ಕರ್ನಾಟಕ

karnataka

ETV Bharat / sitara

ಕಿರುಚಿತ್ರದ ಮೂಲಕ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ ಅರುಣ್ ಸಾಗರ್​​​​​ - Arun sagar shortfilm about corona

ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕಿರುಚಿತ್ರಗಳು ತಯಾರಾಗುತ್ತಲೇ ಇವೆ. ಇದೀಗ ಖ್ಯಾತ ಕಲಾನಿರ್ದೇಶಕ ಅರುಣ್ ಸಾಗರ್ ಕೂಡಾ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ 3:37 ನಿಮಿಷ ಅವಧಿಯ ಮೂಕಿ ಕಿರುಚಿತ್ರ ಮಾಡಿದ್ದಾರೆ.

Arun sagar new short film
ಅರುಣ್ ಸಾಗರ್

By

Published : Jul 22, 2020, 12:10 PM IST

ಕಲಾ ನಿರ್ದೇಶಕ ಅರುಣ್ ಸಾಗರ್​ ರಂಗ ನಿರ್ದೇಶಕ , ನಿರೂಪಕ, ನಿರ್ದೇಶಕ ಆಗಿ ಹೆಸರಾದವರು. ಇವರ ಹಾಸ್ಯಕ್ಕೇನೂ ಕಡಿಮೆ ಇಲ್ಲ. ಬಿಗ್​​ ಬಾಸ್​​​​ನಲ್ಲಿ ಇದ್ದಾಗ ಅರುಣ್ ಸಾಗರ್ ವೀಕ್ಷಕರನ್ನು ಹೇಗೆ ನಕ್ಕು ನಲಿಸುತ್ತಿದ್ದರು ಎಂಬುದನ್ನು ನೀವೇ ನೋಡಿದ್ದೀರಿ. ಅರುಣ್ ತಮ್ಮದೇ ಆದ ಕಲಾ ನಿರ್ದೇಶನ ಶಾಲೆ ಕೂಡಾ ನಡೆಸುತ್ತಿದ್ದಾರೆ.

ಲಾಕ್​ ಡೌನ್ ಸಮಯದಲ್ಲಿ ಅರುಣ್ ಸಾಗರ್ ಕೊರೊನಾ ಬಗ್ಗೆ ಒಂದು ಹಾಡು ರಚಿಸಿ ಯೂಟ್ಯೂಬ್​​​ನಲ್ಲಿ ಅಪ್​​ಲೋಡ್ ಮಾಡಿದ್ದರು. ಮೈಮ್​​ ಪ್ರದರ್ಶನದಲ್ಲೂ ಅರುಣ್ ಸಾಗರ್ ಎತ್ತಿದ ಕೈ. ಇದೀಗ ಅರುಣ್ ಸಾಗರ್ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ 3:37 ನಿಮಿಷ ಅವಧಿಯ ಪುಟ್ಟ ಕಿರುಚಿತ್ರ ಮಾಡಿ ಬಿಡುಗಡೆ ಮಾಡಿದ್ದಾರೆ.

'ಸಮಾಜವನ್ನ ಕಾಯುವ ಮುನ್ನ ನಾವು ಜಾಗೃತರಾದರೆ ಚೆನ್ನ' ಎಂಬ ಈ ಕಿರುಚಿತ್ರದಲ್ಲಿ ಡೈಲಾಗ್​​ಗಳಿಲ್ಲ. ಕಾನ್ಸ್​​ಟೇಬಲ್ ಒಬ್ಬರು ಮನೆಯಿಂದ ಹೊರಟಾಗಿನಿಂದ ಮತ್ತೆ ಮನೆಗೆ ವಾಪಸ್ ಬರುವವರೆಗೆ ಏನೆಲ್ಲಾ ಕೆಲಸ ಮಾಡುತ್ತಾರೆ ಹಾಗೂ ಆ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಜರ್ ಬಳಸುವ ಮೂಲಕ ಜಾಗೃತರಾಗಿರುವಂತೆ ಎಚ್ಚರಿಸಲು ಮೈಮ್ ಪಾತ್ರಧಾರಿ ಅರುಣ್ ಕಾನ್ಸ್​​ಟೇಬಲ್ ಜೊತೆಗೆ ಇರುತ್ತಾರೆ.

ಕಿರುಚಿತ್ರದಲ್ಲಿ ಅರುಣ್ ಸಾಗರ್, ಕಾನ್ಸ್​​​ಟೇಬಲ್ ನಾಗರಾಜು, ಬಾಲನಟಿ ಅಮ್ಮುಲು ಹಾಗೂ ಇನ್ನಿತರರು ನಟಿಸಿದ್ದಾರೆ. ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ಡಿಸಿಪಿ ಇಶಾ ಪಂತ್, ಸಮಾಜ ಸೇವಕ ವಾಸು ಅವರು ಅರುಣ್ ಸಾಗರ್ ಅವರ ಈ ಪ್ರಯತ್ನಕ್ಕೆ ಕೈ ಜೋಡಿಸಿದ್ದಾರೆ.

ABOUT THE AUTHOR

...view details