ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೀತಾ ಧಾರಾವಾಹಿಯಲ್ಲಿ ನಾಯಕಿ ಗೀತಾಳಾಗಿ ಅಭಿನಯಿಸುತ್ತಿರುವ ನಟಿ ಭವ್ಯಾ ಗೌಡ ಸದ್ಯ ಅನಾರೋಗ್ಯದ ಕಾರಣ ಶೂಟಿಂಗ್ಗೆ ಬ್ರೇಕ್ ಪಡೆದುಕೊಂಡಿದ್ದಾರೆ.
ಗೀತಾ ಧಾರಾವಾಹಿಯಿಂದ ಬ್ರೇಕ್ ಪಡೆದುಕೊಂಡ ಭವ್ಯಗೌಡ!
ಗೀತಾ ಧಾರವಾಹಿ ಮೂಲಕ ಮನೆ ಮಾತಾಗಿರುವ ನಟಿ ಭವ್ಯಾ ಗೌಡ ಅನಾರೋಗ್ಯದ ಕಾರಣ ಶೂಟಿಂಗ್ನಿಂದ ಬ್ರೇಕ್ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಭವ್ಯಾ ಗೌಡ ನನಗೆ ರಕ್ತದೊತ್ತಡ ಕಡಿಮೆ ಆಗಿದೆ. ಚಿಂತೆ ಪಡುವ ಅಗತ್ಯವಿಲ್ಲ. ಡಾಕ್ಟರ್ ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆದುಕೊಳ್ಳಲು ಸೂಚಿಸಿದ್ದಾರೆ. ಹೀಗಾಗಿ ನಾನು ಒಂದು ವಾರದ ನಂತರ ಶೂಟಿಂಗ್ಗೆ ಮರಳಲಿದ್ದೇನೆ. ನಾನು ಸೆಟ್ಗೆ ಮರಳಲು ಉತ್ಸುಕಳಾಗಿದ್ದೇನೆ. ಕೆಲಸ ಮಾಡಲು ಇಷ್ಟಪಡುತ್ತೇನೆ ಎಂದಿದ್ದಾರೆ.
ಗೀತಾ ಧಾರಾವಾಹಿಯಲ್ಲಿ ಕಾಲೇಜು ವಿದ್ಯಾರ್ಥಿನಿಯಾಗಿ ಸ್ವಾವಲಂಬಿಯಾಗಿ ಬಾಳಲು ಇಷ್ಟಪಡುವ ಹುಡುಗಿ ಪಾತ್ರದಲ್ಲಿ ನಟಿಸಿದ್ದಾರೆ. ವಿಸ್ಮಯ ಗೌಡ ನಿರ್ದೇಶನದ ಡಿಯರ್ ಕಣ್ಮಣಿ ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಡುತ್ತಿದ್ದಾರೆ. ತನ್ನ ಡೆಬ್ಯು ಸಿನಿಮಾ ಕುರಿತು ಮಾತನಾಡಿರುವ ಭವ್ಯಾ ಈ ಸಿನಿಮಾದಲ್ಲಿ ಡಾಕ್ಟರ್ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ನನಗೆ ಹಲವು ಆಫರ್ ಬಂದಿದ್ದವು. ಆದರೆ ಯಾವುದೂ ಆಸಕ್ತಿದಾಯಕವಾಗಿರಲಿಲ್ಲ. ವಿಸ್ಮಯ ಗೌಡ ಆಫರ್ ನೀಡಿದಾಗ ಇದು ಪ್ರಬುದ್ಧ ಪಾತ್ರ ಹಾಗೂ ಸವಾಲಿನಿಂದ ಕೂಡಿದೆ ಎನಿಸಿತು ಎಂದಿದ್ದಾರೆ.