ಕರ್ನಾಟಕ

karnataka

ETV Bharat / sitara

'ರಾಧಾ ರಮಣ' ಧಾರಾವಾಹಿ ವೀಕ್ಷಕರಿಗೆ ಮತ್ತೊಂದು ಬ್ಯಾಡ್​ ನ್ಯೂಸ್​​​​..! - ಶ್ವೇತಾ ಪ್ರಸಾದ್

ಸುಮಾರು 2 ವರ್ಷಗಳಿಂದ ಪ್ರಸಾರವಾಗುತ್ತಿದ್ದ 'ರಾಧಾ ರಮಣ' ಧಾರಾವಾಹಿ ಇನ್ನು ಎರಡು ವಾರಗಳು ಮಾತ್ರ ಪ್ರಸಾರವಾಗಲಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಶೀಘ್ರದಲ್ಲೇ ಬಿಗ್​​ಬಾಸ್ ಆರಂಭವಾಗುತ್ತಿರುವುದರಿಂದ ಈ ಧಾರಾವಾಹಿಯನ್ನು ಮುಕ್ತಾಯ ಮಾಡಲಾಗುವುದು ಎನ್ನಲಾಗಿದೆ.

'ರಾಧಾ ರಮಣ'

By

Published : Sep 30, 2019, 1:54 PM IST

Updated : Sep 30, 2019, 2:29 PM IST

ಕಲರ್ಸ್ ಕನ್ನಡ ವಾಹಿನಿಯ ಸೂಪರ್ ಹಿಟ್ ಧಾರಾವಾಹಿಗಳಲ್ಲಿ 'ರಾಧಾ ರಮಣ' ಕೂಡಾ ಒಂದು. ಆದರೆ ಈ ಧಾರಾವಾಹಿ ಪ್ರೇಮಿಗಳಿಗೆ ಒಂದು ಬ್ಯಾಡ್​​​​ ನ್ಯೂಸ್​. ಈ ಧಾರಾವಾಹಿ ಶೀಘ್ರದಲ್ಲೇ ಕೊನೆಯಾಗಲಿದೆ ಎನ್ನಲಾಗುತ್ತಿದೆ‌. ಹೌದು, ಇನ್ನು ಕೆಲವೇ ದಿನಗಳಲ್ಲಿ ಮುಕ್ತಾಯವಾಗುತ್ತಿದೆ ರಾಧಾ ರಮಣ ಧಾರಾವಾಹಿ.

'ರಾಧಾ ರಮಣ' (ಫೋಟೋ ಕೃಪೆ: ಕಲರ್ಸ್ ಕನ್ನಡ)

ಹೆಚ್ಚು ವೀಕ್ಷಕರನ್ನು ಪಡೆದಿದ್ದ ಈ ಧಾರಾವಾಹಿ, ನಾಯಕಿ ‘ರಾಧಾ‘ ಪಾತ್ರಧಾರಿಯ ಬದಲಾವಣೆಯಿಂದ ರೇಟಿಂಗ್​​​​​​​​​​​​​​​​​​​​​​​​​ನಲ್ಲಿ ಕೊಂಚ ಇಳಿಮುಖವಾಗಿತ್ತು. ಶ್ವೇತಾ ಪ್ರಸಾದ್ ಈ ಮುನ್ನ ರಾಧಾ ಪಾತ್ರಧಾರಿಯಾಗಿ ನಟಿಸುತ್ತಿದ್ದರು. ಆದರೆ ಅವರು ಈ ಧಾರಾವಾಹಿಯಿಂದ ಹೊರಹೋದ ನಂತರ ಕಾವ್ಯಗೌಡ ಆ ಸ್ಥಾನಕ್ಕೆ ಬಂದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಶೀಘ್ರದಲ್ಲೇ ಬಿಗ್​​​​​​​​ಬಾಸ್ ಸೀಸನ್ 7 ಕೂಡಾ ಬರುತ್ತಿದೆ. ಇಷ್ಟು ದಿನ‌ ಕಲರ್ಸ್ ಸೂಪರ್​​​​​ನಲ್ಲಿ ಬಿಗ್​​​​​​​​​​​​​​​​​​​​​​​​​​​​​​​​​​​​​​​ಬಾಸ್ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಆದರೆ ಈ ಬಾರಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಈ ಧಾರಾವಾಹಿಯನ್ನು ಪ್ರಸಾರ ಮಾಡಲು ಕಾರ್ಯಕ್ರಮ ನಿರ್ವಾಹಕರು ನಿರ್ಧರಿಸಿದ್ದಾರೆ. ಹೀಗಾಗಿ 'ರಾಧಾ ರಮಣ'ಧಾರಾವಾಹಿಯನ್ನು ಮುಕ್ತಾಯ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಇದೆಲ್ಲಾ ಕಾರಣಗಳ ಜೊತೆಗೆ ಧಾರಾವಾಹಿ ಕಥೆ ಕೂಡಾ ಅಂತಿಮ ಹಂತದಲ್ಲಿದೆ. ಇನ್ನು ಎರಡು ವಾರಗಳು ಮಾತ್ರ ಈ ಧಾರಾವಾಹಿ ಪ್ರಸಾರವಾಗಲಿದೆ.

ಕಾವ್ಯಗೌಡ (ಫೋಟೋ ಕೃಪೆ: ಕಲರ್ಸ್ ಕನ್ನಡ)
Last Updated : Sep 30, 2019, 2:29 PM IST

ABOUT THE AUTHOR

...view details