ಅಂತು ಇಂತೂ ಮನೆಯ ಸದಸ್ಯರಿಗೆ ಬೆಡ್ ರೂಂ ಸಿಕ್ಕಿದೆ. ಮಳೆ ಮತ್ತು ಮೊಟ್ಟೆ ಟಾಸ್ಕ್ನಲ್ಲಿ ಗೆದ್ದ ಮಂಜು ಹಾಗೂ ಗೀತಾ ತಮ್ಮ ರಿಚಾರ್ಜ್ ಯಂತ್ರ ಹಿಂದಿರುಗಿಸಿ ಮನೆಯ ಸದಸ್ಯರಿಗೆ ಸಂತೋಷ ತಂದುಕೊಟ್ಟಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನಡೆದ ಮಳೆ ಮತ್ತು ಮೊಟ್ಟೆ ಟಾಸ್ಕ್ ಹೆಚ್ಚು ಮನರಂಜನೆ ನೀಡಿತು.
ಬಿಳಿ, ಸಿಲ್ವರ್ ಹಾಗೂ ಗೊಲ್ಡನ್ ಮೊಟ್ಟೆಗಳನ್ನು ಮನೆಯ ಟಾಸ್ಕ್ ಏರಿಯಾದಲ್ಲಿ ಬಿಗ್ ಬಾಸ್ ಮೇಲಿನಿಂದ ಎಸೆಯುತ್ತಿದ್ದರು. ಇದನ್ನು ಪುರುಷ ಸ್ಪರ್ಧಿಗಳು ಹಿಡಿದು ಬುಟ್ಟಿಗೆ ಹಾಕಬೇಕು. ಅದನ್ನು ಮಹಿಳಾ ಸ್ಪರ್ಧಿಗಳು ಸ್ವಲ್ಪ ದೂರದಲ್ಲಿರುವ ಮೊಟ್ಟೆ ಗೂಡಿಗೆ ಹಾಕಬೇಕು. ಇದರಲ್ಲಿ ಗೀತಾ ಹಾಗೂ ಮಂಜು ಜೋಡಿ 800 ಅಂಕಗಳನ್ನು ಪಡೆದು ಗೆಲುವು ಸಾಧಿಸಿದರು.ಇದಕ್ಕೆ ಪ್ರತಿಯಾಗಿ ಬಿಗ್ ಬಾಸ್ ರಿಚಾರ್ಜ್ ಯಂತ್ರವನ್ನು ನೀಡಿದರು. ಈ ಯಂತ್ರ ಹಿಂದಿರುಗಿಸಿದರೆ ಮನೆಯ ಸದಸ್ಯರಿಗೆ ಬೆಡ್ ರೂಂ ಬಿಟ್ಟುಕೊಡುವುದಾಗಿ ಬಿಗ್ ಬಾಸ್ ಹೇಳಿದರು. ಹಿಂದಿನ ದಿನ ನಡೆದ ಘಟನೆ ಮರುಕಳಿಸದಿರಲಿ ಎಂದು ಮಂಜು ಯಾವುದೇ ಪ್ರತಿಕ್ರಿಯೆ ನೀಡದೆ ಒಮ್ಮೆಲೆ ಯಂತ್ರ ವಾಪಸ್ ನೀಡಿದರು. ಮೊಟ್ಟೆ ಹಿಡಿಯುವ ಟಾಸ್ಕ್ನಲ್ಲಿ ವಿಶ್ವ ಉತ್ತಮ ಪ್ರದರ್ಶನ ತೋರಿದರು.