ಕರ್ನಾಟಕ

karnataka

ETV Bharat / sitara

'ನೆನಪಿರಲಿ' ಪ್ರೇಮ್ ಮನೆಯಲ್ಲಿ ‘ಪ್ರೇಮ ಪೂಜ್ಯಂ’... ಭೀಮನ ಅಮವಾಸ್ಯೆ ಆಚರಿಸಿದ ದಂಪತಿ - ನೆನಪಿರಲಿ ಪ್ರೇಮ್

ನೆನಪಿರಲಿ ಪ್ರೇಮ್ ಮನೆಯಲ್ಲಿ ಭೀಮನ ಅಮಾವಾಸ್ಯೆ ಆಚರಣೆ ನಡೆದಿದ್ದು, ಪತ್ನಿ ಜ್ಯೋತಿ ಗಂಡನ ಕಾಲು, ತೊಳೆದು ಪೂಜೆ ಮಾಡಿದರು.

ಪ್ರೇಮ್
ಪ್ರೇಮ್

By

Published : Jul 21, 2020, 1:11 AM IST

Updated : Jul 21, 2020, 3:08 PM IST

ಭೀಮನ ಅಮಾವಾಸ್ಯೆ ಹಿನ್ನೆಲೆ ಮದುವೆಯಾಗಿರೋ ಹೆಣ್ಣು ಮಕ್ಕಳು ಗಂಡನ ಪಾದಪೂಜೆ ಮಾಡಿದ್ರೆ ಗಂಡನ ಆಯಸ್ಸು ಹೆಚ್ಚಾಗುತ್ತೆ ಅನ್ನೋದು ನಂಬಿಕೆ. ಈ ಹಬ್ಬವನ್ನು ಹೆಚ್ಚಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಆಚರಿಸುತ್ತಾರೆ. ಈ ಆಚರಣೆ ಸಿನಿಮಾ ತಾರೆಯರ ಮನೆಯಲ್ಲೂ ನಡೆದಿದೆ.

ಪ್ರೇಮ್ ದಂಪತಿ

ನೆನಪಿರಲಿ ಪ್ರೇಮ್ ಮನೆಯಲ್ಲಿ ಭೀಮನ ಅಮಾವಾಸ್ಯೆ ಆಚರಣೆ ನಡೆದಿದ್ದು, ಪತ್ನಿ ಜ್ಯೋತಿ ಗಂಡನ ಕಾಲು, ತೊಳೆದು ಪೂಜೆ ಮಾಡಿದರು. ಕಾರ್ಯಕ್ರಮದ ಫೋಟೋಗಳನ್ನು ಪ್ರೇಮ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಪ್ರೇಮ್ ತಮ್ಮ ಪತ್ನಿ ಜ್ಯೋತಿ ಅವರನ್ನು ಅದೃಷ್ಟದ ದೇವತೆ ಎಂದಿದ್ದಾರೆ. ನಿನ್ನ ಪ್ರೀತಿಸಿದ ಮೇಲೆ ನನ್ನ ಆಯುಸ್ಸು ಜಾಸ್ತಿ ಆಯ್ತು. ಮದುವೆ ಆದ್ಮೇಲೆ ಅದೃಷ್ಟ ಖುಲಾಯಿಸಿತು. ಈಗ ಪಾದ ಪೂಜೆ ಮಾಡಿದ್ದೀಯಾ. ಇನ್ಮೇಲೆ ಜಾಕ್ ಪಾಟ್ ಹೊಡೆಯುತ್ತೆ ಎಂದು ಬರೆದುಕೊಂಡಿದ್ದಾರೆ.

ಪ್ರೇಮ್ ಹಾಗು ಜ್ಯೋತಿ ಅವರದ್ದು ಪ್ರೀತಿಸಿ ಮದುವೆಯಾದ ಜೋಡಿ. ಈ ಪ್ರೀತಿಯ ಫಲವಾಗಿ ಅಮೃತಾ ಹಾಗು ಏಕ್ರಾಂತ್ ಎಂಬ ಇಬ್ಬರು ಮಕ್ಕಳಿದ್ದಾರೆ.

ಪ್ರೇಮ್ ಈಗ ‘ಪ್ರೇಮ ಪೂಜ್ಯಂ’ ಎಂಬ ಸಿನಿಮಾ ಮಾಡುತ್ತಿದ್ದು, ಡಿಫ್ರೆಂಟ್ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Last Updated : Jul 21, 2020, 3:08 PM IST

ABOUT THE AUTHOR

...view details