ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿ ಮಾಡಿದ್ದ ಎಸ್.ಎಸ್. ರಾಜಮೌಳಿ ನಿರ್ದೇಶನದ 'ಬಾಹುಬಲಿ' ಸಿನಿಮಾ ಕನ್ನಡ ಭಾಷೆಗೆ ಡಬ್ ಆಗಿದ್ದು ಇದೇ ನವೆಂಬರ್ 15 ರಂದು ಕಿರುತೆರೆಯಲ್ಲಿ ಪ್ರಸಾರ ಕಾಣಲಿದೆ. ಶತಮಾನದ ಸಿನಿಮಾ ಎಂದೇ ಹೆಸರು ಗಳಿಸಿರುವ ಈ ಸಿನಿಮಾ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.
ಕನ್ನಡಕ್ಕೆ ಡಬ್ ಆಗಿ ಕಿರುತೆರೆಯಲ್ಲಿ ಪ್ರಸಾರವಾಗ್ತಿದೆ 'ಬಾಹುಬಲಿ'...! - Bahubali telecast on November 15
ಎಸ್.ಎಸ್. ರಾಜಮೌಳಿ ನಿರ್ದೇಶನದಲ್ಲಿ ಪ್ರಭಾಸ್, ಅನುಷ್ಕಾ ಶೆಟ್ಟಿ, ತಮನ್ನಾ, ರಾಣಾ, ರಮ್ಯಕೃಷ್ಣನ್ ಹಾಗೂ ಇನ್ನಿತರರು ನಟಿಸಿರುವ 'ಬಾಹುಬಲಿ' ಸಿನಿಮಾ ಕನ್ನಡಕ್ಕೆ ಡಬ್ ಆಗಿದ್ದು ನವೆಂಬರ್ 15 ರಂದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.
'ಬಾಹುಬಲಿ' ಮೊದಲ ಅಧ್ಯಾಯ 2015 ರಲ್ಲಿ ತೆರೆ ಕಂಡಿದ್ದು ಜನರು ಮೆಚ್ಚಿದ್ದು ಮಾತ್ರವಲ್ಲದೆ ಬಾಕ್ಸ್ ಆಫೀಸ್ನಲ್ಲೂ ಹೊಸ ದಾಖಲೆ ಬರೆದಿತ್ತು. 2017 ರಲ್ಲಿ ಬಿಡುಗಡೆಯಾದ ಭಾಗ 2 ಕೂಡಾ ಸಿನಿಪ್ರಿಯರ ಮನಸ್ಸು ಗೆದ್ದಿತ್ತು. ಡಬ್ಬಿಂಗ್ಪ್ರಿಯರು 'ಬಾಹುಬಲಿ', ಕನ್ನಡಕ್ಕೆ ಡಬ್ ಆಗಿ ಬಿಡುಗಡೆ ಆಗಬೇಕು ಎಂದು ಸಾಕಷ್ಟು ಮನವಿ ಮಾಡಿದ್ದರೂ ಅವರ ಆಸೆ ಈಡೇರಿರಲಿಲ್ಲ. ಈಗ ಅದಕ್ಕೆ ಕಾಲ ಕೂಡಿ ಬಂದಿದೆ. ಸಿನಿಮಾ ಬಿಡುಗಡೆಯಾಗಿ 5 ವರ್ಷಗಳ ನಂತರ ಕನ್ನಡಕ್ಕೆ ಡಬ್ ಆಗಿ ಪ್ರಸಾರವಾಗುತ್ತಿದೆ. ಸಿನಿಪ್ರಿಯರಿಗೆ ಅದರಲ್ಲೂ ಪ್ರಭಾಸ್, ಅನುಷ್ಕಾ ಅಭಿಮಾನಿಗಳಿಗೆ ಈ ವಿಚಾರ ಖುಷಿ ತಂದಿದ್ದು ತಮ್ಮ ಮೆಚ್ಚಿನ ಸಿನಿಮಾವನ್ನು ಕನ್ನಡದಲ್ಲಿ ನೋಡಲು ಕಾತರದಿಂದ ಕಾಯುತ್ತಿದ್ದಾರೆ.