ಕರ್ನಾಟಕ

karnataka

ETV Bharat / sitara

ಶೀಘ್ರದಲ್ಲೇ ಕಿರುತೆರೆಯಲ್ಲಿ ಪ್ರಸಾರವಾಗಲಿದೆ 'ಅವನೇ ಶ್ರೀಮನ್ನಾರಾಯಣ' - ಅವನೇ ಶ್ರೀಮನ್ನಾರಾಯಣ ಶೀಘ್ರ ಕಿರುತೆರೆಯಲ್ಲಿ

ಕಳೆದ ವರ್ಷ ಡಿಸೆಂಬರ್​ 27 ರಂದು ಈ ಸಿನಿಮಾ ಬಿಡುಗಡೆಯಾಗಿತ್ತು. ಆದರೆ ಥಿಯೇಟರ್​​ಗೆ ಹೋಗಿ ಸಿನಿಮಾ ನೋಡದವರಿಗೆ ಇದೀಗ ಗುಡ್ ನ್ಯೂಸ್. 'ಅವನೇ ಶ್ರೀಮನ್ನಾರಾಯಣ' ಸಿನಿಮಾ ಶೀಘ್ರದಲ್ಲೇ ಟಿವಿಯಲ್ಲಿ ಪ್ರಸಾರವಾಗಲಿದೆ ಎಂಬ ಮಾತು ಕೇಳಿಬರುತ್ತಿದೆ.

Avane Srimannarayana
'ಅವನೇ ಶ್ರೀಮನ್ನಾರಾಯಣ'

By

Published : Jan 21, 2020, 1:49 PM IST

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ಕಳೆದ ವರ್ಷ ಡಿಸೆಂಬರ್​ನಲ್ಲಿ ಬಿಡುಗಡೆಯಾಗಿತ್ತು. ಕನ್ನಡದೊಂದಿಗೆ ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ತಯಾರಾದ ಈ ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯೆ ವ್ಯಕ್ತವಾಗಿದೆ.ಕಳೆದ ವರ್ಷ ಡಿಸೆಂಬರ್​ 27 ರಂದು ಈ ಸಿನಿಮಾ ಬಿಡುಗಡೆಯಾಗಿತ್ತು. ಆದರೆ ಥಿಯೇಟರ್​​ಗೆ ಹೋಗಿ ಸಿನಿಮಾ ನೋಡದವರಿಗೆ ಇದೀಗ ಗುಡ್ ನ್ಯೂಸ್. 'ಅವನೇ ಶ್ರೀಮನ್ನಾರಾಯಣ' ಸಿನಿಮಾ ಶೀಘ್ರದಲ್ಲೇ ಟಿವಿಯಲ್ಲಿ ಪ್ರಸಾರವಾಗಲಿದೆ ಎಂಬ ಮಾತು ಕೇಳಿಬರುತ್ತಿದೆ.

ಕಿರುತೆರೆಯಲ್ಲಿ 'ಅವನೇ ಶ್ರೀಮನ್ನಾರಾಯಣ' (ವಿಡಿಯೋ ಕೃಪೆ: ಸ್ಟಾರ್ ಸುವರ್ಣ)

ಸ್ಟಾರ್ ಸುವರ್ಣ ವಾಹಿನಿಯವರು 'ಅವನೇ ಶ್ರೀಮನ್ನಾರಾಯಣ' ಚಿತ್ರದ ಟಿವಿ ರೈಟ್ಸ್ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಈಗಾಗಲೇ ಟಿವಿಯಲ್ಲಿ ಈ ಪ್ರೋಮೋ ಪ್ರಸಾರವಾಗುತ್ತಿದೆ. ಆದರೆ ಸಿನಿಮಾ ಯಾವ ದಿನ ಪ್ರಸಾರವಾಗಲಿದೆ ಎಂದು ವಾಹಿನಿ ತಿಳಿಸಿಲ್ಲ. ಪ್ರೋಮೋದಲ್ಲಿ ಶ್ರೀಘ್ರವೇ ಸಿನಿಮಾ ಕಿರುತೆರೆಯಲ್ಲಿ ಎಂದು ಮಾತ್ರ ತೋರಿಸಲಾಗುತ್ತಿದೆ. ರಕ್ಷಿತ್ ಶೆಟ್ಟಿ ಅಭಿಮಾನಿಗಳು ಸಿನಿಮಾವನ್ನು ಟಿವಿಯಲ್ಲಿ ಯಾವಾಗ ನೋಡುತ್ತೇವೋ ಎಂದು ಕಾತರದಿಂದ ಕಾಯುತ್ತಿದ್ದಾರೆ.ಪುಷ್ಕರ್ ಮಲ್ಲಿಕಾರ್ಜುನಯ್ಯ ಬಂಡವಾಳ ಹಾಕಿರುವ ಈ ಚಿತ್ರ ಈಗಾಗಲೇ 60 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂಬ ಸುದ್ದಿ ಕೇಳಿ ಬರುತ್ತಿದೆ. ರಕ್ಷಿತ್ ಶೆಟ್ಟಿ ಮತ್ತು ಶಾನ್ವಿ ಶ್ರೀವಾತ್ಸವ್ ನಾಯಕ ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರ ಕಿರುತೆರೆಯಲ್ಲಿ ಪ್ರಸಾರವಾಗುವ ಸಂಗತಿ ಕೆಲವು ಪ್ರೇಕ್ಷಕರಿಗೆ ನಿರಾಸೆ ಮೂಡಿಸಿದೆ‌. ಇಷ್ಟು ಬೇಗ ಟಿವಿಯಲ್ಲಿ ಪ್ರಸಾರ ಮಾಡಬೇಡಿ ಎಂದು ಕೆಲವರು ಕಮೆಂಟ್ ಮಾಡುತ್ತಿದ್ದಾರೆ. ಚಿತ್ರ ಬಿಡುಗಡೆಯಾಗಿ ಇನ್ನು 25 ದಿನಗಳು ಆಗಿಲ್ಲ, ಆಗಲೇ ಟಿವಿಯಲ್ಲಿ ಪ್ರಸಾರವಾಗುತ್ತಿದೆ ಎಂಬುದೇ ಜನರ ಬೇಸರಕ್ಕೆ ಕಾರಣ.

For All Latest Updates

TAGGED:

ABOUT THE AUTHOR

...view details