ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ಕಳೆದ ವರ್ಷ ಡಿಸೆಂಬರ್ 27 ರಂದು ಬಿಡುಗಡೆಯಾಗಿತ್ತು. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದಲ್ಲಿ ಸಚಿನ್ ರವಿ ನಿರ್ದೇಶಿಸಿರುವ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಕೂಡಾ ವ್ಯಕ್ತವಾಗಿತ್ತು.
ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ 'ಅವನೇ ಶ್ರೀಮನ್ನಾರಾಯಣ'
'ಅವನೇ ಶ್ರೀಮನ್ನಾರಾಯಣ' ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇದೇ ಭಾನುವಾರ ಸಂಜೆ 6 ಗಂಟೆಗೆ ಸಿನಿಮಾ ಪ್ರಸಾರವಾಗಲಿದೆ. ರಕ್ಷಿತ್ ಶೆಟ್ಟಿ ಹಾಗೂ ಶಾನ್ವಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾದಲ್ಲಿ 1980 ರ ದಶಕದಲ್ಲಿ ನಡೆಯುವ ಕಥೆಯನ್ನು ಆ ಕಾಲಘಟ್ಟಕ್ಕೆ ತಕ್ಕಂತ ಸೆಟ್ಗಳನ್ನು ನಿರ್ಮಿಸಿ ಚಿತ್ರೀಕರೀಸಲಾಗಿದೆ.
ಇದುವರೆಗೂ ಸಿನಿಮಾ ನೋಡಿಲ್ಲದವರಿಗೆ ಸಿಹಿಸುದ್ದಿ. 'ಅವನೇ ಶ್ರೀಮನ್ನಾರಾಯಣ' ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ. ಈ ಸಿನಿಮಾ ಜನವರಿಯಲ್ಲೇ ಕಿರುತೆರೆಯಲ್ಲಿ ಪ್ರಸಾರವಾಗಬೇಕಿತ್ತು. ಆದರೆ ಸಿನಿಮಾ ಬಿಡುಗಡೆಯಾಗಿ ಕೇವಲ 25 ದಿನಗಳು ಕೂಡಾ ಆಗಿಲ್ಲ, ಆಗಲೇ ಈ ಚಿತ್ರವನ್ನು ಕಿರುತೆರೆಯಲ್ಲಿ ಪ್ರಸಾರ ಮಾಡುವ ಅಗತ್ಯ ಏನಿದೆ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಈ ಕಾರಣದಿಂದ ಆ ವೇಳೆ ಟಿವಿಯಲ್ಲಿ ಸಿನಿಮಾ ಪ್ರಸಾರವಾಗಿರಲಿಲ್ಲ. ಆದರೆ ಈಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇದೇ ಭಾನುವಾರ ಅಂದರೆ ಮಾರ್ಚ್ 15 ರಂದು ಸಂಜೆ 6 ಗಂಟೆಗೆ ಸಿನಿಮಾ ಪ್ರಸಾರವಾಗಲಿದೆ. ರಕ್ಷಿತ್ ಶೆಟ್ಟಿ ಹಾಗೂ ಶಾನ್ವಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾದಲ್ಲಿ 1980 ರ ದಶಕದಲ್ಲಿ ನಡೆಯುವ ಕಥೆಯನ್ನು ಆ ಕಾಲಘಟ್ಟಕ್ಕೆ ತಕ್ಕಂತ ಸೆಟ್ಗಳನ್ನು ನಿರ್ಮಿಸಿ ಚಿತ್ರೀಕರೀಸಲಾಗಿದೆ.
ವಿಭಿನ್ನ ರೀತಿಯ ಕಥಾ ಶೈಲಿಯನ್ನು ಒಳಗೊಂಡ 'ಅವನೇ ಶ್ರೀಮನ್ನಾರಾಯಣ' ಚಿತ್ರೀಕರಣಕ್ಕಾಗಿ ಅದ್ದೂರಿ ಸೆಟ್ಗಳನ್ನು ಕೂಡಾ ತಯಾರಿಸಲಾಗಿತ್ತು. ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಕೇವಲ ನಟನಾಗಿ ಮಾತ್ರ ಮಿಂಚಿಲ್ಲ, ಬದಲಿಗೆ ಸಿನಿಮಾಕ್ಕೆ ಕಥೆಯನ್ನು ಸ್ವತಃ ಅವರೇ ಬರೆದಿದ್ದಾರೆ. ಛಾಯಾಗ್ರಹಣ ಮತ್ತು ಸಂಗೀತ ಸಂಯೋಜನೆಗೆ ವಿಶೇಷ ಗಮನ ಹರಿಸಲಾಗಿದ್ದು ಈ ಚಿತ್ರವನ್ನು ಇದೀಗ ವೀಕ್ಷಕರು ಕುಟುಂಬದ ಜೊತೆಗೂಡಿ ಮನೆಯಲ್ಲೇ ನೋಡಬಹುದು. ರಕ್ಷಿತ್ ಶೆಟ್ಟಿ ಮತ್ತು ಶಾನ್ವಿ ಅಭಿನಯಕ್ಕೆ ಪ್ರೇಕ್ಷಕರು ಖಂಡಿತಾ ಫಿದಾ ಆಗುವುದು ಗ್ಯಾರಂಟಿ. ಈ ಮುದ್ದಾದ ಜೋಡಿಯ ಜೊತೆಗೆ ಅಚ್ಯುತ್ ರಾವ್ , ಪ್ರಮೋದ್ ಶೆಟ್ಟಿ , ಬಾಲಾಜಿ ಮನೋಹರ್ ಹಾಗೂ ಇನ್ನಿತರರು ತಾರಾಗಣದಲ್ಲಿದ್ದಾರೆ.