿಟೇಟರ್ ರಘು ಗೌಡ ಎನಿಸುತ್ತಿದೆ. ಹೀಗಾಗಿ ಅವರನ್ನು ಚಾಲೆಂಜ್​ಗೆ ಆಹ್ವಾನಿಸುತ್ತೇನೆ ಎಂದು ಹೇಳಿದರು. ನಂತರ ಮಂಜು ಹಲವು ಸುತ್ತುಗಳಲ್ಲಿ ಗೆಲ್ಲುವ ಮೂಲಕ ನಾಮಿನೇಟ್​​ನಿಂದ ಪಾರಾದರು.

ಇದಕ್ಕೂ ಮೊದಲು ಸ್ಪರ್ಧಿಗಳು ತಾವು ಈ ಹಿಂದೆ ಗೆದ್ದಿದ್ದ ಬಹುಮಾನಗಳ ಕುರಿತು ಮಾತನಾಡಿದರು. ಅದರಲ್ಲಿ ಗೀತಾ ಭಟ್ ಅವರು ತಮ್ಮ ತಂದೆ ಈ ಆವಾರ್ಡ್ ಬಂದ ನಂತರ ಖುಷಿಯಾಗಿದ್ದನ್ನು ಹಂಚಿಕೊಂಡರು. ದಿವ್ಯಾ ರಾವ್ ಅವರು ಈ ಪ್ರಶಸ್ತಿ ನನಗೆ ಒಂದು ಹೆಸರು ತಂದುಕೊಟ್ಟಿತು. ಬಾಡಿ ಶೇಮಿಂಗ್ ಮಾಡುತ್ತಿದ್ದರು‌. ಆದರೆ ಅದೇ ನನಗೆ ವರದಾನವಾಗಿದೆ ಎಂದು ನೆನೆದರು.

ಚಂದ್ರಕಲಾ ಮೋಹನ್ ತಮಗೆ ರಾಜ್ಯಸರ್ಕಾರದ ಪೋಷಕ ನಟಿ ಪ್ರಶಸ್ತಿ ಬಗ್ಗೆ ಹಂಚಿಕೊಂಡರು ಋಣಾನುಬಂಧ ಸಿನಿಮಾಗಾಗಿ ಈ ಪ್ರಶಸ್ತಿ ಲಭಿಸಿದ್ದು ಆ ಸಂದರ್ಭದಲ್ಲಿ ಧಾರಾವಾಹಿಗಳಲ್ಲಿ ನಟಿಸುತ್ತಿದ್ದೆ. ಆದರೆ ಅಪಘಾತದಲ್ಲಿ ತಮ್ಮ ಮಗ ಹಾಸಿಗೆ ಹಿಡಿದ ಸಂದರ್ಭದಲ್ಲಿ ಮಾಂಗಲ್ಯ ಸಮೇತ ಚಿನ್ನದ ಸರ ಮಾರಿ ಔಷಧಿ ಕೊಡಿಸಿದ್ದೆ ಎಂದು ನೆನೆದು ಕಣ್ಣೀರು ಹಾಕಿದರು.

ಹಾಗೆ ಶುಭ ಪೂಂಜಾ ಮೊಗ್ಗಿನ ಮನಸ್ಸು ಸಿನಿಮಾಗೆ ರಾಜ್ಯ ಪ್ರಶಸ್ತಿ ಪಡೆದ ಬಗ್ಗೆ ಹಂಚಿಕೊಂಡರು ಇದೊಂದೇ ಪ್ರಶಸ್ತಿ ಬಂದಿದೆ. ನಂತರ ಯಾವುದೇ ಪ್ರಶಸ್ತಿ ಲಭಿಸಲಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಗಾಯಕ ವಿಶ್ವನಾಥ್ ತಾವು ವಯಸ್ಸಿನಲ್ಲಿದ್ದಾಗ ಹಾಡಿದ ಹಾಡಿಗೆ ಬಂದ ಪ್ರಶಸ್ತಿಯನ್ನು ನೆನೆದು ಕನ್ನಡ ನಾಡಿನ ಜೀವನದಿ ಹಾಡನ್ನು ಹಾಡಿ ಆ ದಿನಗಳನ್ನು ಮೆಲುಕು ಹಾಕಿದರು. ಮನೆಯಲ್ಲಿ ಪ್ರಶಾಂತ್ ಸಂಬರಗಿ ಮನಸ್ಸಿಗೆ ನೋವಾಗುವ ರೀತಿಯಲ್ಲಿ ಮಾತನಾಡುತ್ತಾರೆ ಎಂದು ದಿವ್ಯಾ ಕಣ್ಣೀರು ಹಾಕಿದರು.

ರಾತ್ರಿ ಗಾರ್ಡನ್ ಏರಿಯಾದಲ್ಲಿ ಗೀತಾ ಭಟ್ ಹಾಡಿದ‌ ಹಾಡಿಗೆ ಶಮಂತ್ ತಮ್ಮ ಮನೆಯವರು ಹಾಗೂ ಸ್ನೇಹಿತರನ್ನು ನೆನೆಸಿಕೊಂಡು ಕಣ್ಣೀರು ಹಾಕಿದರು. ನಂತರ ಅವರೇ ಸಮಾಧಾನ ಮಾಡಿಕೊಂಡರು. ಮತ್ತೊಂದೆಡೆ ವಿಶ್ವ ಕೂಡ ಮನಸ್ಸಿಗೆ ತುಂಬಾ ನೋವಾಗಿದೆ. ಮೊದಲ ವಾರವೇ ಹೀಗಾಗಿದ್ದು ಬೇಜಾರಾಗಿದೆ ಎಂದು ಹೇಳಿಕೊಂಡರು.

ABOUT THE AUTHOR

...view details