ಕಲರ್ಸ್ ಕನ್ನಡ ವಾಹಿನಿಯಲ್ಲಿ ಇತ್ತೀಚೆಗಷ್ಟೇ ಆರಂಭವಾಗಿರುವ ವಿಭಿನ್ನ ಕಾರ್ಯಕ್ರಮ ಚಾಟ್ ಕಾರ್ನರ್ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. 'ಲಕ್ಷ್ಮಿ ಬಾರಮ್ಮ' ಖ್ಯಾತಿಯ ಚಂದು ಗೌಡ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಈ ಕಾರ್ಯಕ್ರಮದಲ್ಲಿ ಪ್ರತಿ ವಾರವೂ ಸೆಲಬ್ರಟಿಗಳು ಬಂದು ಎಂಜಾಯ್ ಮಾಡುತ್ತಾರೆ. ಜೊತೆಗೆ ವೀಕ್ಷಕರಿಗೂ ಮನರಂಜನೆ ನೀಡಲಿದ್ದಾರೆ.
ಚಂದು ಗೌಡ ಸಾರಥ್ಯದ ಚಾಟ್ ಕಾರ್ನರ್ನಲ್ಲಿ ಅಯ್ಯಪ್ಪ ದಂಪತಿ - Lakshmi baramma fame Chandu gowda
ಈ ಭಾನುವಾರದ ಚಾಟ್ ಕಾರ್ನರ್ನಲ್ಲಿ ಕ್ರಿಕೆಟಿಕ ಅಯ್ಯಪ್ಪ ಹಾಗೂ ನಟಿ ಭಾಗವಹಿಸಿದ್ದಾರೆ. ಈ ಸಂಚಿಕೆ ಇದೇ ಭಾನುವಾರ ಪ್ರಸಾರವಾಗುತ್ತಿದೆ. 'ಲಕ್ಷ್ಮಿ ಬಾರಮ್ಮ' ಖ್ಯಾತಿಯ ಚಂದು ಗೌಡ ಈ ಶೋ ನಿರೂಪಣೆ ಮಾಡುತ್ತಿದ್ದಾರೆ.
ಸೆಲಬ್ರಿಟಿ ದಂಪತಿ ಅಯ್ಯಪ್ಪ ಹಾಗೂ ಅನು, ಚಾಟ್ ಕಾರ್ನರ್ ಶೋನಲ್ಲಿ ಭಾಗವಹಿಸಲಿದ್ದಾರೆ. ಇದೇ ಭಾನುವಾರದ ಎಪಿಸೋಡ್ನಲ್ಲಿ ಅನು ಹಾಗೂ ಅಯ್ಯಪ್ಪ ಸಂಚಿಕೆ ಪ್ರಸಾರವಾಗಲಿದೆ. ಅಯ್ಯಪ್ಪ ವೃತ್ತಿಯಲ್ಲಿ ಕ್ರಿಕೆಟರ್ ಆಗಿದ್ದು ಬಿಗ್ ಬಾಸ್ ಸೀಸನ್ 3 ರಲ್ಲಿ ಭಾಗವಹಿಸಿದ್ದರು. ಅನು ಕೂಡಾ ಕಿರುತೆರೆಗೆ ಪರಿಚಿತರು. ಇತ್ತೀಚೆಗೆ ಮುಕ್ತಾಯಗೊಂಡ ನಂದಿನಿ ಧಾರಾವಾಹಿಯಲ್ಲಿ ದೇವಸೇನಾ ಆಗಿ ಅನು ನಟಿಸಿದ್ದರು. ಚಾಟ್ ಕಾರ್ನರ್ ಶೋನಲ್ಲಿ ಈ ಜೋಡಿ ತಮ್ಮ ಲವ್ ಸ್ಟೋರಿ ಹಾಗೂ ಕೆಲವು ಸೀಕ್ರೆಟ್ಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಈಗಾಗಲೇ ವಾಹಿನಿ ಈ ಕಾರ್ಯಕ್ರಮದ ಪ್ರೋಮೋ ಬಿತ್ತರಿಸಿದೆ. ಈ ಶೋ ನಲ್ಲಿ ಭಾಗವಹಿಸುವ ಸೆಲಬ್ರಿಟಿಗಳು ತಮ್ಮ ಅಡುಗೆ ಕೌಶಲ್ಯವನ್ನು ಕೂಡಾ ಪ್ರದರ್ಶಿಸಬೇಕಿದೆ. ಶೋ ಬಗ್ಗೆ ಮತನಾಡಿರುವ ಅನು "ಮದುವೆಯಾದ ಬಳಿಕ ನಾವು ಕಾಣಿಸಿಕೊಂಡ ಮೊದಲ ಶೋ ಇದು. ನಿಜವಾಗಿಯೂ ಬಹಳ ಒಳ್ಳೆಯ ಅನುಭವ. ನಾವು ತುಂಬಾ ವಿಷಯಗಳನ್ನು ಹಂಚಿಕೊಂಡ್ವಿ" ಎಂದಿದ್ದಾರೆ.ಈ ಶೋನಲ್ಲಿ ಉಳಿದಂತೆ ಶ್ವೇತಾ ಪ್ರಸಾದ್ ,ಆರ್ಜೆ ಪ್ರದೀಪ್,ವಿಜಯ ಸೂರ್ಯ ,ಅನು ಪ್ರಭಾಕರ್ ,ರಘು ಮುಖರ್ಜಿ ,ಅನುಪಮಾ ಗೌಡ, ಸೋನು ಗೌಡ ಹಾಗೂ ಇನ್ನಿತರ ಸೆಲಬ್ರಿಟಿಗಳು ಭಾಗವಹಿಸಿದ್ದರು.