ಕರ್ನಾಟಕ

karnataka

ETV Bharat / sitara

Big Boss: ಮೊದಲ ವಾರದ ಕ್ಯಾಪ್ಟನ್ಸಿ ಯಾರ ಪಾಲು?.. ಕಿಚ್ಚನ ಪಂಚಾಯಿತಿಯಲ್ಲಿಂದು ಎಲಿಮಿನೇಷನ್​ - ಬಿಗ್ ಬಾಸ್ ಕಥೆಗಳು

ಬಿಗ್ ಬಾಸ್ ಕನ್ನಡ ಸೀಸನ್ 8 ರ ಎರಡನೇ ಇನ್ನಿಂಗ್ಸ್ ಮುಂದುವರೆದಿದೆ. ಮೊದಲ ವಾರದ ಕಿಚ್ಚನ ಕಥೆ ಭಾನುವಾರ ನಡೆಯಲಿದೆ. ಒಬ್ಬರು ಮನೆಯಿಂದ ಹೊರ ಹೋಗಲಿದ್ದಾರೆ.

Bigg Boss Kannada Season 8
ಬಿಗ್ ಬಾಸ್ ಕನ್ನಡ ಸೀಸನ್ 8

By

Published : Jun 27, 2021, 6:54 AM IST

ಬಿಗ್ ಬಾಸ್​ ಸೆಕೆಂಡ್ ಇನ್ನಿಂಗ್ಸ್ ಮೊದಲ ವಾರದ ಕ್ಯಾಪ್ಟನ್ ಆಗಿ ಮಂಜು ಪಾವಗಡ ಆಯ್ಕೆಯಾಗಿದ್ದಾರೆ. ಅತಿ ಹೆಚ್ಚು ಟಾಸ್ಕ್ ಗಳಲ್ಲಿ ವಿಜೇತರಾದ ಚಾಲೆಂಜರ್ಸ್ ತಂಡದ ಸದಸ್ಯರು ಕ್ಯಾಪ್ಟನ್ಸಿ ಟಾಸ್ಕ್ ಆಡಿದರು. ಅದೃಷ್ಟದ ಆಟವಾಗಿದ್ದರಿಂದ ಮಂಜು ಪಾವಗಡ ಗೆದ್ದರು. ಹಿಂದಿನ ದಿನ‌ ಬಿಗ್ ಬಾಸ್ ನೀಡಿದ್ದ ಕುರ್ಚಿ ಪಾಲಿಟಿಕ್ಸ್​ ಟಾಸ್ಕ್​ನಲ್ಲಿ 38 ಗಂಟೆಗೂ ಹೆಚ್ಚಿನ ಸಮಯ ಕುಳಿತುಕೊಳ್ಳುವ ಮೂಲಕ ಮಂಜು ಪಾವಗಡ, ಪ್ರಶಾಂತ್ ಸಂಬರಗಿ ಅವರನ್ನು ಸೋಲಿಸಿದ್ದರು.

ಮಹಿಳಾ ಸ್ಪರ್ಧಿಗಳು ಕ್ಯಾಪ್ಟನ್ ಏಕೆ ಆಗುತ್ತಿಲ್ಲ?ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ನಟ ಸುದೀಪ್​ ಮಹಿಳಾ ಸ್ಪರ್ಧಿಗಳು ಏಕೆ ಕ್ಯಾಪ್ಟನ್​ ಆಗಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಮಹಿಳಾ ಸ್ಪರ್ಧಿಗಳು ತಮ್ಮದೇ ಆದ ಸಮಜಾಯಿಷಿ ನೀಡಿದರು. ಆದರೆ, ಸುದೀಪ್ ಅದನ್ನು ನಿರಾಕರಿಸಿದರು.

ಶಮಂತ್ ಕೈಗೆ ಚೊಂಬು :ಸೆಕೆಂಡ್ ಇನ್ನಿಂಗ್ಸ್​ನಲ್ಲಿ ಶಮಂತ್ ಹೆಚ್ಚು ಸೇಫ್ ಗೇಮ್ ಆಡುತ್ತಿದ್ದಾರೆ. ಇದು ಮನೆಯ ಸದಸ್ಯರಲ್ಲಿ ಅನುಮಾನ ಹಾಗೂ ನಿರಾಕರಣೆ ಭಾವನೆ ಮೂಡಿದೆ.

ಮನೆಯ ಸ್ಪರ್ಧಿಗಳಿಗೆ ಒಂದು ಚೊಂಬನ್ನು ನೀಡಲಾಗಿತ್ತು. ಆ ಚೊಂಬು ಕೊನೆಯದಾಗಿ ಯಾರ ಬಳಿ ಉಳಿಯುತ್ತದೆಯೋ ಅವರು ಇಡೀ ವಾರ ತಮ್ಮೊಂದಿಗೆ ಅದನ್ನು ಎಲ್ಲಿ ಹೋದರೂ ತೆಗೆದುಕೊಂಡು ಹೋಗಬೇಕು ಅನ್ನೋದನ್ನು ಸುದೀಪ್ ಹೇಳಿದ್ದರು.

ಶಮಂತ್

ಮೊದಲು ಆ ಚೊಂಬು ರಘು ಅವರಿಗೆ ಎತ್ತಿಕೊಳ್ಳುವಂತೆ ಸೂಚಿಸಿದ್ದರು, ರಘು, ಶಮಂತ್​ಗೆ ನೀಡಿದ್ದರು. ಕಾರಣ ಶಮಂತ್ ಇನ್ನು ಸಹ ಎಲ್ಲರನ್ನು ಒಲೈಸುತ್ತಾ ಒಳ್ಳೆಯವನಾಗುವ ವರ್ತನೆ ಬಿಟ್ಟಿಲ್ಲ. ಈ ಕಾರಣಕ್ಕೆ ಶಮಂತ್​ಗೆ ಚೊಂಬು ಕೊಡುತ್ತಿರುವುದಾಗಿ ರಘು ಕಾರಣ ಕೊಟ್ಟಿದ್ದರು. ಅಂತಿಮವಾಗಿ ಶಮಂತ್ ಕೈಗೆ ಚೊಂಬು ಬಂದು ತಲುಪಿದೆ.

ವೈಷ್ಣವಿ ಮತ್ತು ರಘು

ಶನಿವಾರ ಬಿಗ್​ ಹೌಸ್​​ನಲ್ಲಿ ಎಲಿಮಿನೇಷನ್ ಪ್ರಕ್ರಿಯೆ ನಡೆಯಲಿಲ್ಲ. ಇಂದು ಕಿಚ್ಚನ ಪಂಚಾಯಿತಿಯಲ್ಲಿ ಎಲಿಮಿನೇಷನ್ ಪ್ರಕ್ರಿಯೆ ನಡೆಯುತ್ತದೆ. ಓರ್ವ ಸದಸ್ಯ ಮನೆಯಿಂದ ಹೊರಹೋಗಲಿದ್ದಾರೆ.

ABOUT THE AUTHOR

...view details