ಕರ್ನಾಟಕ

karnataka

ETV Bharat / sitara

Banaras Movie.. ಪುನೀತ್‌ ರಾಜ್‌ಕುಮಾರ್ ಸಮಾಧಿ ಬಳಿ 'ಬನಾರಸ್​​' ಪೋಸ್ಟರ್‌ ಬಿಡುಗಡೆ - puneeth rajkumar tomb

ಬನಾರಸ್ ಸಿನಿಮಾದ(Banaras Movie) ಮೋಷನ್ ಪಿಕ್ಚರ್​ ಅ​ನ್ನು, ಪುನೀತ್ ರಾಜ್‍ಕುಮಾರ್ ಸಮಾಧಿ(puneeth rajkumar tomb) ಬಳಿ ಚಿತ್ರತಂಡ ಬಿಡುಗಡೆ ಮಾಡಿ, ಅಪ್ಪು ಆಶೀರ್ವಾದ ಪಡೆದುಕೊಂಡಿದೆ.

banaras Movie poster release
ಪುನೀತ್‌ ರಾಜ್‌ಕುಮಾರ್ ಸಮಾಧಿ ಬಳಿ ಬನಾಸರ್ ಪೋಸ್ಟರ್‌ ಬಿಡುಗಡೆ

By

Published : Nov 17, 2021, 1:56 PM IST

Updated : Nov 17, 2021, 4:49 PM IST

ಕನ್ನಡ ಚಿತ್ರರಂಗದ ನಗು ಮುಖದ ರಾಜಕುಮಾರ, ಪುನೀತ್ ರಾಜ್‍ಕುಮಾರ್(puneeth rajkumar)ನಿಧನರಾಗಿ 19 ದಿನಗಳು ಕಳೆಯುತ್ತಿವೆ. ಆದರೆ, ಈ ರಾಜರತ್ನನ ಮೇಲೆ ಇರುವ ಅಭಿಮಾನ ಮಾತ್ರ ಕಡಿಮೆ ಆಗಿಲ್ಲ. ಈಗಾಗಲೇ ಪುನೀತ್ ರಾಜ್‍ಕುಮಾರ್ ಸಮಾಧಿ ಬಳಿ ದಿನಕ್ಕೆ ಸಾವಿರಾರು ಅಭಿಮಾನಿಗಳು ಬಂದು ಸಮಾಧಿ ದರ್ಶನ ಪಡೆಯುತ್ತಿದ್ದಾರೆ‌. ಇದೀಗ ಅಪ್ಪು ಸಮಾಧಿ ಒಳ್ಳೆ ಕೆಲಸಗಳಿಗೆ ಸಾಕ್ಷಿಯಾಗುತ್ತಿದೆ.

ಶಾಸಕ ಜಮೀರ್ ಅಹಮದ್ ಖಾನ್ ಪುತ್ರ‌ ಜೈದ್ ಖಾನ್(Jaid Khan), ಬೆಲ್ ಬಾಟಮ್ ಖ್ಯಾತಿಯ ನಿರ್ದೇಶಕ ಜಯತೀರ್ಥ ನಿರ್ದೇಶನದ 'ಬನಾರಸ್ ಸಿನಿಮಾ(Banaras Movie) ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ಬಹುತೇಕ ಚಿತ್ರೀಕರಣ ಮುಗಿಸಿರುವ ಬನಾರಸ್ ಸಿನಿಮಾದ ಮೋಷನ್ ಪಿಕ್ಚರ್​ ಅ​ನ್ನು, ಪುನೀತ್ ರಾಜ್‍ಕುಮಾರ್ ಸಮಾಧಿ(puneeth rajkumar tomb) ಬಳಿ ಚಿತ್ರತಂಡ ಬಿಡುಗಡೆ ಮಾಡಿ, ಅಪ್ಪು ಆಶೀರ್ವಾದ ಪಡೆದುಕೊಂಡಿದೆ. ಬನಾರಸ್ ಸಿನಿಮಾದ ಮೊದಲ ಮೋಷನ್ ಪೋಸ್ಟರ್ ಪುನೀತ್ ರಾಜ್​​ಕುಮಾರ್ ಕೈಯಲ್ಲಿ ರಿಲೀಸ್‌ ಮಾಡಿಸಬೇಕು ಎನ್ನುವುದು ಚಿತ್ರ ತಂಡದ ಮಹತ್ತರ ಆಸೆಯಾಗಿತ್ತು. ಆದರೆ, ಅಪ್ಪು ಅಕಾಲಿಕ ಮರಣದಿಂದ ಚಿತ್ರತಂಡ, ಪುನೀತ್ ಸಮಾಧಿ ಬಳಿ ಬನಾರಸ್ ಚಿತ್ರದ ಮೋಷನ್ ಪಿಕ್ಚರ್ ಅನಾವರಣ ಮಾಡಿದೆ.

