ಕರ್ನಾಟಕ

karnataka

ETV Bharat / sitara

ಫಿನಾಲೆಗೂ ಮುನ್ನವೇ ಎರಡು ಲಕ್ಷ ರೂ. ನಗದು ಗೆದ್ದ ಅರವಿಂದ್ - ಬಿಗ್​ಬಾಸ್​ ರಿಯಾಲಿಟಿ ಶೋ

ಟಾಸ್ಕ್ ಮಾತ್ರವಲ್ಲದೆ ಅರವಿಂದ್ ತಮ್ಮ ವ್ಯಕ್ತಿತ್ವ ಹಾಗೂ ಕನ್ನಡ ಭಾಷೆಯ ಬಳಕೆ ಮೂಲಕವೂ ಅರವಿಂದ್ ಕೆ.ಪಿ. ಮನೆಮಾತಾಗಿದ್ದಾರೆ.

aravind-won-rupees-2-lakh-prize-in-bigg-boss
ಫಿನಾಲೆಗೂ ಮುನ್ನ ಎರಡು ಲಕ್ಷ ರೂ. ನಗದು ಗೆದ್ದ ಅರವಿಂದ್

By

Published : Aug 7, 2021, 12:57 AM IST

ಬಿಗ್​ಬಾಸ್ ಸೀಸನ್ 8ರ ಕೊನೆಯ ವಾರದ ವೈಯಕ್ತಿಕ ಟಾಸ್ಕ್​​ನಲ್ಲಿ‌ ಟಾಪ್​ನಲ್ಲಿದ್ದ ಅರವಿಂದ್ ಕೆ.ಪಿ. ಎರಡು ಲಕ್ಷ ರೂಪಾಯಿ ಗೆದ್ದಿದ್ದಾರೆ. ಅರವಿಂದ್ ಎಲ್ಲಾ ಟಾಸ್ಕ್​ಗಳಲ್ಲೂ ಅಂಕಗಳಿಸಿ ಮೊದಲ ಸ್ಥಾನ ಪಡೆದಿದ್ದು, ನಗದು ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ.

ಟಾಸ್ಕ್ ಮಾತ್ರವಲ್ಲದೆ ಅರವಿಂದ್ ತಮ್ಮ ವ್ಯಕ್ತಿತ್ವ ಹಾಗೂ ಕನ್ನಡ ಭಾಷೆಯ ಬಳಕೆ ಮೂಲಕವೂ ಮನೆಮಾತಾಗಿದ್ದಾರೆ. ವಿದೇಶಗಳಲ್ಲೂ ತಮ್ಮ ಛಾಪು ಮೂಡಿಸಿದ್ದರೂ ಕೂಡ ಬಿಗ್​ಬಾಸ್ ಮನೆಯಲ್ಲಿ ಕನ್ನಡವನ್ನೇ ಹೆಚ್ಚಾಗಿ ಬಳಸುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ.

ನಾಮಿನೇಷನ್ ಆಗಿ, ಎಲಿಮಿನೇಷನ್ ಸಂದರ್ಭದಲ್ಲಿ ಪ್ರತಿ ಬಾರಿಯೂ ಅರವಿಂದ್ ಮೊದಲಿಗರಾಗಿ ಸೇವ್ ಆಗುತ್ತಿದ್ದರು. ಕೊನೆ ವಾರದಲ್ಲಿ ನಡೆದ ಕೊನೆ ಎಲಿಮಿನೇಷನ್ ಸುತ್ತಿನಲ್ಲಿ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಟಾಪ್ ಸ್ಥಾನದಲ್ಲಿದ್ದಾರೆ ಎನ್ನಲಾಗಿದೆ.

ಶನಿವಾರ ನಡೆಯಲಿರುವ ಫಿನಾಲೆಯಲ್ಲಿ ಬಿಗ್​ಬಾಸ್ ಮನೆಯ ಟಾಪ್ ಇಬ್ಬರು ಸ್ಪರ್ಧಿಗಳಲ್ಲಿ ಅರವಿಂದ್ ಕೆ.ಪಿ. ಅವರನ್ನು ಕಾಣಬಹುದು ಎನ್ನಲಾಗುತ್ತಿದೆ. ವಿನ್ನರ್​ ಯಾರಾಗಲಿದ್ದಾರೆ ಎಂಬ ಕುತೂಹಲ ನೋಡುಗರದ್ದಾಗಿದೆ.

ಇದನ್ನೂ ಓದಿ:ಸ್ನಾನ ಗೃಹದಲ್ಲಿ ಜಾರಿ ಬಿದ್ದ ಹಿರಿಯ ನಟಿ ಡಾ. ಲೀಲಾವತಿ ಬೆನ್ನುಮೂಳೆಗೆ ಸಣ್ಣ ಪೆಟ್ಟು: ಒಂದು ತಿಂಗಳ ವಿಶ್ರಾಂತಿ

ABOUT THE AUTHOR

...view details