ಲಾಕ್ ಡೌನ್ನಿಂದ ಕಿರುತೆರೆ ಹಾಗೂ ಬೆಳ್ಳಿತೆರೆಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳೂ ನಿಂತಿವೆ. ಜನರಿಗೆ ಬೇಸರವಾಗಬಾರದೆಂಬ ಉದ್ಧೇಶದಿಂದ ವಾಹಿನಿಗಳು ಪ್ರೇಕ್ಷಕರ ಮೆಚ್ಚಿನ ಧಾರಾವಾಹಿಯನ್ನು ಮೊದಲ ಎಪಿಸೋಡ್ನಿಂದ ಮರು ಪ್ರಸಾರ ಮಾಡುತ್ತಿದೆ. ಹಳೆಯದಾದ ಜನಪ್ರಿಯ ಕಾರ್ಯಕ್ರಮಗಳನ್ನು ಕೂಡಾ ಪ್ರಸಾರ ಮಾಡುತ್ತಿದೆ.
ಸರಿಗಮಪ ಲಿಟಲ್ ಚಾಂಪ್, ಡ್ರಾಮಾ ಜ್ಯೂನಿಯರ್ಸ್ಗೆ ಆಡಿಷನ್ ಫ್ರಮ್ ಹೋಂ - Audition from home for little champs
ಜೀ ಕನ್ನಡ ವಾಹಿನಿಯ ಸರಿಗಮಪ ಲಿಟಲ್ ಚಾಂಪ್ 18ನೇ ಸಂಚಿಕೆ ಹಾಗೂ ಡ್ರಾಮಾ ಜ್ಯೂನಿಯರ್ಸ್ 4 ನೇ ಸೀಸನ್ಗಾಗಿ ಆಡಿಷನ್ ಫ್ರಮ್ ಹೋಂ ನಡೆಸಲು ನಿರ್ಧರಿಸಿದೆ.
ಈಗ ಜೀ ಕನ್ನಡದ ಜನಪ್ರಿಯ ಸಂಗೀತ ಶೋ ಸರಿಗಮಪ ಲಿಟಲ್ ಚಾಂಪ್ಸ್ ಹಾಗೂ ಡ್ರಾಮಾ ಜ್ಯೂನಿಯರ್ಸ್ ಕಾರ್ಯಕ್ರಮ ಮತ್ತೆ ನಿಮ್ಮನ್ನು ರಂಜಿಸಲು ಬರುತ್ತಿದೆ. ಆದರೆ ಇದು ಹಳೆಯ ಕಾರ್ಯಕ್ರಮವಲ್ಲ, ಪಕ್ಕಾ ಫ್ರೆಶ್ ಎಪಿಡೋಡ್ಗಳು. ಆದರೆ ಇದು ಆರಂಭ ಅಷ್ಟೇ. ಕೊರೊನಾ ವೈರಸ್ ಭೀತಿಯಿಂದ ಅನೇಕರು ವರ್ಕ್ ಫ್ರಮ್ ಹೋಂ ಮಾಡುತ್ತಿದ್ದಾರೆ. ಅದೇ ರೀತಿ ಇಲ್ಲೂ ಕೂಡಾ ಆಡಿಷನ್ ಫ್ರಮ್ ಹೋಂ ನಡೆಯಲಿದೆ. ನಿಮ್ಮ ಮಕ್ಕಳನ್ನು ತೆರೆ ಮೇಲೆ ನೋಡಬೇಕು ಎಂಬ ಆಸೆ ನಿಮಗಿದ್ದರೆ ನೀವು ಮಾಡಬೇಕಿರುವುದು ಇಷ್ಟೇ. ನಿಮ್ಮ ಮಕ್ಕಳ ಹಾಡು, ಹಾಗೂ ಅಭಿನಯದ ತುಣುಕನ್ನು ವಾಟ್ಸಾಪ್ ಮೂಲಕ ಕಳಿಸಿಕೊಡಿ. ಸರಿಗಮಪ ಸೀಸನ್ 18 ಕಾರ್ಯಕ್ರಮವಾದರೆ 9513134434 ಹಾಗೂ ಡ್ರಾಮಾ ಜ್ಯೂನಿಯರ್ಸ್ ಸೀಸನ್ 4 ಆದರೆ 9538066602 ನಂಬರಿಗೆ ಕಳಿಸಿ. ನಿಮ್ಮ ಮಕ್ಕಳು ಆಯ್ಕೆ ಆದರೆ ನಿಮಗೆ ಖಂಡಿತ ಕರೆ ಬರಲಿದೆ.