ಪುನೀತ್‌ ರಾಜ್‌ಕುಮಾರ್ ಸಮಾಧಿ ಬಳಿ 'ಬನಾರಸ್​​' ಪೋಸ್ಟರ್‌ ಬಿಡುಗಡೆ

ಇದನ್ನೂ ಓದಿ:'ಬನಾರಸ್​' ಮೂಲಕ ಸ್ಯಾಂಡಲ್​ವುಡ್​ಗೆ ಬರ್ತಿದಾರೆ ಶಾಸಕ ಜಮೀರ್ ಪುತ್ರ

ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಗೆ, ನಿರ್ದೇಶಕ ಜಯತೀರ್ಥ ಹಾಗೂ ಯುವ ನಟ‌ ಜೈದ್ ಖಾನ್ ಮತ್ತು ತಂಡ ಅಪ್ಪು ಸಮಾಧಿಗೆ ಹೂವಿನ ಮಾಲೆ ಹಾಕಿ ಪೂಜೆ ಸಲ್ಲಿಸಿದೆ. ಈ ಚಿತ್ರದಲ್ಲಿ ಜೈದ್ ಖಾನ್ ಲವರ್ ಬಾಯ್ ಆಗಿ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದು, ಸೋನಾಲ್ ಮಾಂಟೆರೊ ಜತೆಯಾಗಿದ್ದಾರೆ. ವಿಭಿನ್ನ ಪ್ರೇಮ ಕಥೆ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕ ಜಯತೀರ್ಥ ಆ್ಯಕ್ಷನ್ ಕಟ್ ಹೇಳಿದ್ದಾರೆ.

ದೇವರಾಜ್, ಅಚ್ಯುತ‌ ಕುಮಾರ್, ಸುಜಯ್ ಶಾಸ್ತ್ರಿ, ಸ್ವಪ್ನ ರಾಜ್, ಬರ್ಕತ್ ಅಲಿ, ಚಿರಂತ್, ರೋಹಿತ್ ಮುಂತಾದವರು ಬನಾರಸ್​​ನ‌ ತಾರಾ ಬಳಗದಲ್ಲಿದ್ದಾರೆ. ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಹರ್ಷ ನೃತ್ಯ ನಿರ್ದೇಶನ ಹಾಗೂ ವಿಜಯ್ ಮಾಸ್ಟರ್, ಡಿಫರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ರಘು ನಿಡವಳ್ಳಿ ಸಂಭಾಷಣೆ ಬರೆದಿದ್ದಾರೆ. ರಶ್ಮಿ ವಸ್ತ್ರವಿನ್ಯಾಸ ಮಾಡಿದ್ದಾರೆ.

ನ್ಯಾಷನಲ್ ಖಾನ್ಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಿಲಕ್ ರಾಜ್ ಬಲ್ಲಾಳ್ ನಿರ್ಮಿಸಿರುವ ಈ ಚಿತ್ರಕ್ಕೆ ಮುಜಮ್ಲಿಲ್‌ ಅಹಮದ್ ಖಾನ್ ಅವರ ಸಹ ನಿರ್ಮಾಣವಿದೆ. ಬನಾರಸ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಶಾಸಕ ಜಮೀರ್ ಪುತ್ರ ಜೈದ್ ಖಾನ್(Jaid Khan)ಪ್ರೇಕ್ಷಕರ ಹೃದಯ ಗೆಲ್ಲುತ್ತಾರ ಅನ್ನೋದು ಮುಂದಿನ ವರ್ಷ ಗೊತ್ತಾಗಲಿದೆ‌.

ಇದನ್ನೂ ಓದಿ:ಶಾಸಕ ಜಮೀರ್​ ಪುತ್ರನ ಚೊಚ್ಚಲ ಸಿನಿಮಾದ ವಿಡಿಯೋ, ಆಡಿಯೋ ಹಕ್ಕು ಖರೀದಿಸಿದ ಲಹರಿ ಸಂಸ್ಥೆ

Last Updated : Nov 17, 2021, 4:49 PM IST

ABOUT THE AUTHOR

...view details