ಕರ್ನಾಟಕ

karnataka

ETV Bharat / sitara

ದಿ ಗ್ರೇಟ್‌ ಖಲಿರಿಂದ ಕುಸ್ತಿ ಕಲಿತು ರೆಸ್ಲರ್‌ ಆಗಲು ಹೊರಟ ಬಿಗ್‌ ಬಾಸ್‌ ಖ್ಯಾತಿಯ ಅರ್ಶಿ ಖಾನ್‌..! - ಕುಸ್ತಿ ಕಲಿಯುತ್ತಿರುವ ಮಾಡೆಲ್‌ ಅರ್ಶಿ ಖಾನ್‌

ಬಿಗ್‌ ಬಾಸ್‌ ಖ್ಯಾತಿಯ ಹಾಗೂ ಮಾಡೆಲ್‌ ಅರ್ಶಿ ಖಾನ್‌ ದಿ ಗ್ರೇಟ್‌ ಖಲಿ ಅವರ ಬಳಿಕ ಕುಸ್ತಿ ಕಲಿಯಲು ಮುಂದಾಗಿದ್ದು, ಮನಂರಜನಾ ಕ್ಷೇತ್ರ ಹಾಗೂ ಕ್ರೀಡೆ ಎರಡರಲ್ಲೂ ಮುಂದುವರೆಯಬೇಕೆಂಬ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

Arshi Khan learns wrestling skills from The Great Khali
ದಿ ಗ್ರೇಟ್‌ ಖಲಿರಿಂದ ಕುಸ್ತಿ ಕಲಿತು ರೆಸ್ಲರ್‌ ಆಗಲು ಹೊರಟ ಬಿಗ್‌ ಬಾಸ್‌ ಖ್ಯಾತಿಯ ಅರ್ಶಿ ಖಾನ್‌..!

By

Published : Mar 29, 2022, 7:43 AM IST

ಮುಂಬೈ: ಹಿಂದಿ ಅವೃತ್ತಿಯ ಬಿಗ್‌ಬಾಸ್‌ ಖ್ಯಾತಿಯ ಅರ್ಶಿ ಖಾನ್‌ ದಿ ಗ್ರೇಟ್‌ ಖಲಿ ಅವರಿಂದ ಕುಸ್ತಿ ಕೌಶಲ್ಯಗಳನ್ನು ಕಲಿಯುತ್ತಿದ್ದಾರೆ. ಕುಸ್ತಿ ಕಲಿಯುತ್ತಿರುವ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು, ಭಾರಿ ವೈರಲ್‌ ಆಗಿದೆ.

ಖಲಿ ನನ್ನ ಸ್ನೇಹಿತ ಮತ್ತು ಅವನು ನನಗೆ ಕುಸ್ತಿ ಕಲಿಯಲು ಸ್ಫೂರ್ತಿ ನೀಡಿದ್ದಾರೆ. ಶೀಘ್ರದಲ್ಲೇ ನಾನು ಅವರ ತರಗತಿಗಳಿಗೆ ಹಾಜರಾಗುತ್ತೇನೆ. ಆ ಬಳಿಕ ವೃತ್ತಿಪರವಾಗಿ ಕ್ರೀಡೆಯಲ್ಲಿ ತೊಡಗುತ್ತೇನೆ. ನಾನು ಭಾರಿ ಉತ್ಸುಕಳಾಗಿದ್ದು, ಕುಸ್ತಿ ಕಲಿಯುವುದನ್ನು ಎದುರು ನೋಡುತ್ತಿದ್ದೇನೆ ಎಂದು ಅರ್ಶಿ ಹೇಳಿದ್ದಾರೆ.

ಮನರಂಜನಾಗಾರ್ತಿಯಾದ ನಂತರ ನಾನು ಈಗ ಕ್ರೀಡೆಯ ಭಾಗವಾಗಲು ಬಯಸುತ್ತೇನೆ. ಇದು ಮತ್ತೊಂದು ಹಂತದ ಯಶಸ್ಸನ್ನು ಸಾಧಿಸಿದಂತಾಗುತ್ತದೆ. ಆದರೆ, ನಾನು ನನ್ನ ಪ್ರೇಕ್ಷಕರನ್ನು ರಂಜಿಸುವುದನ್ನು ಬಿಟ್ಟುಬಿಡುತ್ತೇನೆ ಎಂದಲ್ಲ. ಎರಡೂ ಕಲೆಗಳನ್ನೂ ಪ್ರದರ್ಶಿಸುತ್ತೇನೆ ಮತ್ತದನ್ನು ಆನಂದಿಸುತ್ತೇನೆ. ಇದೀಗ, ನಾನು ನನ್ನ ಜೀವನದಲ್ಲಿ ಎರಡನ್ನೂ ಹೊಂದಿಸಲು ಪ್ರಯತ್ನಿಸುತ್ತಿದ್ದೇನೆ ಎಂದಿದ್ದಾರೆ. ಖಲಿ ಅವರಿಂದ ಕುಸ್ತಿ ಕಲಿಯುತ್ತಿರುವ ಫೋಟೋಗಳನ್ನು ಅರ್ಶಿ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ವಾಹ್ ವಾಟ್ ಎ ರೆಸ್ಲರ್ @thegreatkhali ಎಂಬ ಶೀರ್ಷಿಕೆಯನ್ನು ಬರೆದಿದ್ದಾರೆ.

ಇದನ್ನೂ ಓದಿ:Oscars 2022; ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ತಾರೆಯರ ಪಟ್ಟಿ ಹೀಗಿದೆ..

ABOUT THE AUTHOR

...view details