ಕರ್ನಾಟಕ

karnataka

ETV Bharat / sitara

ಅಪ್ಪ-ಅಮ್ಮನ ಪ್ರೋತ್ಸಾಹದಿಂದ ನಟನಾ ಕ್ಷೇತ್ರದಲ್ಲಿ ಮಿಂಚುತ್ತಿರುವ ಬಳ್ಳಾರಿ ಹುಡುಗಿ - Seetavallbha fame aditi

'ಸೀತಾ ವಲ್ಲಭ' ಧಾರಾವಾಹಿಯಲ್ಲಿ ಅದಿತಿ ಆಗಿ ನಟಿಸುತ್ತಿರುವ ಬಳ್ಳಾರಿ ಹುಡುಗಿ ಕಾವ್ಯ ರಮೇಶ್ ನಟನೆ ಬಗ್ಗೆ ಎಳ್ಳಷ್ಟೂ ಗೊತ್ತಿಲ್ಲದಿದ್ದರೂ ತಂದೆ-ತಾಯಿ ಪ್ರೋತ್ಸಾಹದಿಂದ ಕಿರುತೆರೆಗೆ ಬಂದರು. ಆದರೆ ಈಗ ಆಕೆ ನಟನೆಯಲ್ಲಿ ಪಳಗಿದ್ದು ಇತರ ಧಾರಾವಾಹಿಗಳಲ್ಲೂ ಅವಕಾಶ ಪಡೆಯುತ್ತಿದ್ದಾರೆ.

Kavya Ramesh
ಕಾವ್ಯ ರಮೇಶ್

By

Published : Aug 13, 2020, 2:59 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ 'ಸೀತಾ ವಲ್ಲಭ'ದಲ್ಲಿ ನಾಯಕ ಆರ್ಯನ ತಂಗಿ ಅದಿತಿ ಪಾತ್ರದಲ್ಲಿ ನಟಿಸುತ್ತಿರುವ ಕಾವ್ಯ ಎಸ್. ರಮೇಶ್ ಬಳ್ಳಾರಿಯ ಹರಪ್ಪನಹಳ್ಳಿಯವರು. ಚಿಕ್ಕಂದಿನಿಂದ ತಾವು ಕಂಡ ಕನಸನ್ನು ನನಸು ಮಾಡಿಕೊಂಡಿದ್ದಾರೆ ಈ ಹುಡುಗಿ.

ಕಿರುತೆರೆ ನಟಿ ಕಾವ್ಯ ರಮೇಶ್

ತಾನು ಎಲ್ಲಾ ಕ್ಷೇತ್ರಗಳಲ್ಲೂ ಗುರುತಿಸಿಕೊಳ್ಳಬೇಕು ಎಂಬುದು ಕಾವ್ಯ ಆಸೆ. ಈ ಕಾರಣಕ್ಕೆ ಶಾಲಾ ಕಾಲೇಜುಗಳಲ್ಲಿ ನಡೆಯುತ್ತಿದ್ದ ಎಲ್ಲಾ ಸ್ಪರ್ಧೆಗಳಲ್ಲೂ ಅವರು ತಪ್ಪದೆ ಭಾಗವಹಿಸುತ್ತಿದ್ದರಂತೆ. ಆರಂಭದಲ್ಲಿ ಕಾವ್ಯ ಅವರಿಗೆ ನಟನೆ ಬಗ್ಗೆ ಏನೂ ತಿಳಿದಿರಲಿಲ್ಲ. ಆದರೆ ಇಂದು ಆಕೆ ನಿಮ್ಮನ್ನು ಅದಿತಿ ಆಗಿ ಧಾರಾವಾಹಿಪ್ರಿಯರನ್ನು ರಂಜಿಸುತ್ತಿದ್ದಾರೆ ಎಂದರೆ ಅದಕ್ಕೆ ಆಕೆ ಪಟ್ಟ ಶ್ರಮವೇ ಕಾರಣ.

'ಸೀತಾ ವಲ್ಲಭ' ಧಾರಾವಾಹಿಯ ಅದಿತಿ

ಆಡಿಷನ್​​ನಲ್ಲಿ ಭಾಗವಹಿಸಿದ್ದ ಕಾವ್ಯ ಧಾರಾವಾಹಿಯಲ್ಲಿ ನಟಿಸಲು ಆಯ್ಕೆ ಆದರು. ನಟನೆ ತಿಳಿಯದಿದ್ದರೂ ಅಪ್ಪ ಅಮ್ಮನ ಪ್ರೋತ್ಸಾಹದಿಂದ ಧೈರ್ಯ ಮಾಡಿ ಮಾಂಗಲ್ಯಂ ತಂತು ನಾನೇನ ಧಾರಾವಾಹಿಯಲ್ಲಿ ನಟಿಸಲು ಮುಂದಾದರು. ಅಲ್ಲಿಂದ ಒಂದೊಂದಾಗಿ ನಟನೆಯ ರೀತಿ ರಿವಾಜುಗಳನ್ನು ಕಲಿತರು. ಈ ಧಾರಾವಾಹಿ ಮುಗಿಯುತ್ತಿದ್ದಂತೆ 'ಸೀತಾ ವಲ್ಲಭ' ಧಾರಾವಾಹಿಯಲ್ಲಿ ನಟಿಸಲು ಅವಕಾಶ ದೊರೆಯಿತು. ಈ ಮೂಲಕ ಸುಮಾರು 2 ವರ್ಷಗಳಿಂದ ಕಾವ್ಯ, ಸೀತಾ ವಲ್ಲಭ ಧಾರಾವಾಹಿಯ ಭಾಗವಾಗಿದ್ದಾರೆ.

ಆರ್ಯನ ತಂಗಿಯಾಗಿ ನಟನೆ

'ಚೌಕಾಬಾರ' ಸಿನಿಮಾ ಮೂಲಕ ಬೆಳ್ಳಿತೆರೆಯಲ್ಲೂ ಮಿಂಚಿರುವ ಕಾವ್ಯ, ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದಾರೆ. ಅವಕಾಶ ಸಿಕ್ಕರೆ ಕಿರುತೆರೆಯ ಜೊತೆಗೆ ಹಿರಿತೆರೆಯಲ್ಲೂ ನಟಿಸಲು ನಾನು ರೆಡಿ ಎನ್ನುವ ಕಾವ್ಯಗೆ ಬಾಲಿವುಡ್ ನಟಿ ದಿವಂಗತ ಶ್ರೀದೇವಿ ರೋಲ್ ಮಾಡೆಲ್ ಅಂತೆ.

ಬೆಳ್ಳಿತೆರೆಯಲ್ಲೂ ಮಿಂಚಿರುವ ನಟಿ

ABOUT THE AUTHOR

...view details